ಕೋವಿಡ್ ಲಸಿಕಾಕರಣ ಪ್ರಗತಿ ಪರಿಶೀಲನೆಗೆ ಜಿಲ್ಲಾ ನರ್ಸಿಂಗ್ ಅಧಿಕಾರಿ ಬೇಟಿ,

0
649

ಸಂಡೂರು:ಪೆ:೦೯:-ಸಂಡೂರು ತಾಲೂಕಿನ ಕೋವಿಡ್ ಲಸಿಕಾಕರಣ ಪ್ರಗತಿ ಪರಿಶೀಲನೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಕಛೇರಿಯಿಂದ ಜಿಲ್ಲಾ ನರ್ಸಿಂಗ್ ಅಧಿಕಾರಿಗಳು ತೋರಣಗಲ್ಲು ಮತ್ತು ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮಗಳ ಲಸಿಕಾ ಸತ್ರಗಳನ್ನು ಪರಿಶೀಲನೆ ಮಾಡಿದರು, ಮೊದಲ ಡೋಸ್ ಲಸಿಕೆ ಪಡೆಯುತ್ತಿರುವವರ ಮತ್ತು ಎರಡನೇ ಡೋಸ್ ಬಾಕಿ ಇರುವವರ ಹಾಗೂ ಪ್ರಿಕಾಷನ್ ಡೋಸ್ ಪಡೆಯದಿರುವವರ ವಿವರ ಪಡೆದರು, ಎರಡನೇ ಡೋಸ್ ಲಸಿಕೆ ಪಡೆಯಲು ಯಾಕೆ ಬರುತ್ತಿಲ್ಲ, ಬಾಕಿ ಇರುವವರೆಲ್ಲರಿಗೂ ಮೊಬೈಲ್ ಕರೆ ಮಾಡಿ ಗುರಿ ಸಾಧಿಸಲು ಸೂಚಿಸಿದರು,

ಹಾಗೆ ಹಿರಿಯ ನಾಗರೀಕರ ಆರೋಗ್ಯ ವಿಚಾರಿಸಿ, ದೀರ್ಘಕಾಲದ ಅನಾರೋಗ್ಯ ಇದ್ದವರನ್ನು ತಕ್ಷಣ ಮನವೊಲಿಸಿ ಲಸಿಕೆ ಕೊಡಿಸಿ, ಹಾಗೆ ಅರವತ್ತು ವರ್ಷ ಮೇಲ್ಪಟ್ಟ ಎಲ್ಲರನ್ನೂ ಕರೆತಂದು ಹಾಕಿಸುವಂತೆ ಸೂಚಿಸಿದರು, ಕೆಲವು ಹಳ್ಳಿಗಳಲ್ಲಿ ಜನ ಲಸಿಕೆ ಪಡೆಯದಿರುವುದು ಬೇಸರದ ಸಂಗತಿ, ಕೋವಿಡ್ ಮುಗಿತು ಎಂದು ನಿರ್ಲಕ್ಷ ಸರಿಯಲ್ಲ, ಜನರಿಗೆ ತಿಳಿ ಹೇಳಬೇಕು, ಒಂದು ಬಾರಿ ಅಲ್ಲ ಪದೆ ಪದೆ ಬೇಟಿಕೊಟ್ಟು ಹೇಳಿದಾಗ ಒಪ್ಪಿಕೊಳ್ಳುವ ಸಾಧ್ಯತೆ ಇದೆ, ಅವರ ಅಂಜಿಕೆ ದೂರ ಮಾಡುವ ಕರ್ತವ್ಯ ನಮ್ಮದು ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ನರ್ಸಿಂಗ್ ಅಧಿಕಾರಿ ಶ್ರೀಮತಿ ಅಮೀನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ವಿಜಯಶಾಂತಿ, ಪದ್ಮಾ, ಶ್ರೀದೇವಿ, ರಾಜೇಶ್ವರಿ, ರೇಖಾ, ಹುಲಿಗೆಮ್ಮ,ಆಶಾ, ಗೋವಿಂದಮ್ಮ,ತೇಜಮ್ಮ, ಮಂಜುಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here