ಸಂಡೂರು ಪುರಸಭೆಯ ಸಾಮಾನ್ಯ ಸಾಧಾರಣ ಸಭೆಯಲ್ಲಿ ಏನಾಯ್ತು ಗೊತ್ತಾ..!!

0
190

ಸಂಡೂರು:-ಪಟ್ಟಣದ ಪುರಸಭೆಯ ಕಾರ್ಯಾಲಯದ ಕೆ.ಎಸ್. ವೀರಭದ್ರಪ್ಪ ಸಭಾಭವನದಲ್ಲಿ ನಡೆದ ಸಾಮಾನ್ಯ ಸಾಧಾರಣ ಸಭೆಯು ಪ್ರಾರಂಭದಲ್ಲಿಯೇ ಗದ್ದಲದಲ್ಲಿ ಆರಂಭವಾಗಿ ಕೊನೆಗೆ ಗೊಂದಲಗಳಲ್ಲಿ ಮುಕ್ತಾಯವಾಯಿತು. ಪುರಸಭೆಯ ಸದಸ್ಯರ ಕೆಲವರಿಗೆ ಮಾಹಿತಿಯ ಕೊರತೆ ಎದ್ದು ಕಾಣುತ್ತಿತ್ತು, ಹಾಗೇ ವಸ್ತುಸ್ಥಿತಿಗೆ ಪ್ರಶ್ನೆಗಳು ಸರಿಯಾಗಿದ್ದರು ಅವುಗಳನ್ನು ಕೇಳುವ ರೀತಿ ಸರಿಯಾಗಿರಲಿಲ್ಲ ಕಾರಣ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಮಾಹಿತಿ ಮತ್ತು ಸಭೆಗಳಲ್ಲಿ ಬಾಗವಹಿಸಿ ಯಾವ ರೀತಿಯಲ್ಲಿ ಸಭೆಯ ಕಾರ್ಯಕಲಾಪಗಳನ್ನು ಹೇಗೇ ಎದುರಿಸಬೇಕು ಎನ್ನುವ ತರಬೇತಿ ಇಲ್ಲದ ಕೊರತೆ ಎದ್ದು ಕಾಣುತ್ತಿತ್ತು

ಸಾಮಾನ್ಯ ಸಭೆಯು ಪ್ರಾರಂಭವಾಗುತ್ತಿದ್ದಂತೆ…
ನನ್ನ ಪತಿ ಕಾಮಾಗಾರಿ ಬಗ್ಗೆ ಸೂಕ್ಷ್ಮವಾಗಿ ವಿಚಾರಿಸಲು ಬಂದಾಗ ಪುರಸಭೆಯ ಉಪಾದ್ಯಾಕ್ಷರಾದ ಈರೇಶ ಸಿಂಧೆಯವರು ನನ್ನ ಪತಿಗೆ ಅಗೌರವಯುತವಾಗಿ ನಡೆದುಕೊಂಡಿದ್ದಾರೆ ಅದಕ್ಕಾಗಿ ನನ್ನ ಮನಸಿಗೆ ನೊವಾಗಿದೆ ನನ್ನ ಪತಿಗೆ ಬೆಲೆಯೇ ಇಲ್ಲದ ಮೇಲೆ ನಾನೇಕೆ ಸಭೆಗೆ ಹಾಜರಾಗಬೇಕು ಅಗೌರವ ತೋರಿಸುವುದಕ್ಕಿಂತ ಕಾಮಾಗಾರಿಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ನಿಮಗಿಲ್ಲವೆಂದು ನನ್ನ ಪತಿಗೆ ಹೇಳಬೇಕಾಗಿತ್ತು ಎಂದು ಬಿಜೆಪಿಯ 1ನೇ ವಾರ್ಡನ ದುರುಗಮ್ಮನವರ ಪ್ರಶ್ನೆಯಾಗಿತ್ತು.

