ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2021, ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಡಿ.ಸಿ. ಆದೇಶ

0
92

ಧಾರವಾಡ: ಆ.17: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ಚುನಾವಣೆಯನ್ನು ಜರುಗಿಸಲು ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮತ್ತು ಪ್ರತಿ 5 ವಾರ್ಡ್‍ಗಳಿಗೆ ಒಬ್ಬರಂತೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ನೇಮಿಸಿರುವ ಚುನಾವಣಾಧಿಕಾರಿಗಳು ಪ್ರಪತ್ರ-1 ಎ ರಲ್ಲಿ ಚುನಾವಣಾ ನೋಟಿಸ್‍ನ್ನು ಪ್ರಕಟಿಸಿ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ನೇಮಿಸಲಾದ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ 1976 ಹಾಗೂ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಚುನಾವಣೆ) ನಿಯಮಗಳು 1979 ರನ್ವಯ ಮತ್ತು ರಾಜ್ಯ ಚುನಾವಣಾ ಆಯೋಗದಿಂದ, ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಕಾಲ ಕಾಲಕ್ಕೆ ನೀಡುವ ನಿರ್ದೇಶನಗಳನ್ನು ನಿಗದಿತ ಅವಧಿಯಲ್ಲಿ ಪೂರೈಸಬೇಕು. ಮತ್ತು ನಿರ್ದೇಶನಗಳ ಪಾಲನೆಯಲ್ಲಿ ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ, ಸುಗಮವಾಗಿ ಮತ್ತು ಸುರಕ್ಷಿತವಾಗಿ ಚುನಾವಣೆ ನಡೆಸುವ ಸಂಬಂಧ ತಮಗೆ ವಹಿಸಲಾದ ವಾರ್ಡ್‍ಗಳಲ್ಲಿ ನಿಯಮಾನುಸಾರ ಕ್ರಮ ಜರುಗಿಸಬೇಕೆಂದು ಅವರು ಆದೇಶದಲ್ಲಿ ನಿರ್ದೇಶಿಸಿದ್ದಾರೆ.

ವಾರ್ಡ್‍ವಾರು ನೇಮಿಸಲಾದ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ವಿವರ : ವಾರ್ಡ್ ನಂ. 1 ರಿಂದ 5 ರ ವರೆಗೆ ಚುನಾವಣಾಧಿಕಾರಿ ಎನ್.ಆರ್. ಪುರುಷೋತ್ತಮ, ಸಹಾಯಕ ಚುನಾವಣಾಧಿಕಾರಿ ಬಿ.ಆರ್. ಅನಂತಕುಮಾರಿ, ಸ್ಥಳ-ಮಹಾನಗರಪಾಲಿಕೆಯ ಕಚೇರಿ, ಧಾರವಾಡ ಸಾಮಾನ್ಯ ಆಡಳಿತ ವಿಭಾಗ, ಹೊಸ ಕಟ್ಟಡದ ಪಕ್ಕದ ಕೋಣೆ.

ವಾರ್ಡ್ ನಂ. 6 ರಿಂದ 10 ರ ವರೆಗೆ ಚುನಾವಣಾಧಿಕಾರಿ ಎಚ್.ಎಚ್. ಕುಕನೂರ, ಸಹಾಯಕ ಚುನಾವಣಾಧಿಕಾರಿ ಜೆ.ಸಿ. ಕಠಾರೆ, ಸ್ಥಳ-ಮಹಾನಗರಪಾಲಿಕೆಯ ಕಚೇರಿ, ಧಾರವಾಡ ಸಾಮಾನ್ಯ ಆಡಳಿತ ವಿಭಾಗ, ಹಳೇ ಕಟ್ಟಡದಲ್ಲಿರುವ ಕೋಣೆ.

