“ಸಮ್ಮೇಳನದ ಯಶಸ್ವಿಗೆ ನಿಧಿ ಸಂಗ್ರಹಕ್ಕೆ ವೆಬಾಕುಮಾರಿ ಚಾಲನೆ”

0
161

ಸಂಡೂರು/ತೋರಣಗಲ್ಲು:ಡಿ:14:-ಜನವರಿ 9 ರಂದು ಉಕ್ಕಿನ ನಗರದಲ್ಲಿ ಆಯೋಜಿಸಿರುವ ಡಿವೈಎಫ್ಐನ ಸಂಡೂರು ತಾಲೂಕು ಐದನೇ ಸಮ್ಮೇಳನದ ಅಂಗವಾಗಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾದ ಕಾ. ವೆಬಾಕುಮಾರಿ ತಮ್ಮ ಒಂದು ತಿಂಗಳ ಸಂಬಳವನ್ನು ರೂ 5000 ದೇಣಿಗೆಯನ್ನು ನೀಡಿ ದುಡಿಯುವ ಜನರ ಧ್ವನಿ ಯುವಜನರ ಆಶಾಕಿರಣ ಡಿವೈಎಫ್ಐನ ಸಮ್ಮೇಳನ ಯಶಸ್ವಿಯಾಗಲಿ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಡಿವೈಎಫ್ಐ ಈ ನೆಲದಲ್ಲಿ ಆಲದ ಮರದಂತೆ ಬೆಳೆಯಲಿ ಎಂದು ಹಾರೈಸಿದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಎಸ್. ಕಾಲೂಬ ಅವರು ಮಾತನಾಡಿ ಅವರ ಕುಟುಂಬ ತುಂಬಾ ಬಡತನದಲ್ಲಿದ್ದು ತಿಂಗಳ ಸಂಬಳವನ್ನು ತ್ಯಾಗ ಮಾಡಿ ಯುವಜನತೆಗೆ ಮಾದರಿಯಾಗಿದ್ದಾರೆ ಎಂದರು.
ನಂತರ ಮಾತನಾಡಿದ ಸ್ವಾಗತ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ಸೈಯದ್ ಶರೀಪ್ ಅವರು ನಿಧಿ ಸಂಗ್ರಹ ಯಶಸ್ವಿಯಾಗಲಿ ಹಾಗೂ ವೆಬಾಕುಮಾರಿ ಅವರ ಬದ್ಧತೆ ತ್ಯಾಗ ಆದರ್ಶಗಳು ಪ್ರತಿಯೊಂದು ಯುವಜನತೆಗೆ ಮಾದರಿಯಾಗಲಿ ಹಾಗೂ ಜನವರಿ 9 ರಂದು ನಡೆಯುವ ಸಮ್ಮೇಳನ ಯಶಸ್ವಿಯಾಗಲಿ ಎಂದರು. ನಿಧಿ ಸಂಗ್ರಹ ಚಾಲನೆ ಕಾರ್ಯಕ್ರಮದಲ್ಲಿ ಕೆ.ರಮೇಶ್ ಹಾಗೂ ಹೆಚ್. ಸ್ವಾಮಿ ಯವರು ಹಾಜರಿದ್ದರು…

LEAVE A REPLY

Please enter your comment!
Please enter your name here