ಭಾರತದ ದಾಖಲೆ ಪುಸ್ತಕಕ್ಕೆ ಸೇರಿದ ಜಾಗೃತಿ ಓಟಗಾರ ಮೋಹನ್ ಕುಮಾರ್ ದಾನಪ್ಪ!

0
689

ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರ 72ನೇ ಜನ್ಮ ದಿನದ ಅಂಗವಾಗಿ ಸೆಪ್ಟೆಂಬರ್ 17, 2022 ರಂದು ನವದೆಹಲಿಯಲ್ಲಿ ಮತದಾನದ ಜಾಗೃತಿಗಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪನವರು ನವದೆಹಲಿಯ ಕರ್ನಾಟಕ ಭವನದಿಂದ ಕೆಂಪು ಕೋಟೆವರೆಗೂ ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈನಲ್ಲಿ ಕರ್ನಾಟಕ ಧ್ವಜ ಹಿಡಿದು ತಡೆರಹಿತರವಾಗಿ ನಿರಂತರ 3 ಗಂಟೆ 22 ನಿಮಿಷಗಳ ಕಾಲಾವಧಿಯಲ್ಲಿ 28.43 ಕಿಲೋ ಮೀಟರ್ ಓಡುವ ಮೂಲಕ ವಿನೂತನ ಮ್ಯಾರಥಾನ್ ಓಟ ನಡೆಸಿರುವುದನ್ನ ಪರಿಗಣಿಸಿದ ಐಬಿಆರ್ ಸಂಸ್ಥೆಯ ಸಂಪಾದಕೀಯ ಮಂಡಳಿಯು ಸೆಪ್ಟೆಂಬರ್ 20, 2022 ರಂದು ದಾಖಲೆಗಳನ್ನ ಪರಿಶೀಲಿಸಿ ದೃಢೀಕರಿಸಿ ಆಯ್ಕೆ ಮಾಡಿ ಅನುಮೋದಿಸಿ ಭಾರತ ದಾಖಲೆ ಪುಸ್ತಕ (ಇಂಡಿಯಾ ಬುಕ್ ಆಫ್ ರೆಕಾರ್ಡ್)ಕ್ಕೆ ಮೋಹನ್ ಕುಮಾರ್ ದಾನಪ್ಪನವರನ್ನ ಸೇರ್ಪಡಿಸಲಾಗಿದೆ!

ಮೋಹನ್ ಕುಮಾರ್ ದಾನಪ್ಪನವರು ಸದರಿ ಓಟದಲ್ಲಿ ತೋರಿದ ತಾಳ್ಮೆ ಹಾಗೂ ಪ್ರಯತ್ನ, ಇವರ ಕೌಶಲ್ಯವನ್ನ ಪ್ರಶಂಸಿಸಿ ಅಂಗೀಕರಿಸಲಾಗಿದೆ ಶೀಘ್ರದಲ್ಲೇ ಅಧಿಕೃತ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನ ಮೋಹನ್ ಕುಮಾರ್ ರವರಿಗೆ ಕಳುಹಿಸಲಾಗುವುದೆಂದು ಐಬಿಆರ್ ಸಂಸ್ಥೆಯು ತಿಳಿಸಿದೆ!

LEAVE A REPLY

Please enter your comment!
Please enter your name here