ವಾರ್ಡ್ ನಂ. 11 ರಿಂದ 15 ರ ವರೆಗೆ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ, ಸಹಾಯಕ ಚುನಾವಣಾಧಿಕಾರಿ ಅಕಬರ ಕುರ್ತಕೋಟಿ, ಸ್ಥಳ-ಮಹಾನಗರಪಾಲಿಕೆಯಲ್ಲಿರುವ 74 ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ.

ವಾರ್ಡ್ ನಂ. 16 ರಿಂದ 20 ರ ವರೆಗೆ ಚುನಾವಣಾಧಿಕಾರಿ ಪ್ರಭಾಕರ ಅಂಗಡಿ, ಸಹಾಯಕ ಚುನಾವಣಾಧಿಕಾರಿ ಪ್ರಕಾಶ ಸರಸಟ್ಟಿ, ಸ್ಥಳ-ಮಹಾನಗರಪಾಲಿಕೆಯಲ್ಲಿರುವ ಮಹಾಪೌರರ ಕಚೇರಿ.

ವಾರ್ಡ್ ನಂ. 21 ರಿಂದ 25 ರ ವರೆಗೆ ಚುನಾವಣಾಧಿಕಾರಿ  ಕಾಶೀನಾಥ ಭದ್ರಣ್ಣವರ, ಸಹಾಯಕ ಚುನಾವಣಾಧಿಕಾರಿ ಎಸ್.ಎನ್. ಮುರನಾಳ, ಸ್ಥಳ-ಮಹಾನಗರಪಾಲಿಕೆಯ ಆವರಣದಲ್ಲಿರುವ ಜಲಮಂಡಳಿ ಕಚೇರಿ ಹಳೇ ಕಟ್ಟಡ ವ.ಕ.ನಂ.3. ಮೇಲಿನ ಅಂತಸ್ತು.

ವಾರ್ಡ್ ನಂ. 26 ರಿಂದ 30 ರ ವರೆಗೆ ಚುನಾವಣಾಧಿಕಾರಿ ಅಶೋಕ ತೇಲಿ, ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರ, ಸ್ಥಳ-ಅಂಬೇಡ್ಕರ ಭವನ, ನವನಗರ.

ವಾರ್ಡ್ ನಂ. 31 ರಿಂದ 35 ರ ವರೆಗೆ ಚುನಾವಣಾಧಿಕಾರಿ ರಾಜಶ್ರೀ ಜೈನಾಪೂರ, ಸಹಾಯಕ ಚುನಾವಣಾಧಿಕಾರಿ ಜಯಶ್ರೀ ವರೂರ, ಸ್ಥಳ- ಈಜುಗೋಳ ಕಟ್ಟಡ ವಲಯ ಕಚೇರಿ, ನಂ.5, ಮೇಲ್ಮಹಡಿ, ಹುಬ್ಬಳ್ಳಿ.

