ಸಂಡೂರು ತಾಲೂಕು ಡಿವೈಎಫ್ಐ ನಿಂದ “ಕಾರ್ಮಿಕರ ಆನ್ಲೈನ್ ಕಾರ್ಡ್ ನೋಂದಾವಣೆ ಉದ್ಘಾಟನೆ ಕಾರ್ಯಕ್ರಮ ಯಶಸ್ವಿ”

0
131

ಸಂಡೂರು/ತೋರಣಗಲ್ಲು:ನ:30:-/ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಸೂರಿ ಭವನ ಕಛೇರಿನಲ್ಲಿ ಡಿವೈಎಫ್ಐ ( ಭಾರತ ಪ್ರಜಾಸತ್ತಾತ್ಮಕ ಯುವಜನ ಪೇಡರೇಷನ್ ) ಸಂಡೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಎಲ್ಲಾ ಕಾರ್ಮಿಕರಿಗೆ ಆನ್ಲೈನ್ ಕಾರ್ಡ್ ನೊಂದಾವಣೆ ಮಾಡಿಸುವ ಮೂಲಕ ಉದ್ಘಾಟನೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.

ಈ ಕಾರ್ಯಕ್ರಮದ ಆರಂಭವಾಗಿ ಡಿವೈಎಫ್ಐನ ತಾಲೂಕು ಕಾರ್ಯದರ್ಶಿ ಎಚ್.ಸ್ವಾಮಿ ಅವರು ಮಾತನಾಡಿ ನಮ್ಮ ಸರ್ಕಾರದ ಯೋಜನೆಯಿಂದ ಪ್ರಥಮವಾಗಿ ಈ ನಾಡಿನ ಜನತೆಗೆ ಮತ್ತು ಅವರ ಕುಟುಂಬಗಳಿಗೆ ಆರ್ಥಿಕವಾಗಿ ಹೊಟ್ಟೆಪಾಡಿನ ಸಹಾಯಕ್ಕಾಗಿ ಪಡಿತರ ಚೀಟಿ ಮಾಡಿ ಈ ಕಾರ್ಡ್ ಮುಖಾಂತರ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದರು ನಂತರ ಬ್ಯಾಂಕ್ ಪಾಸ್ ಬುಕ್ ಜೊತೆಗೆ ಎಟಿಎಂ ಕಾರ್ಡ್ ಗಳು, ಕಾರ್ಮಿಕರ, ಕಾರ್ಡ್,ಆಧಾರ್ ಕಾರ್ಡ್, ವಾಜಪೇ ಕಾರ್ಡ್, ಆರೋಗ್ಯ ಕಾರ್ಡ್, ಪ್ರಸ್ತುತವಾಗಿ ಇ-ಶ್ರಮ ಕಾರ್ಡ್ ಯೋಜನೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದು ಇತರೇ ಎಲ್ಲಾ ಕಾರ್ಮಿಕರ ಆನ್ಲೈನ್ ಕಾರ್ಡುಗಳ ಮಾಹಿತಿ ಸಂಗ್ರಹಿಸಿ ಸ್ವತಃ ನಮ್ಮ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಕಾರ್ಡಗಳು ಮಾಡಿಸಿ ಹಿಂದುಳಿದ ಜನಸಾಮಾನ್ಯರ ಕಾರ್ಮಿಕರಿಗೆ ವಿತರಣೆ ಮಾಡಲಾಗುವುದು ಎಂದು
ಇ-ಶ್ರಮ ಯೋಜನೆಯಡಿನಲ್ಲಿ ಅಸಂಘಟಿತ ಕಾರ್ಮಿಕರ ಫಲಾನುಭವಿಗಳು ಒಂದು ವರ್ಷದಲ್ಲಿ PMSBY(ಪಿ ಎಂ ಎಸ್ ಬಿ ವೈ) ಸೌಲಭ್ಯ, ಆಕಸ್ಮಿಕವಾಗಿ ಮರಣ ಮತ್ತು ಪೂರ್ಣ ಶಾಶ್ವತ ಅಂಗವೈಕಲ್ಯ ಹೊಂದಿದ್ದಲ್ಲಿ 2 ಲಕ್ಷ ಮತ್ತು ಬಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಂ.ರವಿದಾಸ್ ಕಾರ್ಮಿಕರ ನಿರೀಕ್ಷಕರು ಸಂಡೂರು ಇವರಿಂದ ಕಂಪ್ಯೂಟರ್ ಮೌಸ್ ಕ್ಲಿಕ್ ಮಾಡುವುದರ ಮತ್ತು ಇ-ಶ್ರಮ ಕಾರ್ಡ್ ವಿತರಣೆ ಮಾಡುವುದರ ಮೂಲಕ ಉದ್ಘಾಟಿಸಿದರು, ನಂತರ ಮಾತನಾಡಿ ದೇಶ ಮತ್ತು ರಾಜ್ಯದ ಎಲ್ಲಾ ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಿಮ್ಮ ಹೋರಾಟಗಳ ಪ್ರತಿಫಲ ಕಟ್ಟಡ ಕಾರ್ಮಿಕರ ಮತ್ತು ಇತರೇ ನಿರ್ಮಾಣಕಾರ ಕಾರ್ಡ್, ಇ-ಶ್ರಮ ಕಾರ್ಡಗಳ ಜಾರಿ ಹಿಗೇ ಅನೇಕ ಸೌಲಭ್ಯಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಮಾಡಿವೆ, ಹಾಗಾಗಿ ನೀವೆಲ್ಲರೂ ಸೌಲಭ್ಯಗಳು ಪಡೆದುಕೊಳ್ಳಿ ನನ್ನ ಸಹಾಯ ವಿರುತ್ತದೆ, ಎಂದು ಲಾಕ್ಡೌನ್ 1 ಮತ್ತು 2 ರಲ್ಲಿ ಆಹಾರ ಕಿಟ್ , ಧನ ಸಹಾಯ ಆರ್ಥಿಕವಾಗಿ ನಮ್ಮ ಇಲಾಖೆಯಿಂದ ಮಾಡಿದೆ ಆದರೆ ಎಲ್ಲಾ ಜನರಿಗೆ ಸಾಧ್ಯವಾಗಿಲ್ಲದ್ದರು ಸಾಧ್ಯವಾದಷ್ಟು ಕಾರ್ಮಿಕ ಬಂಧುಗಳಿಗೆ ಸೌಲಭ್ಯಗಳು ಪಡೆದುಕೊಂಡಿದ್ದಾರೆ, ಇನ್ನು ಮುಂದೆ CSC CENTER(ಸಿ ಎಸ್ ಸಿ ಸೆಂಟರ್) ಗಳಲ್ಲಿ ಅರ್ಜಿಗಳನ್ನು ಉಚಿತ ಹಾಕಿಸಿ ಯಾವುದೇ ಶುಲ್ಕ ಕೇಳಿದ ಪಕ್ಷದಲ್ಲಿ ಅಂತಹ ಕೆಂದ್ರಗಳ ರದ್ದು ಶಿಸ್ತು ಕ್ರಮ ಜಾರಿಯಾಗುವುದು ಎಂದು ತಿಳಿಸಿದರು.

