ಮರಳು ನೀತಿ ಜಾರಿಗೆ ಗ್ರಾಪಂ ಅಧ್ಯಕ್ಷರ ಒತ್ತಾಯ.!!!

0
138

ಹಾಯ್ ಸಂಡೂರ್, ನ್ಯೂಸ್.
ಕೊಟ್ಟೂರು. ಜುಲೈ.20.ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ ಮರೂರು,ಹರಾಳು ಹಳ್ಳದಲ್ಲಿ ಮರಳು ನಿಕ್ಷೇಪವಿದ್ದು.ಇದ್ದು ಅದನ್ನು ಸರ್ಕಾರ ವಶ ಪಡಿಸಿಕೊಳ್ಳುವಂತೆ ಗ್ರಾಪಂ ಅಧ್ಯಕ್ಷ ಕೊಟ್ರೇಶ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಜಿ. ಅನಿಲ್ ಕುಮಾರ್ ಗೆ ಮಂಗಳವಾರ ಮಾನವಿ ಸಲ್ಲಿಸಿದ ಅಧ್ಯಕ್ಷ ಕೊಟ್ರೇಶಪ್ಪ ಹಾಗೂ ಗ್ರಾಮದ ಮುಖಂಡರಾದ ರಾಜಯ್ಯ. ಸುರೇಶ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಗ್ರಾಪಂ ವ್ಯಾಪ್ತಿಯ ಮರೂರು ಮತ್ತು ಹರಾಳು ಗ್ರಾಮದ ಹಳ್ಳದಲ್ಲಿ ವರ್ಷದ ಹಿಂದೆಯೇ ಕಂದಾಯ ಇಲಾಖೆ. ಭೂ ಮತ್ತು ಗಣಿ ಇಲಾಖೆ. ಸಣ್ಣ ನೀರಾವರಿ ಇಲಾಖೆ. ತಾಪಂ ಇಒ ಮರಳು ನಿಕ್ಷೇಪ ವನ್ನು ಗುರುತಿಸಿದ್ದರು ಎಂದರು.

ತಾಲೂಕಿನ ಕೊಗಳಿ ಮತ್ತು ಅಲಬೂರು ಗ್ರಾಮದಲ್ಲಿ ಈ ಇಲಾಖೆಗಳು ಗುರುತಿಸಿದ ಮರಳು ನಿಕ್ಷೇಪಕ್ಕೆ ಮರಳು ನೀತಿ ಜಾರಿಯಾಗಿದ್ದು. ಸಾರ್ವಜನಿಕರು ಗ್ರಾಪಂ 300 ರು. ಒಂದು ಟನ್ ಗೆ ಪಾವತಿಸಿ ಪಡೆಯುತ್ತಿದ್ದಾರೆ ಎಂದರು.

ನಮ್ಮ ಪಂಚಾಯಿತಿಯಲ್ಲಿ ಈ ಮರಳು ನೀತಿಯನ್ನು ಶೀಘ್ರವೆ ಜಾರಿಗೆ ತಂದರೆ ಗ್ರಾಪಂಗೆ ಆದಾಯ ಬರುತ್ತದೆ. ಅದಕ್ಕಾಗಿ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ವರದಿ:ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here