ಭ್ರಾತೃತ್ವ, ಸಮಾನತೆಗೆ ಹೋರಾಡಿದ ಮಹಾನಾಯಕ ಡಾ.ಅಂಬೇಡ್ಕರ್. -ಪಂಪಾಪತಿ

0
162

ಕೂಡ್ಲಿಗಿ :ಇಡೀ ಮಾನವ ಕುಲದ ಹಕ್ಕುಗಳ ಸ್ವಾತಂತ್ರ, ಸಮಾನತೆ, ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಮಹಾ ನಾಯಕ ಸಂವಿಧಾನ ಶಿಲ್ಪಿ, ಭಾರತರತ್ನ ಡಾ :ಬಿ, ಆರ್, ಅಂಬೇಡ್ಕರ್ ಎಂದು ತಾಲೂಕು ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಧಿಕಾರಿ ಪಂಪಾಪತಿ ನುಡಿದರು. ಅವರು ಪಟ್ಟಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಾರ್ಯಾಲಯದಲ್ಲಿ ಡಾ :ಬಾಬಾ ಸಾಹೇಬ ಅಂಬೇಡ್ಕರ್ ರವರ 65ನೇಮಹಾ ಪರಿನಿರ್ವಾಣ ದಿನಾಚರಣೆ ಆಚರಿಸಿ ಮಾತನಾಡಿದರು. ತಾಲೂಕು ವಿಸ್ತರಣಾಧಿಕಾರಿ ಸಂಗನ ಬಸಯ್ಯ ಮಾತನಾಡಿ ಭಾರತಾಂಬೆಯ ಪುಣ್ಯ ಭೂಮಿಯಲ್ಲಿ ಜನಿಸಿ ಭಾರತದ ಕೀರ್ತಿಯನ್ನು ದಿಗಂತಕ್ಕೆ ಎತ್ತರಿಸಿದ ಮಹಾ ಪುರುಷರಲ್ಲಿ ಡಾ :ಬಾಬಾ ಸಾಹೇಬ ಅಂಬೇಡ್ಕರ್ ಅಗ್ರಗಣ್ಯರು. ತಮ್ಮ ಬದುಕು ಸಾಧನೆ ತ್ಯಾಗಗಳ ಮೂಲಕ ಅವರ ಕೊಡುಗೆ ಅಪಾರವಾದದ್ದು, ಎಂದರು.
ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕರರಾದ ಸಿ, ಅಂಜಿನಪ್ಪ, ಮಲ್ಲಪ್ಪ, ಕುಮಾರಸ್ವಾಮಿ, ಸೇರಿದಂತೆ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಅಂಜಿನಪ್ಪ, ಕೆ ಮಾರುತಿ, ಎ, ಬಸವರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here