ಅದಕ್ಕುತ್ತರಿಸಿದ ಸಿಂಧೆಯವರು ನಾನು ಮಾಡಿದ ಅಗೌರವವಾದರು ಏನು ಎಂದು ಪ್ರಶ್ನಿಸಿದರು.ಅಗೌರವ ಮಾಡಿದ್ದು ನಿಮಗೆ ಗೊತ್ತಿಲ್ಲವೇನು? ಎಂದು ದುರುಗಮ್ಮನವರು ಉಪಾದ್ಯಕ್ಷರಿಗೆ ಮರು ಪ್ರಶ್ನಿಸಿದರು ಮದ್ಯ ಪ್ರವೇಶಿಸಿದ ಕಾಂಗ್ರೇಸ್ ಸದಸ್ಯರಾದ ಬ್ರಹ್ಮನಂದಯ್ಯ, ಅಗಸರ ಪಂಪಣ್ಣ, ನಂದಿಹಳ್ಳಿಯ ಹನುಮೇಶ, ಅಲ್ಲದೆ ಹಲವಾರು ಮುಖಂಡರು ಉಪಾದ್ಯಕ್ಷರ ಪರವಾಗಿ ನಿಂತುಕೊಂಡರು ಅದಾದ ನಂತರ ಉಪಾದ್ಯಕ್ಷರು ಪುರಸಭೆಯ ಅದ್ಯಕ್ಷೆ ಅನಿತ ವಸಂತಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡು ನೀವು ಹೇಳಿ ಕೊಟ್ಟಿರಿ ಅದಕ್ಕೆ ಆ ಹೆಣ್ಣು ಮಗಳಿಗೆ ದೈರ್ಯಬಂದಿದೆ ಎಂದಾಗ ಅದಕ್ಕೆ ಅದ್ಯಕ್ಷರು ನಾನು ಏನು ಹೇಳಿಕೊಟ್ಟಿನಿ ಎಂದು ಪ್ರಶ್ನಿಸಿದರು.
ಸಂಡೂರಿನ ಪುರಸಭೆಯ ದಿ|| ಕೆ.ಎಸ್. ವೀರಭದ್ರಪ್ಪನವರ ಸಬಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು ಉಪಾದ್ಯಕ್ಷರು ಹೊರನಡೆಯುವ ಪ್ರಸಂಗದಲ್ಲಿ ಕಾಂಗ್ರೇಸಿನ ಎಂ.ವತ್ಸಲ, ಸಂತೋಷ್ ಕುಮಾರ್, ಸಿರಾಜ್ ವುದ್ದಿನ್ ಬಾಷ ಅಲ್ಲದೆ ಹಲವಾರು ಮುಖಂಡರು ಅವರನ್ನು ತಡೆದು ಕುಳ್ಳಿರಿಸಿದರು

ಅದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿ ಸದಸ್ಯರನ್ನು ಹೊರತುಪಡಿಸಿ ಪತಿಯರು, ಸಂಬಂಧಿಕರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು.

ವಿರೋದ ಪಕ್ಷದ ನಾಯಕ ಅಬ್ದುಲ್ ಮುನಾಫ್ ಮಾತನಾಡಿ ಒಂದು ವರ್ಷದಿಂದಲೂ ನೀವು ಮಾಡಿದ ಕಾಮಾಗಾರಿಗಳ ಬಗ್ಗೆ ನಾವು ಹಲವಾರು ಬಾರಿ ದಾಖಲೆಗಳನ್ನು ಕೇಳಿದ್ದೆವೇ ನಿಮ್ಮ ಉತ್ತರ ಹಾರಿಕೆಯ ಉತ್ತರವಾಗಿದ್ದು ನಿಮ್ಮ ದಾಖಲೆಗಳನ್ನು ಇಲ್ಲಿಯವರೆಗೆ ನೀಡಿಲ್ಲ ಕಾರಣವೇನು?.ನೀವು ದಾಖಲೆಗಳನ್ನು ನೀಡಿ ಕಾರ್ಯಕಲಾಪಗಳನ್ನು ಮಾಡಬೇಕು ಎಂದಾಗ ಬಿಜೆಪಿಯ ಕೊಂಚಿಗೇರಿ ಹರೀಶ್ ಮಾತನಾಡಿ ದಾಖಲೆಗಳನ್ನ ಕೊಡುವ ತನಕ ಬಿಡುವುದಿಲ್ಲ ಎನ್ನುವ ಮಾತನ್ನ ಹೇಳಿದಾಗ ಪುರಸಭೆಯ ಮುಖ್ಯಾಧಿಕಾರಿಗಳು ಮದ್ಯಪ್ರವೇಶಿಸಿ ದಾಖಲೆಗಳನ್ನ ಕೊಟ್ಟಾಗ ಕಾರ್ಯಕಲಾಪ ಮುಂದುವರೆಹಿತು.

