ಸೊಳ್ಳೆಗಳ ನಿಯಂತ್ರಣ ಕುರಿತು ವಿದ್ಯಾರ್ಥಿಗಳ ಚಿತ್ರಕಲೆ ಉತ್ತಮವಾಗಿವೆ; ಟಿ.ಹೆಚ್.ಒ ಡಾ.ಭರತ್ ಕುಮಾರ್,

0
214

ಸಂಡೂರು: ಸೆ:14: ಪಟ್ಟಣದ ಎ.ಪಿ.ಎಮ್.ಸಿ ಪ್ರೌಢ ಶಾಲೆಯಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಸೊಳ್ಳೆ ನಿಯಂತ್ರಣಾ ವಿಧಾನಗಳ ಮಾದರಿಗಳ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್ ಮಾತನಾಡಿ ಸೊಳ್ಳೆಗಳಿಂದ ಮಲೇರಿಯಾ, ಡೆಂಗೀ ಸೇರಿದಂತೆ ಆರು ಮಾರಕ ರೋಗಗಳು ಒಬ್ಬರಿಂದೊಬ್ಬರಿಗೆ ಹರಡುವವು, ರೋಗಗಳ ಬರುವ ಮುಂಚೆ ಬರದ ಹಾಗೆ ಸೊಳ್ಳೆಗಳ ನಿಯಂತ್ರಣ ಮಾಡ ಬೇಕಿದೆ, ಅದಕ್ಕಾಗಿ ಮಕ್ಕಳಿಗೆ ಸೊಳ್ಳೆಗಳ ಸಂತತಿ, ಜೀವನ ಶೈಲಿ, ಮತ್ತು ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟಲು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು, ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣ ವಿಧಾನಗಳನ್ನು ಉತ್ತಮವಾಗಿ ರಚಿಸಿದ್ದಾರೆ, ಇದು ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕಿನ ಬಿ.ಆರ್.ಸಿ ಅಧಿಕಾರಿ ಶರಣಬಸಪ್ಪ, ಎ.ಪಿ.ಎಮ್.ಸಿ ಶಾಲೆಯ ಉಪ ಪ್ರಾಚಾರ್ಯರು ಹೆಚ್.ಎನ್ ಬೋಸ್ಲೆ,ಶಿಕ್ಷಣ ಇಲಾಖೆಯ ಬಿ.ಆರ್.ಪಿ ಮಂಜುನಾಥ್, ಸಂಪನ್ಮೂಲ ವ್ಯಕ್ತಿಯಾದ ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ತಾಲ್ಲೂಕಿನ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here