ತಾಳೂರು ಗ್ರಾಮದಲ್ಲಿ “ಬೇಟಿ ಬಚಾವೋ ಬೇಟಿ ಪಡಾವೋ” ಕುರಿತು ಸೈಕಲ್ ಜಾಥ ಕಾರ್ಯಕ್ರಮ

0
137

ಸಂಡೂರು:ಜ: 23: ತಾಲೂಕಿನ ತಾಳೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ತಾಳೂರು ಸರ್ಕಾರಿ ಪ್ರೌಢಶಾಲೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ”ಬೇಟಿ ಬಚಾವೋ ಬೇಟಿ ಪಡಾವೋ” ಮತ್ತು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಾಗೂ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,ಸೈಕಲ್ ಜಾಥ ಕಾರ್ಯಕ್ರಮ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀದೇವಿ, ಮಾಬುನ್ನಿ,ಮತ್ತು ಆಶಾಭಿ ಅವರು ಚಾಲನೆ ನೀಡಿದರು, ಕಾರ್ಯಕ್ರಮ ಕುರಿತು ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ ಪರಸಣ್ಣನವರ್ ಮಾತನಾಡಿ ಹೆಣ್ಣು ಸಂತತಿಯನ್ನು ಹೆಚ್ಚು ಮಾಡಬೇಕಿದೆ, ಮುಂದಾಗುವ ಅಪಾಯಗಳನ್ನು ತಪ್ಪಿಸಲು ಇಂದೇ ಮನಸ್ಸು ಮಾಡಬೇಕಿದೆ, ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸ ಬೇಕು, ಹೆಣ್ಣು ಮಕ್ಕಳ ಪ್ರೋತ್ಸಾಹಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ಮತ್ತು ಸುಕನ್ಯಾ ಸಂವೃದ್ಧಿ ಯೋಜನೆಗಳು ಸಹಕಾರಿಯಾಗಿದೆ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ವರ್ಷ ಜನವರಿ 25 ರಂದು ಹೆಣ್ಣುಮಕ್ಕಳ ಅನುಪಾತ ಮತ್ತು ಮುನ್ನೆಚ್ಚರಿಕೆ ಕುರಿತು ಜಾಗೃತಿಯನ್ನು ಮೂಡಿಸಲು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತದೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಮಾಡಲು ಕ್ರಮಗಳನ್ನು ಮುಂದುವರೆಸಲಾಗುವುದು, ಕಿಶೋರಿಯರು ಋತುಚಕ್ರ ನೈರ್ಮಲ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಾಬುನ್ನಿ,ಆಶಾಭಿ,ಶ್ರೀದೇವಿ, ಅಂಗನವಾಡಿ ಕಾರ್ಯಕರ್ತೆಯರಾದ ಅರುಣಾ,ಪ್ರೇಮಾ,ವೀಣಾ,ಫಕ್ರುಭಿ,ಯಶೋಧ,ಯಂಕಮ್ಮ,ಪಾರ್ವತಿ,ಮಂಗಳ, ಸುರೇಶ್, ಶರಣಪ್ಪ,ಮಾರುತಿ,ಬಸಪ್ಪ,ಕೊಟ್ರಪ್ಪ,ವೀರಭದ್ರಗೌಡ,ಕಾಲುಸಾಬ್,ವೀರೇಶ್ ವಿದ್ಯಾರ್ಥಿಗಳಾದ ರಾಧಿಕಾ, ಸೃಷ್ಟಿ, ಸ್ವಪ್ನ, ಜ್ಯೋತಿ, ಚಂದ್ರಿಕಾ,ಮಮತಾ, ಪೂರ್ಣಿಮಾ, ದಿವ್ಯಾ,ಪೂಜಾ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here