8ನೇ ವಾರ್ಡನ ಬಿಜೆಪಿ ಸದಸ್ಯ ಮಾಳ್ಗಿ ರಾಮಪ್ಪ ಮಾತನಾಡಿ 18 ಮಳಿಗೆಗಳ ಬಾಡಿಗೆ ಇದುವರೆಗೂ ವಸುಲಿಯೇ ಮಾಡಿಲ್ಲ ಬಾಡಿಗೆ ಇರುವ ಗ್ರಾಹಕರಿಗೆ ಮೂಲಭೂತ ಸೌಲಭ್ಯ ನೀಡಿಲ್ಲ ಎಂದು ಪ್ರಶ್ನಿಸಿದಾಗ ಮದ್ಯ
ಪ್ರವೇಶಿಸಿದ ಮುಖ್ಯಾಧಿಕಾರಿಗಳು ಮಾತನಾಡಿ ಡಿಸಿಯವರು ಯಾಲಂ ಮಾಡಿ ವಸೂಲಿಮಾಡಲು ಆದೇಶಿಸಿದರು ನಾವು ಎರೆಡು ಬಾರಿ ಮಳಿಗೆಗಳಿಗೆ ಬೀಗವನ್ನು ಹಾಕಿದ್ದೆವು ಆ ಸಮಯದಲ್ಲಿ ಅದ್ಯಕ್ಷರಿಗೆ ಗ್ರಾಹಕರು ಬೇಟಿ ಮಾಡಿ ತಮ್ಮ ಅಳಲನ್ನ ತೊಡಿಕೊಂಡಾಗ ಅದ್ಯಕ್ಷರು ಹಾಕಿದ ಬೀಗವನ್ನ ತೆಗೆಸಿದರು ಎಂದು ಉತ್ತರಿಸಿದರು.

ವಿರೋದಪಕ್ಷದ ನಾಯಕ ಅಬ್ದುಲ್ ಮುನಾಫ್ ರವರು ಮಾತನಾಡಿ ವಿರಕ್ತಮಠದ ಹತ್ತಿರವಿರುವ ಶೌಚಾಲಯಕ್ಕೆ ಸುಮಾರು ವಾರ್ಡಗಳ ಜನರು ಬರುತ್ತಿದ್ದು ಅವರಿಗೆ ಸೌಲಬ್ಯವೇ ಇಲ್ಲದಂತಾಗಿದೆ ಇದನ್ನು ಸರಿಪಡಿಸಲು ನಿಮ್ಮ ಕೈಯಲ್ಲಿ ಆಗುವುದಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ನಿಮ್ಮ ಸಮಸ್ಯೆಗಳಿಗೆ ನಮ್ಮ ಸಹಮತ ಇದೆ ಎಲ್ಲವನ್ನು ಪರಿಶೀಲಿಸಿ ಉತ್ತಮ ಅಭಿವೃದ್ದಿಮಾಡೋಣ ನಿಮ್ಮ ತಾಳ್ಮೆ.ನಿಮ್ಮ ಸಹಕಾರ ನಮಗೆ ಮುಖ್ಯ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

ಮುಂದಿನ ಬಾರಿ ನಡೆಯುವ ಸಾಮಾನ್ಯ ಸಭೆಗೆ ಆರೋಗ್ಯ, ಕೆಪಿಟಿಸಿಎಲ್, ಪೊಲೀಸ್, ಇತರೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಎಂದು ಹಲವು ಸದಸ್ಯರು ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗೆ ನಿಯೋಜನೆಗೊಂಡಿದ್ದಾರೆ ಹಾಗಾಗಿ ಅವರುಗಳು ಬಂದಿಲ್ಲ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಿಳಿಸುತ್ತೇನೆ ಎಂದು ಹೇಳಿದರು

ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳು:-

1.ಪಟ್ಟಣದಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದ್ದು ಅವುಗಳನ್ನು ಹಿಡಿಯಲು ಹಾಸನದ ಮಂಜುನಾಥ್ ಎಂಬುವರರನ್ನು ಕರೆಸುತ್ತೇವೆ, ಹಾಗಾಗಿ ಪುರಸಭೆಯಿಂದ ಆದೇಶ ಹಾಗೂ ಸಾರ್ವಜನಿಕರ ಮತ್ತು ಪೊಲೀಸರ ರಕ್ಷಣೆ ಅವಶ್ಯವಿರುತ್ತದೆ ಎಂದು.

2.ಸ್ಥಳೀಯವಾಗಿ 12 ಶೋಚಲಯಗಳು ಪುರಸಭೆ ವ್ಯಾಪ್ತಿಯಲ್ಲಿ ಇವೆ ಅವುಗಳನ್ನು ನಿರ್ವಹಣೆ ಮಾಡುತ್ತಿಲ್ಲ ಮತ್ತು 2 ಶೋಚಾಲಯ ಉಪಯೋಗಕ್ಕೆ ಬಾರದೇ ಇವೇ ಎಂದು ಸಭೆಯ ಗಮನಕ್ಕೆ ತಂದರು, ಅದಕ್ಕೆ ಶೋಚಾಲಯಗಳನ್ನು ದುಡ್ಡು ಕೊಟ್ಟು ಉಪಯೋಗಿಸುವಂತೆ ಮಾಡಿದರೆ ಅಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ ಇರುತ್ತದೆ ಎಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು

3.ಸಾರ್ವಜನಿಕರು ಮನೆಗಳನ್ನು ಕಟ್ಟಿಕೊಂಡು ವರ್ಷಗಳಾಗುತ್ತ ಬಂದಿವೆ ಇನ್ನು ಬಿಲ್ ಆಗಿಲ್ಲ ಅದಕ್ಕೆ ಏನು ಕ್ರಮ ತೆಗೆದುಕೊಂಡಿರಿ ಎಂಬ ಪ್ರಶ್ನೆಗೆ, ಮುಂದಿನ ತಿಂಗಳು ಸದಸ್ಯರುಗಳೆಲ್ಲರೂ ಸೇರಿಕೊಂಡು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳನ್ನು ಭೇಟಿಯಾಗಿ ಸ್ಥಳೀಯ ಪಲಾನುಭವಿಗಳ ವಾಸ್ತವಾಂಶವನ್ನು ತಿಳಿಸೋಣ ಎಂದರು.

4.ಪುರಸಭೆಯ ಕಚೇರಿಯ ಹೊಳಗೆ ಹೊರಗೆ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಪುರಸಭಾ ಸದಸ್ಯ ಶಿವಕುಮಾರ್ ಮನವಿ.

5.ಕೆಲ ವಾರ್ಡಗಳಲ್ಲಿ ರಾತ್ರಿ ಹೊತ್ತು ಮನೆಯ ಮುಂದೆ ನಿಲ್ಲಿಸಿರುವ ಬೈಕ್ ಗಳು ಕಳ್ಳತನವಾಗಿವೆ ಸದಸ್ಯರು ಸಭೆಯ ಗಮನಕ್ಕೆ ತಂದರು, ಅದಕ್ಕೆ ಪೊಲೀಸ್ ಇಲಾಖೆಗೆ ಇದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಎಂದು..

