ವಿಕ್ರಮ್ ಅತಿಥಿಗೃಹಕ್ಕೆ ವಿಮ್ಸ್ ನ ಕೋವಿಡ್ ಲಸಿಕಾ ಕೇಂದ್ರದ ಸ್ಥಳಾಂತರ

0
89

ಬಳ್ಳಾರಿ,ಆ.09:ವಿಮ್ಸ್ ನ ಬಿ.ಸಿ.ರಾಯ್ ಉಪನ್ಯಾಸ ಸಂಕೀರ್ಣದಲ್ಲಿ ಇಲ್ಲಿಯವರೆಗೆ ಸುಮಾರು 30 ಸಾವಿರ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುವ ಗುರಿ ಇದೆ ಎಂದು ವಿಮ್ಸ್ ನ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಅವರು ಹೇಳಿದರು.

ವಿಮ್ಸ್ ನ ಬಿ.ಸಿ.ರಾಯ್ ಉಪನ್ಯಾಸ ಸಂಕೀರ್ಣದಲ್ಲಿ ನಡೆಯುತ್ತಿದ್ದ ಕೋವಿಡ್ ಲಸಿಕಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ವಿಮ್ಸ್ ಆವರಣದಲ್ಲೇ ಇರುವ ವಿಕ್ರಮ್ ಅತಿಥಿ ಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಸ್ಥಳಾಂತರಗೊಂಡ ಲಸಿಕಾ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದ್ಯ ವೈದ್ಯಕೀಯ ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾಗಿದ್ದು ಬಿ.ಸಿ ರಾಯ್ ಉಪನ್ಯಾಸ ಸಂಕೀರ್ಣವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಟ್ಟು, ಲಸಿಕೆ ಪಡೆಯಲು ಸಾರ್ವಜನಿಕರೆ ತೊಂದರೆ ಆಗದಂತೆ ಹತ್ತಿರದಲ್ಲಿರುವ ವಿಕ್ರಮ್ ಅತಿಥಿ ಗೃಹಕ್ಕೆ ಸ್ಥಳಾತರಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕ ಹಾಗೂ ಮಿಣಿ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ, ಲಸಿಕಾ ಕೇಂದ್ರದ ನೋಡಲ್ ಅಧಿಕಾರಿ ಡಾ.ಬೆಲ್ಲರ ರಾಘವೇಂದ್ರ, ಡಾ.ಅನೀಸ್ ಉರ್ ರೆಹಮಾನ್, ಕೇಂದ್ರದ ಶುಶ್ರೂಷಕರು ಹಾಗೂ ಗಣಕಯಂತ್ರ ಸಹಾಯಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here