ರೈತರ ಬೇಸಾಯದ ತಾಂತ್ರಿಕ ಸಮಸ್ಯೆ ನಿವಾರಣೆಗೆ ಕೃಷಿ ಇಲಾಖೆ ಕೈಗೊಂಡ ಕಾರ್ಯ ಉತ್ತಮವಾಗಿವೆ: ಜಿ.ಶಿವನಗೌಡರ

0
155

ಧಾರವಾಡ.ಜೂ. 26: ರೈತರು ಕೃಷಿ ಕಾರ್ಯಗಳಲ್ಲಿ ದಿನನಿತ್ಯ ಎದುರಿಸುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕೈಗೊಂಡ ಕಾರ್ಯಗಳು ಉತ್ತಮವಾಗಿವೆ ಎಂದು ನೂತನವಾಗಿ ಆಯ್ಕೆಯಾಗಿರುವ ಬೆಂಗಳೂರು ಪ್ರದೇಶ ಕೃಷಿಕ ಸಮಾಜ ಆಡಳಿತ ಅಧ್ಯಕ್ಷ ಜಿ. ಶಿವನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ನಿನ್ನೆ (ಜೂ 25) ಮಧ್ಯಾಹ್ನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಕೃಷಿಕ ಸಮಾಜ ಹಾಗೂ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ರೈತ ಬಾಂಧವರ ತಾಂತ್ರಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕೈಗೊಂಡ ಕಾರ್ಯಗಳು ರೈತರು ಉತ್ತಮ ಬೆಳೆ ಬೆಳೆದು, ಹೆಚ್ಚಿನ ಆದಾಯ ಪಡೆಯಲು ಅನಕೂಲವಾಗುತ್ತಿದೆ. ಅನೇಕ ರೀತಿಯ ಬೀಜ, ಗೊಬ್ಬರ, ಕೀಟ ನಾಶಕಗಳನ್ನು ಕೆಲವು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಇದರಿಂದಾಗಿ ಬೆಳೆಗಳಿಗೆ ವಿವಿಧ ರೀತಿಯ ರೋಗಗಳು ಬೆಳೆ ತೆಗೆದು ರಾಶಿ ಮಾಡುವವರೆಗೆ ರೈತರಿಗೆ ತೊಂದರೆ ಕೊಡುತ್ತವೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಸಕಾಲಕ್ಕೆ ರೈತರಿಗೆ ಈ ಕುರಿತು ಮಾಹಿತಿ ನೀಡಿ, ತಕ್ಷಣಕ್ಕೆ ಸ್ಪಂದಿಸುತ್ತದೆ. ಸೂಕ್ತ ಔಷಧಿಗಳನ್ನು ಶಿಫಾರಸು ಮಾಡುವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಸವರಾಜ ಕುಂದಗೋಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ. ಬಿಜಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಇಲಾಖೆ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಂಯೋಗದೊಂದಿಗೆ ಕೈಗೊಳ್ಳಲಾಗುತ್ತಿರುವ ಕೃಷಿಕ ಸಮಾಜದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಂತರ ಅಗಲಿದ ಕೃಷಿಕ ಸಮಾಜದ ಗಣ್ಯರಾದ ಕುಂದಗೋಳ ಜಿಲ್ಲಾ ಪ್ರತಿನಿದಿ ದಿ. ಕೆ.ಎನ್. ಪಾಟೀಲ, ಮತ್ತು ನವಲಗುಂದ ತಾಲೂಕಾ ಅಧ್ಯಕ್ಷ ದಿ. ಕೃಷ್ಣಾ ಪಾಟೀಲ ಇವರಿಗೆ ಒಂದು ನಿಮಿಷದ ಮೌನಾಚರಣೆ ಮಾಡಿ ಸಂತಾಪವನ್ನು ಸೂಚಿಸಿದರರು.
ನಂತರ ಕೃಷಿ, ತೋಟಗಾರಿಗೆ, ಕೃಷಿ ವಿಜ್ಞಾನ ಕೇಂದ್ರ, ರೇಷ್ಮೇ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಸಭೆಗೆ ತಮ್ಮ ಇಲಾಖೆಯ ಕಾರ್ಯ ಚಟುವಟಿಕೆಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ವಿವರಿಸಿದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ ಉಪ ಕೃಷಿ ನಿರ್ದೇಶಕಿ ಸ್ಮೀತಾ ಆರ್., ಮಂಜುನಾಥ ಅಂತರವಳ್ಳಿ ಉಪಸ್ಥಿತರಿದ್ದರು.

ಅರವಿಂದ ಕಟಗಿ ಸ್ವಾಗತಿಸಿದರು. ರಾಘವೇಂದ್ರ ಬಮ್ಮಿಗಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಸಿದರು.

LEAVE A REPLY

Please enter your comment!
Please enter your name here