ಮುಂಡ್ರಿಗಿಯಲ್ಲಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ

0
109

ಬಳ್ಳಾರಿ,ಸೆ.20 : 2021-22ನೇ ಸಾಲಿನ ವಿಸ್ತರಣಾ ಘಟಕಗಳನ್ನು ಬಲಪಡಿಸುವಿಕೆ ಯೋಜನೆ ಅಡಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನವನ್ನು ನಗರದ ಹೊರವಲಯದ ಮುಂಡ್ರಿಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
38 ಜಾನುವಾರುಗಳ ಮಾಲಿಕರು 43 ಮಿಶ್ರತಳಿ ಹಸು ಮತ್ತು 40 ಕರುಗಳು ಭಾಗವಹಿಸಿದ್ದವು, ಹೆಚ್‍ಎಫ್ ತಳಿ ಹಸು, ಜೆರ್ಸಿ ಮತ್ತು ಕರುಗಳ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು.
ಪಶುಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಟಿ.ಶಶಿಧರ್ ಮತ್ತು ಡಾ.ಮಂಜುನಾಥ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಬಳ್ಳಾರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಕೆ.ಆರ್.ಶ್ರೀನಿವಾಸ್ ಅವರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಜಾನುವಾರು ಮಾಲೀಕರಿಗೆ ಕರು ಸಾಕಾಣಿಕ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಶಂಭುಲಿಂಗ ಕುಮಾರ, ರಾಜಗೋಪಾಲ, ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಸುಗ್ಲಪ್ಪ, ಸಂಗಮೇಶ, ಪಶುವೈದ್ಯರಾದ ಡಾ.ಮಲ್ಲಿಕಾರ್ಜುನ, ಡಾ.ನಾಗರಾಜ್, ಡಾ.ಸಂದೀಪ್, ಡಾ.ಬಸವರಾಜ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here