6.ಕಟ್ಟಡ ಕಾರ್ಮಿಕರ ಸಂಘವು ಮನವಿಯಂತೆ ಅವರಿಗೆ ನಿಯಮಾನುಸಾರ ಪುರಸಭೆ ವ್ಯಾಪ್ತಿಯ ಕಟ್ಟಡವನ್ನು ನೀಡಲು ಎಲ್ಲಾ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದರು

7.ಸದಸ್ಯ ಮುನಾಫ್ ಮನವಿಯಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಸಕಾಲ”ಮಾಹಿತಿ ಫಲಕವನ್ನು ಕಚೇರಿಯ ಹೊರಗಡೆ ಹಾಕಲು ಒಪ್ಪಿಗೆ

ಸಂಡೂರು ಪುರಸಭೆಯ ಅನುಮೋದಿತ ಯೋಜನಾ ವರದಿಯಲ್ಲಿರುವ ವಾಹನ ಯಂತ್ರೋಪಕರಣದಲ್ಲಿ ಜಿಲ್ಲಾಧಿಕಾರಿಗಳು ಕಾಂಪೋಸ್ಟಿಂಗ್ ಪ್ಲ್ಯಾಂಟ್ ಮಿಸಿನರಿಯನ್ನು ಖರಿದಿಸಲು 2020ರಲ್ಲೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ ಆದರೆ ಮಂಜೂರಾತಿಯಾಗಿರುವ ಕಾಂಪೋಸ್ಟಿಂಗ್ ಪ್ಲ್ಯಾಂಟ್ ಮತ್ತು ಮಸಿನರಿ ಖರಿದಿಮಾಡುವ ಕಾಮಗಾರಿಗೆ ಬಿಡ್‍ನ್ನು ಮಾಡುವ ಇ-ಪ್ರೋಕ್ಯೂರ್ ಮೆಂಟ್ ಪೋರ್ಟಲ್ ನಲ್ಲಿ ಕರೆಯಲಾಗಿರುತ್ತದೆ ಟೆಂಡರಿಗೆ 5 ಬಿಡ್ದಾರರು ಬಿಡ್ ಸಲ್ಲಿಸಿದ್ದು ಬಿಡ್ದಾರರಲ್ಲಿ ಏಕಮಾತ್ರ ಬಿಡ್ಡಾದಾರರು ಅರ್ಹತೆಯನ್ನ ಹೊಂದಿರುತ್ತಾರೆ ಅರ್ಹರಾದ ಮೇ|| ಸಾಧನ ಎನ್ವಿರೋ ಇಂಜಿನೀರಿಂಗ್ ಸರ್ವಿಸ್ಸ್ ಬೆಂಗಳೂರು ರವರು ನಮೂದಿಸಿ ಧರಗಳು 29.00 ಲಕ್ಷಗಳಿಗಿಂತ 3.8% ರಷ್ಟು ಹೆಚ್ಚು ಇರುತ್ತದೆ ಬಿಡ್ಡಾದಾರರಿಗೆ ದರ ಸಂದಾನ ಪತ್ರ ಕಳುಹಿಸಲಾಗಿದ್ದು 0.6%ರಷ್ಟು ಕಡಿಮೆ ಮಾಡಿ ಕಳುಹಿಸಿರುತ್ತಾರೆ.
ಅನುಮೋದನೆಗಾಗಿ ಹೆಚ್ಚುವರಿ ಮೊತ್ತ 95000 ಸಾವಿರ ಮೊತ್ತ ಪುರಸಭೆ ನಿಧಿಯಿಂದ ನೀಡಲು ಕುರಿತು ಸಭೆಯ ಗಮನಕ್ಕೆ ತರಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು ಈ ಕಲಾಪದಲ್ಲಿ ಪಕ್ಷೇತರ ಅಬ್ಯರ್ಥಿ ತಿಪ್ಪಮ್ಮ ನವರು ಗೈರು ಹಾಜರಿಯಾಗಿದ್ದು ವಿಶೇಷವಾಗಿತ್ತು ಕಾಂಗ್ರೇಸ್ ನ 12 ಸದಸ್ಯರು ಬಿಜೆಪಿಯ 10 ಸದಸ್ಯರು ಕಲಾಪದಲ್ಲಿ ಬಾಗವಹಿಸಿದರು.

LEAVE A REPLY

Please enter your comment!
Please enter your name here