ಹಸಿರು ಟವೆಲ್ ಗೂ ಗಣಿ ದೂಳು ಭ್ರಷ್ಟಾಚಾರದ ಸೊಂಕು ಹತ್ತಿದೆ

0
49

ಸಂಡೂರು: ಹಸಿರು ಟವೆಲ್ ಗೂ ಗಣಿ ದೂಳು ಭ್ರಷ್ಟಾಚಾರದ ಭ್ರಷ್ಟಾಚಾರದ ಸೋಂಕು ಹತ್ತಿದೆ ಸಂಡೂರು ಬಾಗದಲ್ಲಿ ಭೂಮಿಯನ್ನು ಬಿ.ಕರಾಬು ಎಂದು ತಿದ್ದುಪಡಿ ಮಾಡಿ ಕಾರ್ಖಾನೆಗಳಿಗೆ ಮಾರಾಟ ಮಾಡುವ ಹುನ್ನಾರ ನಡೆದಿದೆ ರೈತರು ಈ ಬಗ್ಗೆ ಜಾಗೃತರಾಗಿರಿ ಎಂದು ಎಚ್ಚರಿಸಿದರು
ರೈತರ ಕೃಷಿ ಪೂರ್ಣ ಪ್ರಮಾಣದಲ್ಲಿ ನೆಲಕಚ್ಚಿದೆ, ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ, ಗಣಿ ಅಬ್ಬರದಿಂದ, ಬೆಳೆಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಧೂಳು ಅವರಿಸಿ ತೆಂಗು, ಅಡಿಕೆ, ಬಾಳೆ, ದಾಳಿಂಬೆ ಪಪ್ಪಾಯಿ, ಈರುಳ್ಳಿ ನೆಲಕಚ್ಚಿದ್ದು ಲಕ್ಷಾಂತರ ಹಣ ನಷ್ಟವಾಗಿದ್ದು ಸರ್ಕಾರ ರೈತರ ಇಂಥ ಅನೇಕ ಸಂಕಷ್ಟಗಳಿಗೆ ತುರ್ತು ಸ್ಪಂದಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಒತ್ತಾಯಿಸಿದರು.

ಅವರು ಸೋಮವಾರ ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ತಾಲೂಕಿನ ಎಲ್ಲಾ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗಾದ ನಷ್ಟ ತುಂಬಿಕೊಡುವವರಾರು ಎಂಬುದೇ ಪ್ರಶ್ನೆಯಾಗಿದ್ದು, ಸರ್ಕಾರ ತಕ್ಷಣ ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಂತರ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ ರಾಜ್ಯದಲ್ಲಿ ಬರ ಆವರಿಸಿದ್ದು ಜನರು ನೀರಿಗಾಗಿ ಪರದಾಡುತ್ತಿದ್ದಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಮಸ್ಯೆ ಬಗೆಹರಿಸಲು ಮುಂದಾಗದೆ ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ತಾಲೂಕು ಅಧ್ಯಕ್ಷ ಚಂದ್ರಶೇಖರಮೇಟಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಮಾಡುತ್ತಿರುವ ಅರಣ್ಯದಂಚಿನ
ರೈತರಿಗೆ ಪಟ್ಟಾ ವಿತರಿಸಬೇಕು, ತಾಲೂಕಿನ ಕೆರೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಈಡೇರಿಸಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು ಮಾತನಾಡಿ ರೈತರು, ಸಾರ್ವಜನಿಕರು ಧೂಳು ಹಾಗೂ ಹೊಗೆಯಿಂದ ಹಲವಾರು ಕಾಯಿಲೆಗೆ ತುತ್ತಾಗುತ್ತಿದ್ದು ಇದರ ನಿಯಂತ್ರಣ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಕಂಪನಿ ಸ್ಥಗಿತಗೊಳಿಸುವುದು, ಸ್ಥಳೀಯರಿಗೆ ಉದ್ಯೋಗ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಗೌರವಾಧ್ಯಕ್ಷರು ಮಾಲಿ ಪಾಟಿಲ್ ಚಾಮರಸ, ಕಾರಾಧ್ಯಕ್ಷರು ವೀರಸಂಗಯ್ಯ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಮಂಜುಳಾ.ಕೆ., ವಿಜಯನಗರ ಜಿಲ್ಲಾಧ್ಯಕ್ಷರು ಸಿದ್ದನಗೌಡ, ವಿಭಾಗೀಯ ಕಾಯದರ್ಶಿ ಗೋಣಿ ಬಸಪ್ಪ, ಪ್ರವೀಣ್, ಪ್ರಕಾಶ್‌ ಸ್ವಾಮಿ, ದೇವೇಂದ್ರಪ್ಪ ವಿರೂಪಾಕ್ಷಿ, ಅಲಿಭಾಷಾ, ಷಣ್ಮುಖಪ್ಪ, ರಾಜಣ್ಣ ನೀಲಕಂಠ, ಮೋಹನ್, ಅಂಜಿನಿ, ಹಲವು ಗ್ರಾಮ ಘಟಕದ ಅಧ್ಯಕ್ಷರು ಪ್ರಮುಖರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here