ವ್ಯಕ್ತಿ ಕಾಣೆ ಪ್ರಕರಣ ದಾಖಲು

0
104

ಬಳ್ಳಾರಿ.ಫೆ.05 : ಬಳ್ಳಾರಿ ನಗರದ ವಡ್ಡರ ಬಂಡೆ ಏರಿಯಾ ಜಂಡಾಕಟ್ಟಿ ನಿವಾಸಿಯಾದ 36ವರ್ಷದ ಮೊಹಮ್ಮದ್ ಗೌಸ್ ಎನ್ನುವ ವ್ಯಕ್ತಿ ಜ.26 ರಂದು ಸಂಜೆ 4 ಗಂಟೆಗೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ಮೊಹ್ಮದ್ ಗೌಸ್ ಅವರ ಪತ್ನಿ ರಜಿಯಾ ಅವರು ಬಳ್ಳಾರಿ ನಗರದ ವಡ್ಡರ ಬಂಡೆಯ ಜಂಡಾಕಟ್ಟೆಯ ಬಳಿ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ ಅಂತ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು:ಅಂದಾಜು 5.6 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ತಲೆಯಲ್ಲಿ ಕಪ್ಪು-ಬಿಳಿ ಮಿಶ್ರೀತ ಕೂದಲು, ಕನ್ನಡ,ತೆಲುಗು,ಹಿಂದಿ ಭಾಷೆ ಮಾತನಾಡುತ್ತಾನೆ, ಮೈಮೇಲೆ ಆರೆಂಜ್ ಕಲರ್‍ನ ಟೀ-ಶರ್ಟ್,ಲೈಟ್ ಕಲರ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಠಾಣೆಯ ದೂ:08392-272022. ಪಿಐ.9480803045,9480803081 ಗೆ ಸಂರ್ಪಕಿಸಬಹುದಾಗಿದೆ.

LEAVE A REPLY

Please enter your comment!
Please enter your name here