ಎಫ್‍ಪಿಎಐ ನ ನೂತನ ಪದಾಧಿಕಾರಿಗಳ ಆಯ್ಕೆ.

0
94

ಬಳ್ಳಾರಿ,ಜ.21: ಬಳ್ಳಾರಿಯ ಫ್ಯಾಮಿಲಿ ಪ್ಲಾನಿಮಗ್ ಅಸೋಸಿಯೇಶನ್ ಆಫ್ ಇಂಡಿಯಾದ ನಗರಶಾಖೆಯ ಕಚೇರಿಯಲ್ಲಿ ಇತ್ತೀಚೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಯ ಸಭೆ ನಡೆಯಿತು.
ನೂತನ ಅಧ್ಯಕ್ಷರಾಗಿ ಟಿ.ಜಿ. ವಿಠಲ್ ರವರನ್ನು 3 ವರ್ಷದ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು,ಸಂಧ್ಯಾ ಸುಧಾಕರ್ ಹಾಗೂ ಭಾಗ್ಯಕೆ.ಆರ್ ಅವರನ್ನು ಉಪಾಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಗಳನ್ನಾಗಿ ಡಾ.ಚಂದನ್‍ರವರನ್ನು, ರಮಾದೇವಿ ಮತ್ತು ವಿ.ವಿಷ್ಣುರವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ.
ಈ ಸಭೆಯ ಕುರಿತು ಮಾತನಾಡಿದ ಈPಂI ಕೇಂದ್ರ ಕಛೇರಿಯ ಉಪಾಧ್ಯಕ್ಷರಾದ ವಿಜಯಸಿಂಹ ಸತತ 72 ವರ್ಷಗಳಿಂದ ಬಡಜನ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಸಮಾಜದ ಜನರಿಗೆ ಈ ಸಂಸ್ಥೆಯಿಂದ ಆನೇಕ ಸೇವೆಗಳನ್ನು ಒದಗಿಸಿದ್ದು, ಈ ಸಂಸ್ಥೆಯು ಈ ಮಟ್ಟಕ್ಕೆ ತಲುಪಲು ಸೇವೆ ಸಲ್ಲಿಸಿದ ಜಿಲ್ಲಾ ಸ್ವಯಂ ಸೇವಕರಿಗೂ, ಸಿಬ್ಬಂದಿ ವರ್ಗದವರಿಗೂ, ಪದಾಧಿಕಾರಿಗಳಿಗೂ. ಮಹಿಳಾ ಸ್ವ ಸಹಾಯ ಗುಂಪುಗಳಿಗೂ ಅಭಿನಂದನೆಗಳನ್ನು ತಿಳಿಸಿದರು.
ಡಾ. ಎಸ್.ಕೆ. ಅರುಣ್ ರವರು ಮಾತನಾಡಿ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಬೆಳೆಯಲು ಸದಸ್ಯರ ಪೋತ್ಸಾಹ ಮತ್ತು ಸಿಬ್ಬಂದಿಗಳ ಪರಿಶ್ರಮ ಕಾರಣ. ಇನ್ನೂಮುಂದೆ ಎಲ್ಲರೂ ಒಗ್ಗೂಡಿ ಹೆಚ್ಚಿನ ಉತ್ತಮ ಕೆಲಸ-ಕಾರ್ಯ ಮಾಡೋಣ ಎಂದರು.
ಡಾ. ಬಿ.ಕೆ. ಸುಂದರ್ ಎಫ್‍ಪಿಎಐ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆಸಲ್ಲಿಸಲು ಮುಂದೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಪಿ.ಎಫ್.ಎ.ಐ ನ ವ್ಯವಸ್ಥಾಪಕರಾದ ವಿಜಯಲಕ್ಷ್ಮೀ ಸೇರಿದಂತೆ ಇನ್ನೀತರರು ಇದ್ದರು.

LEAVE A REPLY

Please enter your comment!
Please enter your name here