ಕಾಂ.ಎ.ಸ್ವಾಮಿ ಸಿಐಟಿಯು ಮುಖಂಡರು ಮಾತನಾಡಿ ಬಹಳಷ್ಟು ಬಡಜನರ ಕಾರ್ಮಿಕರು ಮರಣ ಹೊಂದಿದಲ್ಲಿ ಕಾರ್ಡ್ ಗಳ ಸೌಲಭ್ಯ ಕುರಿತು ಮಾಹಿತಿಗಳು ಇರೋದಿಲ್ಲ ಮತ್ತು ನಿಗದಿತ ಸಮಯದಲ್ಲಿ ಆನ್ಲೈನ್ ಅರ್ಜಿಗಳು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಇಂತಹ ಜನರ ಮಧ್ಯೆ ಯುವಜನರ ಸಂಘಟನೆ ಕೆಲಸ ಮಾಡಬೇಕು ದಲಿತರು ಮತ್ತು ತುಳಿತಕ್ಕೊಳಗಾದ ಜನಸಾಮಾನ್ಯರಿಗೆ ವೈಜ್ಞಾನಿಕವಾಗಿ ವಿಚಾರಗಳು ತಲುಪಿಸಿದಾಗ ಮಾತ್ರ ಜನರ ಬದಲಾವಣೆ ಸಾಧ್ಯ ನಮ್ಮನ್ನು ಆಳುವ ಸರ್ಕಾರಗಳ ತಾರತಮ್ಯಗಳ ವಿರುದ್ಧ ಧ್ವನಿ ಯಾಗಬೇಕೆಂದು ಕರೆ ನೀಡಿದರು.

ಜೆ.ಎಂ.ಚನ್ನಬಸಯ್ಯ ಸಿಐಟಿಯು ಸಂಚಾಲಕರು ಸಂಡೂರು ಇವರು ಈ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈರಣ್ಣ ಡಿವೈಎಫ್ಐ ನ ಜಿಲ್ಲಾ ಸಹಕಾರ್ಯದರ್ಶಿಗಳು ಇವರು ಲ್ಯಾಪ್ ಟಾಪ್ ಉಪಯೋಗಿಸುವ ಮೂಲಕ ಆನ್ಲೈನ್ ಅರ್ಜಿ ಹೇಗೆ ಹಾಕಲಾಗುತ್ತದೆ ಎಂದು ಪ್ರಾಯೋಗಿಕವಾಗಿ ತಿಳಿಸಿದರು

ಡಿವೈಎಫ್ಐನ ತಾಲೂಕು ಅಧ್ಯಕ್ಷರು ಎಸ್ ಕಾಲುಬರವರು ವಂದಿಸಿದರು.
ಡಿವೈಎಫ್ಐನ ತೋರಣಗಲ್ಲು ಗ್ರಾಮ ಸಮಿತಿಯ ಸಹ ಕಾರ್ಯದರ್ಶಿಗಳಾದ ಕುಮಾರ್ ನಾಯಕ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು,
ಗ್ರಾಮದ ಅಧ್ಯಕ್ಷರು ಡಿವೈಎಫ್ಐ ನ ಶಿವು ರವರು ಸ್ವಾಗತಿಸಿದರು, ಈ ಕಾರ್ಯಕ್ರಮದಲ್ಲಿ ಇ.ರಾಮಲಿ, ಚಿನ್ನಿ ಸುಂಕಣ್ಣ ಹಮಾಲಿ ಸಂಘದ ಸಣ್ಣ ಹೊನ್ನೂರ್ ಸ್ವಾಮಿ, ದೇವೇಂದ್ರಪ್ಪ, ಎನ್.ಸ್ವಾಮಿ,
ಉದ್ಯೋಗ ಖಾತ್ರಿ ಮಹಿಳಾ ಕಾರ್ಮಿಕರಾದ ಲಕ್ಷ್ಮಿ, ಸರಸ್ವತಿ, ಪಾರ್ವತಮ್ಮ, ಡಿವೈಎಫ್ಐನ ಮುಖಂಡರುಗಳಾದ ಜಿಲಾನ್, ಅಬ್ದುಲ್ ರಜಾಕ್, ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here