ಲಸಿಕೆ ಹಾಕಿಸಿಕೊಳ್ಳದೇ ಅನ್ಯ ಮಾರ್ಗವಿಲ್ಲ ಹಠಮಾರಿತನ ಬಿಟ್ಟು ಲಸಿಕೆ ಪಡೆಯಿರಿ ಕ್ಚೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
214

ಗುಂಡ್ಲಹಳ್ಳಿ: ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡ ಗ್ರಾಮ ಗುಂಡ್ಲಹಳ್ಳಿಯಲ್ಲಿ ವಿಶೇಷ ಲಸಿಕಾ ಕೇಂದ್ರ ತೆರೆದು ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಜನರಿಗೆ ಲಸಿಕೆಯ ಮಹತ್ವ ತಿಳಿಸಿ ಕೊಡುವ ಪ್ರಯತ್ನ ಮಾಡಲಾಯಿತು, ಕೋವಿಡ್ ಲಸಿಕೆ ಎಂದರೇನೇ ಹೌಹಾರಿ ಬರುತ್ತಿದ್ದಾರೆ ಜನ, ನಮ್ಮ ಹಳ್ಳಿಗೆ ಕೋವಿಡ್ ಭಯವಿಲ್ಲ ನಾವು ಸುರಕ್ಷಿತವಾಗಿ ಇದ್ದೇವೆ ನಮಗೆ ಲಸಿಕೆ ಬೇಡವೆಂದು ವಾಗ್ವಾದಕ್ಕೆ ಇಳಿಯುತ್ತಾರೆ ಇಲ್ಲಿಯ ಜನ, 772 ಜನಸಂಖ್ಯೆ ಉಳ್ಳ ಚಿಕ್ಕ ಗ್ರಾಮ ಎಮ್ ಗುಂಡ್ಲಹಳ್ಳಿ ಇಲ್ಲಿ ಲಸಿಕೆ ಹಾಕಲು 542 ಫಲಾನುಭವಿಗಳನ್ನು ಗುರುತಿಸಿದ್ದು ಇಲ್ಲಿಯವರೆಗೆ ಕೇವಲ 53 ಜನರು ಮಾತ್ರ ಹಾಕಿಸಿಕೊಂಡಿದ್ದರು, ಅದೂ ಆರೋಗ್ಯ ಇಲಾಖೆಯ ಒತ್ತಾಯದ ಮೇರೆಗೆ ಗಣಿ, ಕಾರ್ಖಾನೆಗೆ ಹೋಗುವವರು ಮತ್ತು ಕೆಲವು ಆಸಕ್ತಿ ಇರುವವರು ಮಾತ್ರ ಲಸಿಕೆ ಪಡೆದಿದ್ದಾರೆ,

ಇಂದು ಮನೆ ಮನೆಗೆ ಬೇಟಿನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಲಾಯಿತು, ಒಟ್ಟು 52 ಜನಕ್ಕೆ ಲಸಿಕೆ ನೀಡಲಾಯಿತು, ಇಲ್ಲಿಯ ವರೆಗೆ 53+52 =105 ಜನರು ಮಾತ್ರ ಮೊದಲ ಡೋಸ್ ಪಡೆದಿದ್ದು ಕೇವಲ 11 ಜನರು ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ, ಕೋವಿಡ್ ಬಗ್ಗೆ ಭಯವೂ ಇದೆ ಹಾಗೇಯೇ ಲಸಿಕೆ ಬಗ್ಗೆಯೂ ಭಯ ಇದೆ, ಜ್ವರ,ಮೈಕೈ ನೋವು ಬರುವ ಬಗ್ಗೆಯೇ ಹೇಳುತ್ತಿದ್ದು ಅವರಿಗೆ ಲಸಿಕೆಯ ಭಯ ಹೋಗಲಾಡಿಸುವ ಪ್ರಯತ್ನ ಮಾಡಲಾಗಿ ಬಂದು ಲಸಿಕೆ ಪಡೆದರು,

ಮನವೊಲಿಕೆ ನಂತರ ಮೇಸ್ತ್ರಿ ಸೋಮನಗೌಡ ಕುಟುಂಬದ ಆರು ಜನ ಬಂದು ಲಸಿಕೆ ಪಡೆದದ್ದು ನಮ್ಮ ಶ್ರಮ ಸಾರ್ಥಕವಾಯಿತು

ಈ ಸಂದರ್ಭದಲ್ಲಿ ಎಮ್.ಎಮ್.ಉ.ತಂಡದ ಡಾ.ಪೂಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸಂರಕ್ಷಣ ಅಧಿಕಾರಿ ಶಂಕ್ರಮ್ಮ, ಶೃತಿ, ಲತಾ, ನಾಗವೇಣಿ, ಶರತ್, ಆಶಾ ಕಾರ್ಯಕರ್ತೆ ಅನುಪಮಾ, ಗೌರಮ್ಮ, ಲಕ್ಷ್ಮಿದೇವಿ, ರುದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ವೆಂಬ, ಕಾಳಮ್ಮ, ಯಾದವ ಸಂಘದ ಅಧ್ಯಕ್ಷರಾದ ಗವಿಸಿದ್ದ ಕೆ, ಶ್ರೀಕೃಷ್ಣ, ರಾಮಸ್ವಾಮಿ ಮುಂಖಡರಾದ ರಾಜಶೇಖರ,ರಾಮನಗೌಡ, ಚಿದಾನಂದಪ್ಪ, ಗಾದೆಪ್ಪ, ನಾಗರಾಜ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here