ಕಚ್ಛಾತೈಲ ದರ ತಗ್ಗಿಸುವಂತೆ ಒಪೆಕ್‌ಗೆ ಮನವಿ ಸಲ್ಲಿಸಿದ ಭಾರತ

0
425

ಪೆಟ್ರೋಲ್‌ ಡೀಸೆಲ್‌ ದರ ದಾಖಲೆಯ ಎತ್ತರ ಏರಿರುವ ಹಿನ್ನೆಲೆಯಲ್ಲಿ ಭಾರತ ಅಂತಾರಾಷ್ಟ್ರೀಯ ಕಚ್ಚಾ ತೈಲ ದರವನ್ನು ಇಳಿಸುವಂತೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್‌ಗೆ ಒತ್ತಾಯಿಸಿದೆ. ತೈಲೋತ್ಪಾದನೆ ಕಡಿತಗೊಳಿಸುವುದನ್ನು ಕೈಬಿಟ್ಟು, ಉತ್ಪಾದನೆಯನ್ನು ಹೆಚ್ಚಿಸಿ ತೈಲ ದರ ಇಳಿಸಬೇಕು ಎಂದು ಸೌದಿ ಅರೇಬಿಯಾ ಸೇರಿದಂತೆ ಒಪೆಕ್‌ ರಾಷ್ಟ್ರಗಳನ್ನು ಭಾರತ ಒತ್ತಾಯಿಸಿದೆ.ಈ ಸಂಬಂಧ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ಅವರು ಒಪೆಕ್‌ನ ಪ್ರಧಾನ ಕರ‍್ಯರ‍್ಶಿ ಮಹಮ್ಮದ್‌ ಸನೌಸಿ ಬರ‍್ಕಿಂಡೊ ಅವರ ಜತೆ ಮಾತುಕತೆ ನಡೆಸಿದ್ದಾರೆ. ಭಾರತವು ಹೆಚ್ಚು ಆಮದು ಮಾಡಿಕೊಳ್ಳುವ ಬ್ರೆಂಟ್‌ ಕಚ್ಚಾ ತೈಲದ ದರ ಪ್ರತಿ ಬ್ಯಾರಲ್‌ಗೆ 75 ಡಾಲರ್‌ಗೆ ಜಿಗಿದಿದೆ. ಇದು 2019 ರಿಂದ ಗರಿಷ್ಠ ಪ್ರಮಾಣವಾಗಿದೆ. ಕಚ್ಚಾ ತೈಲ ದರ ಏರಿಕೆಯ ಪರಿಣಾಮ ಗ್ರಾಹಕರಿಗೆ ಸಮಸ್ಯೆಯಾಗಿದೆ. ಜತೆಗೆ ಆರ್ಥಿಕತೆಗೂ ಇದು ಹೊಡೆತ ನೀಡುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 101 ರೂ. ಹಾಗೂ ಮುಂಬಯಿನಲ್ಲಿ 103 ರೂ.ಗೆ ಏರಿಕೆಯಾಗಿರುವುದನ್ನು ಸ್ಮರಿಸಬಹುದು.

LEAVE A REPLY

Please enter your comment!
Please enter your name here