ಕೋವಿಡ್ ಮೊದಲ ಲಸಿಕೆ ಶೇ 100 ಪ್ರಗತಿ ಸಾಧಿಸಿ; ಜಿಲ್ಲಾಧಿಕಾರಿ

0
121

ಮಡಿಕೇರಿ ಸೆ.13 :-ಜಿಲ್ಲೆಯಾದ್ಯಂತ ಸೆಪ್ಟೆಂಬರ್ 25 ರೊಳಗೆ ಕೋವಿಡ್ ಮೊದಲ ಲಸಿಕೆಯನ್ನು ಶೇ 100 ಸಾಧಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಹೋಬಳಿವಾರು ಪ್ರಾಥಮಿಕ ಆಸ್ಪತ್ರೆಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಮೆಡಿಕಲ್ ಅಧಿಕಾರಿಗಳು, ಪಿಡಿಒ ಸೇರಿದಂತೆ ಸಭೆ ಸೇರಿ ಇದುವರೆಗೆ ನಡೆದಿರುವ ಪ್ರಗತಿ ಕಾರ್ಯಗಳ ಮಾಹಿತಿ ಪಡೆದು ಅವರು ಮಾತನಾಡಿದರು.
ಹೋಬಳಿವರು ಕಡ್ಡಾಯವಾಗಿ ಮೆಡಿಕಲ್ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪಿಡಿಒ ಗಳ ಜೊತೆಯಲ್ಲಿ ಸಭೆ ಸೇರಿ ವ್ಯಾಕ್ಸಿನ್ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಕಾರ್ಯ ನಿರ್ವಹಿಸಲು ನಿರ್ದೇಶನ ನೀಡಿದರು.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 25 ಒಳಗಾಗಿ ಕೋವಿಡ್ ವ್ಯಾಕ್ಸಿನ್ ಶೇ100 ರಷ್ಟು ಮೊದಲ ಡೋಸ್ ಲಸಿಕೆಯನ್ನು ನೀಡಲು ಗುರಿಯನ್ನು ಹೊಂದಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಕಾರ್ಯಚಟುವಟಿಕೆ ತೀವ್ರಗೊಳಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವೆಂಕಟೇಶ್ ಅವರು ಮಾತನಾಡಿ ಸರ್ಕಾರದಿಂದ ಪ್ರತಿದಿನ 15 ಸಾವಿರ ಡೋಸ್ ನೀಡುವ ಗುರಿಯನ್ನು ನೀಡಿದ್ದು, ಕೆಲವು ದಿನಗಳಲ್ಲಿ ಶೇ 100 ರಷ್ಟು ಲಸಿಕೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಸಮಾಜ ಕಲ್ಯಾಣಾಧಿಕಾರಿ ಶೇಖರ್, ಡಿಆರ್‍ಡಿಒ ಶ್ರೀಕಂಠ ಮೂರ್ತಿ, ನೋಡಲ್ ಅಧಿಕಾರಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here