ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ರಸ್ತೆ ದಾಟುತ್ತಿರುವ ಕೃಷ್ಣಮೃಗಗಳು

0
165

ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಕೃಷ್ಣಮೃಗಗಳನ್ನು ರಸ್ತೆ ದಾಟುತ್ತಿರುವ ವಿಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಈ ವಿಡಿಯೋಗೆ ಪ್ರಧಾನಿ ಮೋದಿ ‘ಎಕ್ಸಲೆಂಟ್’ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಗುಜರಾತಿನ ಭಾವನಗರದ ಕೃಷ್ಣ ಮೃಗಗಳ ರಾಷ್ಟ್ರೀಯ ಉದ್ಯಾನದಲ್ಲಿ 3000 ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಗುಜರಾತ್ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋವನ್ನು ನೋಡಿದ ಪ್ರಧಾನಿ ಮೋದಿ  ‘ಎಕ್ಸಲೆಂಟ್’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಈ ಟ್ವೀಟ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ರೀಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here