ಹಿರಿಯರ ಹಲವಾರು ವಷ೯ದ ಶ್ರಮದಿಂದ ದೇಶದ ಅಭಿವೃದ್ಧಿ : ಡಾ. ರಾಕೇಶ್ ಕುಮಾರ್ ಕೆ.

0
83

ಹಿರಿಯರಲ್ಲಿನ ಜೀವನದ ಉತ್ಸಾಹ, ಅನುಭವಗಳು ಕಿರಿಯ ಪೀಳಿಗೆಗೆ ದಾರಿದೀಪ. ಹಿರಿಯರ ಶ್ರಮದಿಂದ ಜಿಲ್ಲೆ, ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ತಿಳಿಸಿದರು.

ಅವರು ಇಂದು ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರುಗಳ ನಿವೃತ್ತ ನೌಕರರ ಸಂಘಗಳು ಹಾಗೂ ಹಿರಿಯ ನಾಗರಿಕರ ಏಳಿಗೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಕೃಷಿ, ಸಕಾ೯ರಿ ನೌಕರಿ ಕ್ಷೇತ್ರ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಹಿರಿಯರು ಹಾಕಿದ ಅಡಿಪಾಯದಿಂದ ಬೆಳವಾಣಿಗೆ ಆಗಿದೆ. ನಾವು ಇಂದು ಮಾಡುವ ಉತ್ತಮ ಕೆಲಸಗಳು ಮುಂದಿನ ಪೀಳಿಗೆ ಬೆಳವಣಿಗೆಗೆ ಮಾಗ೯, ಮಕ್ಕಳು ಹಿರಿಯರನ್ನು ಅನುಸರಿಸುತ್ತಾರೆ. ಅವರಲ್ಲಿ ದೇಶಾಭಿಮಾನ, ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಗುಣ ಬೆಳಸಿ ಎಂದರು.

ಮಹಿಳೆಯರು, ಹಿರಿಯರು, ಬಡವರು, ಮಕ್ಕಳು ಇವರನ್ನು ಪ್ರೀತಿ , ವಿಶ್ವಾಸ, ಮಮತೆಯಿಂದ ನೋಡಿಕೊಳ್ಳಿ, ಇವೆಲ್ಲವು ಹಿರಿಯರು ಪಾಲಿಸುತ್ತ ಬಂದಿರುವ ಸಂಸ್ಕೃತಿಯಾಗಿದೆ. ಯುವ ಪೀಳಿಗೆ ಇದನ್ನು ರೂಡಿಸಿಕೊಳ್ಳಬೇಕಿದೆ.
ಹಿರಿಯ ನಾಗರಿಕರ ಜೀವನ ಮಟ್ಟ ಸುಧಾರಿಸಲು ಸಕಾ೯ರ ಅನೇಕ ಯೋಜನೆಗಳನ್ನು ಸೌಲಭ್ಯಗಳನ್ನು ನೀಡುತ್ತಿದೆ. ವೃದ್ಧಾಶ್ರಮಗಳು,ಹಗಲು ಯೋಗಕ್ಷೇಮ ಕೇಂದ್ರ , ಹಿರಿಯ ನಾಗರಿಕರ ಸಹಾಯವಾಣಿ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ವೃದ್ಧಾಪ್ಯ ವೇತನ, ಜೀರಿಯಾಟ್ರೀಕ್ ಕೇಂದ್ರಗಳು ಇನ್ನು ಹಲವು ಸೌಲಭ್ಯಗಳನ್ನು ನೀಡಿದೆ, ಹಿರಿಯನಾಗರೀಕರು ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೋವಿಡ್ 19 ಸಂಕ್ರಾಮಿಕ ರೋಗ ಸ್ವಲ್ಪ ಮಟ್ಟಿಗೆ ತಗ್ಗಿದೆ ಎಂದು ಹಿರಿಯ ನಾಗರೀಕರು ಮೈಮರೆಯಬಾರದು. ಹಿರಿಯ ನಾಗರೀಕರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಆರೋಗ್ಯ ರಕ್ಷಿಸಿ ಕೊಳ್ಳುವಂತೆ ಸಲಹ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ಆಫ್ ಲೈನ್ ನಲ್ಲಿ 29,199 ಗುರುತಿನ ಚೀಟಿಗಳನ್ನು ಹಾಗೂ ಸೇವ ಸಿಂಧು ಮುಖಾಂತರ ಆನ್ ಲೈನ್ ನಲ್ಲಿ 735 ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ 01 ರಾಜ್ಯ ಅನುದಾನಿತ ಹಾಗೂ 05 ಅನುದಾನ ರಹಿತ ವೃದ್ಧಾಶ್ರಮಗಳು ಕಾಯ೯ನಿ೯ಹಿಸಿತ್ತಿದೆ ಹಾಗೂ ಎಲ್ಲಾ ವಯೋಮಾನದವರುಗೂ ಡಿಜಿಟಲ್ ಸಮಾನತೆ ಎಂಬುದು 2021 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಧ್ಯೇಯ ವ್ಯಾಖ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವಿ.ನಾಗವೇಣಿಯರು ತಿಳಿಸಿದರು.

ಕಾಯ೯ಕ್ರಮದಲ್ಲಿ 2020-21 ನೇ ಸಾಲಿನ ಟಾಕಿಂಗ್ ಲ್ಯಾಪ್ ಟಾಪ್ ಯೋಜನೆಯಡಿ ಆಯ್ಕೆಯಾದ ಎಸ್.ಎಸ್.ಎಲ್.ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ಫಲಾನುಭವಿಗಳಿಗೆ ಲ್ಯಾಪ್ ಟಾಪ್, 2020-21 ನೇ ಸಾಲಿನ ಬ್ರೈಲ್ ಕಿಟ್ ಯೋಜನೆಯಡಿ ಆಯ್ಕೆಯಾದ ಎಸ್.ಎಸ್.ಎಲ್.ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾಥಿ೯ಗಳಿಗೆ ಬೈಲ್ ಕಿಟ್ ಹಾಗೂ 2020-21 ನೇ ಸಾಲಿನಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆಯಡಿ ಆಯ್ಕೆಯಾದ 3 ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಚಿಕ್ಕ ಸುಬ್ಬಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸಿ.ವಿ.ರಾಮನ್ , ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಯ ಸದಸ್ಯರಾದ ಕಾಡಯ್ಯ, ಜಿಲ್ಲಾ ಮಟ್ಟದ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ವೆಂಕಟಚಲಯ್ಯ, ಪೊಲೀಸ್ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಶಿವಣ್ಣ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here