ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನದ ಸಮಾರೋಪ, ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯರ ವಿಶ್ವ ವಿದ್ಯಾಲಯ: ಗ್ರಂಥಾಲಯ ಉಪ ನಿರ್ದೇಶಕಿ ಲಕ್ಷ್ಮೀಕಿರಣ್

0
176

ಬಳ್ಳಾರಿ,ನ.21: ಸಾರ್ವಜನಿಕ ಗ್ರಂಥಾಲಯವು ಶ್ರೀ ಸಾಮಾನ್ಯರ ವಿಶ್ವವಿದ್ಯಾಲಯವಿದ್ದಂತೆ; ಓದುಗರಿಗೆ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಳ್ಳಾರಿಯ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಕೆ.ಲಕ್ಷ್ಮೀಕಿರಣ್ ಅವರು ತಿಳಿಸಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2021 ಪುಸ್ತಕ ಪ್ರದರ್ಶನದ ಸಮಾರೋಪ ಸಮಾರಂಭ ನಿಮಿತ್ತ ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಉತ್ತಮ ಓದುಗ ಪ್ರಶಸ್ತಿ ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಗ್ರಂಥಾಲಯದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ ಉಪನಿರ್ದೇಶಕಿ ಲಕ್ಷ್ಮೀಕಿರಣ್ ಅವರು ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲರೂ ಸದಸ್ಯತ್ವ ನೋಂದಾಯಿಸಿ ಕೊಳ್ಳಬೇಕೆಂದು ತಿಳಿಸಿದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಮಾತನಾಡಿ, ಹಿರಿಯ ಲೇಖಕರನ್ನು ನೆನೆದು ಅವರ ವಿಚಾರಧಾರೆಗಳನ್ನು ತಿಳಿಸಿ, ಪುಸ್ತಕ ಓದುವ ಹವ್ಯಾಸ ಬೆಳಿಸಿ ಕೊಳ್ಳಬೇಕೆಂದರು.
ಲೋಕ ಶಿಕ್ಷಣಾಧಿಕಾರಿಗಳಾದ ಶಿವಪ್ರಕಾಶ್ ರವರು ಮಾತನಾಡಿ, ಎಲ್ಲರೂ ಗ್ರಂಥಾಲಯದ ಸದಸ್ಯತ್ವವನ್ನು ಮಾಡಿಸಿರಿ ಹಾಗೂ ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಇರುತ್ತ್ತವೆ;ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
ವಕೀಲರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ರೇಣುಕ ದೂರ್ವಾಸ, ವೀರಶೈವ ಮಹಾವಿದ್ಯಾಲಯದ ನಿವೃತ್ತ ಹಿರಿಯ ಗ್ರಂಥಪಾಲಕರಾದ ಡಾ.ಬಿ.ಆರ್.ಗದಗಿನ ಅವರು ಮಾತನಾಡಿ, ಗ್ರಂಥಾಲಯದಲ್ಲಿ ಬಹಳಷ್ಟು ಪುಸ್ತಕಗಳಿದ್ದು ಎಲ್ಲಾ ವಿದ್ಯಾರ್ಥಿಗಳು,ಸಾರ್ವಜನಿಕರು ಅಧ್ಯಯನ ಮಾಡುವುದರ ಮೂಲಕ ಹೆಚ್ಚಿನ ಮಟ್ಟದಲ್ಲಿ ಜ್ಞಾನ ಬೆಳಸಿಕೊಳ್ಳಬೇಕು.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದ ಮತ್ತು ಡಿಜಿಟಲ್ ಗ್ರಂಥಾಲಯದ ಉಪಯೋಗವನ್ನು ಪಡೆದು ಜ್ಞಾನ ಬೆಳಸಿಕೊಳ್ಳಬೇಕು ಎಂದರು.
ಗ್ರಂಥಾಲಯದ ಸದುಪಯೋಗ ಪಡೆದು ಸಾಧಕ ಪ್ರಸಸ್ತಿ ಪಡೆದ ಆಶಾ ರಾಮಚಂದ್ರರೆಡ್ಡಿ, ಉತ್ತಮ ಓದುಗ ಪ್ರಶಸ್ತಿ ಪಡೆದ ಸುಬ್ರಹ್ಮಣ್ಯ ಭಟ್ ಮತ್ತು ರಕುಮಾಬಾಯಿ ರವರು ಮಾತನಾಡಿದರು.
ಉತ್ತಮ ಓದುಗ ಪ್ರಶಸ್ತಿಯನ್ನು ಪಡೆದ ಸುಬ್ರಹ್ಮಣ್ಯ ಭಟ್ ಮತ್ತು ರಕುಮಾಬಾಯಿ ಅವರನ್ನು ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧಕ ಪ್ರಶÀಸ್ತಿ ಪಡೆದ ಆಶಾ ರಾಮಚಂದ್ರರೆಡ್ಡಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಪ್ತಾಹದ ಅಂಗವಾಗಿ 7 ದಿನಗಳು ಹೊಸ ಪುಸ್ತಕಗಳ ಪ್ರದರ್ಶನ, ಗ್ರಂಥಾಲಯದ ಸದಸ್ಯತ್ವ ನೋಂದಣಿ ಅಭಿಯಾನ, ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಗ್ರಂಥಾಲಯ ಸಹಾಯಕ ಕೆ.ಸಿದ್ದಪ್ಪ ಅವರು ನಿರೂಪಿಸಿದರು. ಗ್ರಂಥಪಾಲಕರಾದ ಆರ್.ಶಾರದಾ ಅವರು ಪ್ರಾರ್ಥಿಸಿದರು. ಸಹ ಗ್ರಂಥಪಾಲಕ ಎಸ್.ಟಿ.ಪ್ರಭಾಕರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆಯ ಮಜ್ಜಿಗಿ ವೀರೇಶ, ಎಸ್.ಸಂತೋಷ್ ಕುಮಾರ್ ಸೇರಿದಂತೆ ಇನ್ನೀತರರು ಇದ್ದರು.

LEAVE A REPLY

Please enter your comment!
Please enter your name here