ವಾರ್ಡ್ ನಂ. 36 ರಿಂದ 40 ರ ವರೆಗೆ ಚುನಾವಣಾಧಿಕಾರಿ ಉಮೇಶ ಕೊಂಡಿ, ಸಹಾಯಕ ಚುನಾವಣಾಧಿಕಾರಿ ಹಿರೇಮಠ ಕೆ.ಎಂ., ಸ್ಥಳ-ಮಹಾನಗರಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ, ನಗರ ಯೋಜನೆ ಸ್ಥಾಯಿ ಸಮಿತಿ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ. 41 ರಿಂದ 46 ರ ವರೆಗೆ ಚುನಾವಣಾಧಿಕಾರಿ ಮಾಲತೇಶ ಪಾಟೀಲ, ಸಹಾಯಕ ಚುನಾವಣಾಧಿಕಾರಿ ರೇಣುಕಮ್ಮ, ಸ್ಥಳ-ಮಹಾನಗರಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ.47 ರಿಂದ 51 ರ ವರೆಗೆ ಚುನಾವಣಾಧಿಕಾರಿ ವಿರೇಶ ಢವಳೆ, ಸಹಾಯಕ ಚುನಾವಣಾಧಿಕಾರಿ ನಾಗರತ್ನಾ ಹೂಗಾರ, ಸ್ಥಳ-ಮಹಾನಗರಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ, ತೆರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ.52 ರಿಂದ 56 ರ ವರೆಗೆ ಚುನಾವಣಾಧಿಕಾರಿ ಶಿವಕುಮಾರ ಎಂ.ಸಿ., ಸಹಾಯಕ ಚುನಾವಣಾಧಿಕಾರಿ ಎ.ಟಿ. ಸುಲ್ತಾನಪೂರ, ಸ್ಥಳ-ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ, ಲೆಕ್ಕ ಸ್ಥಾಯಿ ಸಮಿತಿ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ.57 ರಿಂದ 61 ರ ವರೆಗೆ ಚುನಾವಣಾಧಿಕಾರಿ ವಿ.ಡಿ. ಸಜ್ಜನ, ಸಹಾಯಕ ಚುನಾವಣಾಧಿಕಾರಿ ಗೋಪಾಲ .ಎಚ್. ಲಮಾಣಿ, ಸ್ಥಳ-ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ, ಉಪಮಹಾಪೌರರ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ.62 ರಿಂದ 66 ರ ವರೆಗೆ ಚುನಾವಣಾಧಿಕಾರಿ ರಾಘವೇಂದ್ರ ಜಲಸಾಗರ, ಸಹಾಯಕ ಚುನಾವಣಾಧಿಕಾರಿ ಜಗದೀಶ ಪಾಟೀಲ, ಸ್ಥಳ-ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ, ವಿರೋಧ ಪಕ್ಷದ ನಾಯಕರ ಕಾರ್ಯಾಲಯ, ಹುಬ್ಬಳ್ಳಿ.

ವಾರ್ಡ್ ನಂ.67 ರಿಂದ 71 ರ ವರೆಗೆ ಚುನಾವಣಾಧಿಕಾರಿ ರೇಖಾ ಡೊಳ್ಳಿನವರ, ಸಹಾಯಕ ಚುನಾವಣಾಧಿಕಾರಿ ಎಂ.ಎನ್. ದೊಡಮನಿ, ಸ್ಥಳ-ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿಯ ಹಿಂಭಾಗದ ಪಿಆರ್‍ಓ ಕಚೇರಿ, ಹುಬ್ಬಳ್ಳಿ.

ವಾರ್ಡ್ ನಂ.72 ರಿಂದ 77 ರ ವರೆಗೆ ಚುನಾವಣಾಧಿಕಾರಿ ವಿ.ಎನ್. ತೇರದಾಳ, ಸಹಾಯಕ ಚುನಾವಣಾಧಿಕಾರಿ ಚೇತನ ಕಪ್ಪಿ, ಸ್ಥಳ-ಮಹಾನಗರ ಪಾಲಿಕೆಯ ನೌಕರರ ಪತ್ತಿನ ಸಂಘದ ಕಚೇರಿ, ಹುಬ್ಬಳ್ಳಿ.

ವಾರ್ಡ್ ನಂ. 78 ರಿಂದ 82 ರ ವರೆಗೆ ಚುನಾವಣಾಧಿಕಾರಿ ಕೆ. ಅಶೋಕ, ಸಹಾಯಕ ಚುನಾವಣಾಧಿಕಾರಿ ಆರ್.ಬಿ. ಶ್ರೀಖಂಡೆ, ಸ್ಥಳ-ಮಹಾನಗರ ಪಾಲಿಕೆಯಲ್ಲಿರುವ ಸಹಾಯಕ ನಿರ್ದೇಶಕರು, ನಗರ ಯೋಜನೆ ಕಚೇರಿ, ಹುಬ್ಬಳ್ಳಿ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ತಲಾ 5 ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ಒಟ್ಟು 32 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here