ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ 2020 -21 ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿ ಹೊಂದಿದೆ; ಕೆ.ಎಸ್. ನಾಗರಾಜ

0
101

ಸಂಡೂರು ತಾಲೂಕಿನ ಪ್ರಸಕ್ತ 2020-21 ನೇ ಸಾಲಿನಲ್ಲಿ ಆರ್ಥಿಕ ಹಿಂಜರಿತದ ನಡುವೆಯೂ ಪಟ್ಟಣದ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಉತ್ತಮ ಆರ್ಥಿಕ ಪ್ರಗತಿ ಹೊಂದಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಆದ್ಯಕ್ಷರಾದ ಕೆ.ಎಸ್. ನಾಗರಾಜರವರು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 100 ಕೋಟಿಗೂ ಹೆಚ್ಚು ವ್ಯವಹಾರ ನಡೆದಿದ್ದು, 2.32 ಕೋಟಿ ರೂ ಒಟ್ಟು ಲಾಭಗಳಿಸಿ, ತೆರಿಗೆಯ ನಂತರ
1.53 ರೂ ಕೋಟಿ ನಿವ್ವಳ ಲಾಭಗಳಿಸಿದೆ. ಕರೋನಾ ಸಂಕಟದ ನಡುವೆಯೂ ಶೇ. 99.50 ರ ನಡುವೆ ಸಾಲ ವಸೂಲಾತಿಯಾಗಿದ್ದು ಬ್ಯಾಂಕಿನ ಗ್ರಾಹಕರಿಗೆ ಹಾಗೂ ಸದಸ್ಯರಿಗೆ ಅದ್ಯಕ್ಷರು ಅಭಿನಂದನೆಗಳನ್ನು ತಿಳಿಸಿದರು.

ಈ ಸಾಲಿನ ಅಂತ್ಯಕ್ಕೆ ಠೇವಣಿಗಳು 84.89 ರೂ ಕೋಟಿ ಇದ್ದು ಸಾಲ ಮತ್ತು ಮುಂಗಡಗಳು 20.30 ರೂ ಕೋಟಿಗಳು ಇರುತ್ತದೆ ಹಾಗೂ ಸ್ವಂತ ಬಂಡವಾಳ 11.13 ರೂ ಕೋಟಿಗಳು ಇದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here