ಕಂದಾಯ ಇಲಾಖೆಯ ಅಧಿಕಾರಿಗಳ, ನೌಕರರ,ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕಠಿಣ ಕಾನೂನು ರೂಪಿಸುವಸಂತೆ ಮನವಿ

0
169

ಸಂಡೂರು:ಜ:29:- ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ತಹಶೀಲ್ದಾರರ ಮುಖಾಂತರ ಹುಮ್ನಾಬಾದ್ ತಾಲೂಕು ಬೀದರ್ ಜಿಲ್ಲೆಯ ತಹಶೀಲ್ದಾರ್ ಡಾ.ಪ್ರದೀಪ್ ಹಿರೇಮಠರವರ ಮೇಲೆ ನಡೆದ ಹಲ್ಲೆಯ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಾನೂನಿನ ಯಾವುದೇ ಭಯವಿಲ್ಲದೆದಂತೆ ಹಲವು ಪುಂಡರು ತಹಶೀಲ್ದಾರವರ ಕಛೇರಿಯಲ್ಲೇ ತಹಶೀಲ್ದಾರವರಿಗೆ ಎದೆಗೆ ಒದ್ದು, ಹಲ್ಲೆ ಮಾಡಿರುವ ರೀತಿ ಕಂದಾಯ ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ವಲಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ತಾಲೂಕು ದಂಡಾಧಿಕಾರಿಗಳ ಮೇಲೆ ಈ ರೀತಿಯ ಹಲ್ಲೆ ಮಾಡಿದರೆ ಸಾಮಾನ್ಯ ನೌಕರರ ಸ್ಥಿತಿ ಹೇಗೆ ಎಂಬುವ ಭಯ ನೌಕರರ ವಲಯದಲ್ಲಿ ಕಾಡುತ್ತಿದೆ ಈ ಘಟನೆಯನ್ನು ನಮ್ಮ ರಾಜ್ಯ ಸಂಘ ಅತ್ಯಂತ ತೀವ್ರವಾಗಿ ಖಂಡಿಸುತ್ತಿದೆ.

ಕಂದಾಯ ಇಲಾಖೆ ಆಡಳಿತ ಇಲಾಖೆಯಾಗಿದ್ದು, ಆಡಳಿತ ಇಲಾಖೆಯ ಅಧಿಕಾರಿಗಳ,ನೌಕರರ, ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಗ್ರಾಮ ಸಹಾಯಕರ ಮೇಲೆ ಪದೇ ಪದೇ ಈ ರೀತಿಯ ಹಲ್ಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ

ಉದಾ:-
*ಅಕ್ರಮ ಸರ್ಕಾರಿ ಜಮೀನಿನ ಒತ್ತುವರಿದಾರನು ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರವರನ್ನು ಹತ್ಯೆ ಮಾಡಿದ್ದು.
*ಅಕ್ರಮ ಮರಳು ದಂಧೆಕೋರರು ರಾಯಚೂರು ಜಿಲ್ಲೆ ಮನವಿ ತಾಲೂಕು ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ರವರ ಮೇಲೆ ಲಾರಿ ಹಾಯಿಸಿ ಹತ್ಯೆ ಮಾಡಿದ್ದು.
*ಅಕ್ರಮ ಮರಳು ದಂಧೆಕೋರರು ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಗ್ರಾಮಲೆಕ್ಕಾಧಿಕಾರಿ ವೆಂಕಟಸ್ವಾಮಿರವರ ಮನೆಗೆ ನುಗ್ಗಿ ಅವರ ಮತ್ತು ಕುಟುಂಬದ ಮೇಲೆ ಲಾಂಗು, ಮಚ್ಚುಗಳಿಂದ ಮರಣಾಂತಿಕವಾಗಿ ಹಲ್ಲೆ ಮಾಡಿದ್ದು.
*ಕೆ ಆರ್ ಎಸ್ ಪಕ್ಷದವರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ಮೇಲೆ ಹಲ್ಲೆ ಮಾಡಿ, ಸುಳ್ಳು ಪ್ರಕರಣ ದಾಖಲು ಮಾಡಿದ್ದು, ಹೀಗೆ ಸಾಲು ಸಾಲು ಪ್ರಕರಣಗಳು ರಾಜ್ಯಾದ್ಯಂತ ನಡೆಯುತ್ತಿವೆ.

*ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸುವುದು,
*ಅನಧಿಕೃತ ಬಡಾವಣೆಗಳ ತೆರವು ಕಾರ್ಯಾಚರಣೆ ಮಾಡುವುದು.
*ಅಕ್ರಮ ಮರಳು, ಗ್ರಾವೆಲ್ ಸಾಗಿಸುವುದನ್ನು ತಡೆಗಟ್ಟಬವುದು
*ಚುನಾವಣೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಡದೆ ನೈತಿಕ ಚುನಾವಣೆ ನಡೆಯುವಂತೆ ಕಾನೂನು ಕ್ರಮ ಜರುಗಿಸುವುದು
*ಕಂದಾಯ ಕೋರ್ಟ್ ನಡೆಸುವುದು.

ಹುಮ್ನಾಬಾದ್ ತಾಲೂಕು ಬೀದರ್ ಜಿಲ್ಲೆಯ ಡಾ. ಪ್ರದೀಪ್ ಕುಮಾರ್ ಹಿರೇಮಠ ತಹಶೀಲ್ದಾರವರ ಮೇಲೆ ಕಾನೂನಿನ ಮೇಲೆ ಯಾವುದೇ ರೀತಿಯ ಭಯವಿಲ್ಲದಂತೆ ತಹಶೀಲ್ದಾರವರ ಕಛೇರಿಯಲ್ಲೇ ಎದೆಗೆ ಒದ್ದು, ಹಲ್ಲೆ ಮಾಡಿರುವ ಪುಂಡರ ವಿರುದ್ಧ ರಾಜ್ಯಕ್ಕೆ ಮಾದರಿಯಾಗುವಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಕಂದಾಯ ಇಲಾಖೆಯ ಅಧಿಕಾರಿಗಳ, ನೌಕರರ, ಕಂದಾಯ ನಿರೀಕ್ಷಕರ, ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಗ್ರಾಮ ಸಹಾಯಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪ್ರತ್ಯೇಕವಾದ ಕಠಿಣ ಹೊಸ ಕಾನೂನು ರೂಪಿಸುವುದು.

ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ, ಗುಂಡ ಕಾಯ್ದೆ ಹಾಕಿ ಕನಿಷ್ಠ 5 ವರ್ಷ ಆರೋಪಿಯನ್ನು ಗಡಿಪಾರು ಮಾಡಬೇಕು

ಎಲ್ಲಾ ಉಪ ವಿಬಾಗಧಿಕಾರಿಗಳಿಗೆ, ತಹಶೀಲ್ದಾರವರಿಗೆ,ಸೂಕ್ತ ಭದ್ರತೆಗಾಗಿ ಒಬ್ಬ ಅಂಗರಕ್ಷಕರನ್ನು ನೇಮಕ ಮಾಡಬೇಕು.

ಎಲ್ಲಾ ಉಪ ವಿಭಾಗಾಧಿಕಾರಿಗಳ, ತಹಶೀಲ್ದಾರವರ ಕಚೇರಿಗೆ ಸೂಕ್ತ ಭದ್ರತೆಗಾಗಿ ಪ್ರತಿದಿನ ಪೊಲೀಸ್ ಸಿಬ್ಬಂದಿ ನೇಮಿಸಬೇಕು

ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅಗತ್ಯ ಭದ್ರತೆ, ರಕ್ಷಣೆ ನೀಡಿ ಕಠಿಣ ಕಾನೂನು ರೂಪಿಸಲು ಈ ಮೂಲಕ ಒತ್ತಾಯಿಸಿದರು

ಈ ಸಂಧರ್ಭದಲ್ಲಿ ಕೆ. ಎಂ.ಶಿವಕುಮಾರ್ ಶಿರಸ್ತೇದಾರರು, ಹೆಚ್,ರುದ್ರಪ್ಪ, ಶಿರಸ್ತೇದಾರರು,ವರಲಕ್ಷ್ಮಿ ಶಿರಸ್ತೇದಾರರು, ಈಶ್ವರಪ್ಪ ಕಂದಾಯ ನಿರೀಕ್ಷರು, ಎ. ಎರ್ರಿಸ್ವಾಮಿ ಕಂದಾಯ ನಿರೀಕ್ಷಕರು, ಬಿ.ಆರ್.ಶಿವಕುಮಾರ್ ಗ್ರಾಮ ಲೆಕ್ಕಾಧಿಕಾರಿಗಳ ಅಧ್ಯಕ್ಷರು ಸಂಡೂರು, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು,ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here