ಬಂಡ್ರಿ ಕೆಪಿಎಸ್ ಶಾಲೆಯಲ್ಲಿ ಕಂಡುಬಂದ ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ:ಡಾ.ರಾಘವೇಂದ್ರ,

0
782

ಸಂಡೂರು:ಜ:31:-ತಾಲೂಕಿನ ಬಂಡ್ರಿ ಕೆ.ಪಿ.ಎಸ್ ಮತ್ತು ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು ಅದರಲ್ಲಿ ಹನ್ನೊಂದು ಮಕ್ಕಳು ಕಾಟಿನಕಂಬ, ಉತ್ತರಮಲೈ, ಗಿರೇನಹಳ್ಳಿಗೆ ಸೇರಿದವರಾಗಿದ್ದು, ಆ ಮಕ್ಕಳಿಗೆ ಟ್ರಿಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮಾಡಲು ಗ್ರಾಮೋದಯ ಎಮ್.ಎಮ್.ಯು ಟೀಮ್ ನಿಯೋಜಿಸಲಾಗಿದ್ದು,ತಂಡವು ಇಂದು ಗ್ರಾಮಗಳಿಗೆ ಬೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿ, ಪಲ್ಸ್ ರೇಟ್, ಆಕ್ಸಿಜನ್ ಲೆವೆಲ್, ಟೆಂಪರೇಚರ್ ಚೆಕ್ ಮಾಡಿ ಹೋಮ್ ಐಸೋಲೇಷನ್ ಮಾಡಲಾಗಿದೆ,

ಕೋವಿಡ್ ರೋಗಲಕ್ಷಣಗಳು ಸಾಮಾನ್ಯವಾಗಿದ್ದು ಮೆಡಿಸಿನ್ ಕಿಟ್ ನೀಡಲಾಗಿದೆ ಆತಂಕ ಪಡಬೇಡಿ,ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ, ಯಾವುದೇ ಮಗುವಿಗೂ ಅಪಾಯದ ಸೂಚನೆ ಕಂಡು ಬರಲಿಲ್ಲ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಬಂಡ್ರಿಯ ಗ್ರಾಮೋದಯ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ರಾಘವೇಂದ್ರ, ಶುಶ್ರೂಷಣಾಧಿಕಾರಿ ರವಿಕುಮಾರ್, ನಾಗವೇಣಿ, ಲ್ಯಾಬ್ ತಂತ್ರಜ್ಞೆ ಮಮತಾ, ಸತೀಶ್, ಆಶಾ ಕಾರ್ಯಕರ್ತೆಯರಾದ ಅನಿತಾ, ಲಾವಣ್ಯ ಇತರರು ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here