ಕೊರೊನಾ ಕಮ್ಮಿಯಾಗುತ್ತಲೇ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ನ ಅಟ್ಟಹಾಸ!

0
175

ಬೆಂಗಳೂರಿನಲ್ಲಿ ಕೊರೋನಾ ಕಡಿಮೆಯಾಯ್ತು ಅಂತ ನಿಟ್ಟುಸಿರು ಬಿಡೋ ಅಷ್ಟರಲ್ಲಿ, ಇದೀಗ ಬ್ಲ್ಯಾಕ್ ಫಂಗಸ್ ಹೆಚ್ಚು ಆತಂಕವನ್ನುಂಟು ಮಾಡ್ತಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗ್ತಿದೆ. ಹೀಗಾಗಿ ಕೊರೋನಾ ಕಮ್ಮಿಯಾಯ್ತು ಅಂತ ಜನರು ಯಾಮಾರಿದ್ರೆ ಈ ಬ್ಲ್ಯಾಕ್ ಫಂಗಸ್‌ಗೆ ತುತ್ತಾಗ್ಬೇಕಾಗುತ್ತೆ.

ಹೌದು, ಕೋವಿಡ್‌ನಿಂದ ಚೇತರಿಕೆ ಕಂಡವರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚು ಕಾಣಿಸಿಕೊಳ್ಳೋಕೆ ಆರಂಭವಾಗಿತ್ತು. ಇದ್ರ ಬೆನ್ನಲ್ಲೇ ನಗರದಲ್ಲಿ ಮೊದಲಿಗೆ 4 ಪ್ರಕರಣಗಳು ಕಂಡು ಬಂದ್ವು, ಇದು ಸರಿಯಾಯ್ತು. ಇನ್ನೇದು ಇದ್ರ ಟೆನ್ಷನ್ ಇರೋದಿಲ್ಲ ಅನ್ನೋದ್ರ ಬೆನ್ನಲ್ಲೆ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ಡೆತ್ ಹಾಗೂ ಮತ್ತಷ್ಟು ಪ್ರಕರಣಗಳು ಹೆಚ್ಚುತ್ತಲೇ ಹೋಗಿದೆ‌. ಕೊರೋನಾನೇ ಕಡಿಮೆಯಾದ್ರೂ ಇದ್ರ ಆರ್ಭಟಕ್ಕೆ ಬ್ರೇಕ್ ಬಿದ್ದಿಲ್ಲ.

ರಾಜ್ಯದ 7 ಜಿಲ್ಲೆಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿದ್ದು, ಅದರಲ್ಲಿ ಮೊದಲ ಸ್ಥಾನ ಬೆಂಗಳೂರಿನದ್ದೇ ಆಗಿದೆ. ನಗರದಲ್ಲೇ ಬ್ಲ್ಯಾಕ್ ಫಂಗಸ್ ಕೇಸ್‌ಗಳು ಸಾವಿರದ ಗಡಿಯತ್ತ ಹೋಗ್ತಿದ್ದು, ಬೆಂಗಳೂರಿನಲ್ಲೇ ಬರೋಬ್ಬರಿ 1039 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ.

ಸುಮಾರು 855 ಜನರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, 1088 ಮಂದಿಯಲ್ಲಿ ಕೇವಲ 124 ಜನರು ಮಾತ್ರ ಗುಣಮುಖರಾಗಿದ್ದಾರೆ. ಇನ್ನು ಇದುವರೆಗೂ ಬೆಂಗಳೂರಿನಲ್ಲೇ 101 ಮಂದಿಯನ್ನು ಬ್ಲ್ಯಾಕ್ ಫಂಗಸ್‌ ಬಲಿ ಪಡೆದಿದೆ. ಇದ್ರಿಂದ ಆರೋಗ್ಯ ಇಲಾಖೆಗೆ ಮತ್ತಷ್ಟು ಟೆನ್ಷನ್ ಹೆಚ್ಚಿಸಿದೆ.

ಇದಷ್ಟೇ ಅಲ್ಲದೆ ಮಿಂಟೋ‌ ಕಣ್ಣಿನ ಆಸ್ಪತ್ರೆಯಲ್ಲೇ ಸುಮಾರು 27 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. 15 ಜನರಿಗೆ ಫಂಗಸ್ ಕಣ್ಣಿಗೆ ವ್ಯಾಪಿಸಿದ್ದು, ಕಣ್ಣು ತೆಗೆಯುವ ಸಾಧ್ಯತೆ ಕೂಡಾ ಇದೆ.

ಇಡೀ ರಾಜ್ಯದಲ್ಲೇ  ಇದುವರೆಗೂ 3446 ಪ್ರಕರಣಗಳು ಪತ್ತೆಯಾಗಿದ್ದು, 298 ಮಂದಿಯ ಸಾವಾಗಿದ್ರೆ, ಅದರಲ್ಲಿ ಸಿಂಹಪಾಲು ಬೆಂಗಳೂರಿನದ್ದೇ ಇದೆ. ಹೀಗಾಗಿ ನಗರದಲ್ಲಿ ಕೊರೋನಾ ಆತಂಕ ಹೋದ್ರೂ ಬ್ಲ್ಯಾಕ್ ಫಂಗಸ್ ಕಾಟ ತಪ್ಪಿಲ್ಲ.

ಬ್ಲ್ಯಾಕ್ ಫಂಗಸ್ ಕಾಟ ದಿನೇ ದಿನೇ ಹೆಚ್ಚಳವಾಗಿದ್ದು, ಜನರು ಆತಂಕ ಪಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸರ್ಕಾರ ಮತ್ತಷ್ಟು ಎಚ್ಚರ ವಹಿಸಿ ಇದಕ್ಕೆ ಕಡಿವಾಣ ಹಾಕ್ಬೇಕಿದೆ.

LEAVE A REPLY

Please enter your comment!
Please enter your name here