ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಮನವಿ..!!

0
119

ಸಂಡೂರು:,ಪೆ:೧೦:-ಸಂಡೂರು ತಾಲೂಕಿನ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿಯ ಕರೆಯ ಮೇರೆಗೆ, ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸುರಕ್ಷಾ ಭವನ ಬೆಂಗಳೂರು ಇವರುಗಳಿಗೆ, ತಾಲೂಕಿನ
ಕಾರ್ಮಿಕ ನಿರೀಕ್ಷಕರು ಸಂಡೂರು ಇವರಿಗೆ ತೋರಣಗಲ್ಲು ನಾಡ ಕಚೇರಿ ಇವರ ದ್ವಾರ ಎಮ್.ರವಿದಾಸ್ ಕಾರ್ಮಿಕ ನಿರೀಕ್ಷಕರು ಸಂಡೂರು ಹಾಗೂ ಪರಶುರಾಮ್ DEO ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬೇಡಿಕೆಗಳು:
*ಕಟ್ಟಡ ಉದ್ಯಮವನ್ನು ರಕ್ಷಿಸಬೇಕು,
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನು 1996 ಹಾಗೂ ಸೆಸ್ ಕಾನೂನು 1996 ಈ ಎರಡು ಕಾನೂನುಗಳನ್ನು ಪುನರ್ ಸ್ಥಾಪಿಸಬೇಕು,
*ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್ಟಿ ಕಡಿತಗೊಳಿಸಬೇಕು,
*ಅಂತರರಾಜ್ಯ ವಲಸೆ ಕಾರ್ಮಿಕರ ಕಾನೂನು 1979 ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು,
ಕೋವಿಡ್ ನಿಂದ ಮೃತಪಟ್ಟ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಲು ಹಾಗೂ ಕೋವಿಡ್ ನಿಂದ ಗುಣಮುಖರಾದ ಫಲಾನುಭವಿಗಳ ವೈದ್ಯಕೀಯ ವೆಚ್ಚ ಭರಿಸಲು ಒತ್ತಾಯ,
*ಮದುವೆ ಧನಸಹಾಯ ಹೆಚ್ಚಿಸಬೇಕು,
ಸಹಜ ಮರಣದ ಪರಿಹಾರ ಹೆಚ್ಚಿಸಬೇಕು,
ಅಪಘಾತ ಮರಣ ಪರಿಹಾರದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಿ,
*ಹೆರಿಗೆ ಭತ್ತೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಿ,
*ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಧನಸಹಾಯ ನೀಡಿ ಎಂದು 19 ಬೇಡಿಕೆಗಳ ಮನವಿಯನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ.ದೇವಣ್ಣ,
ಮುಖಂಡರಾದ ಕೆ.ದೇವಣ್ಣ, ಸಣ್ಣಸ್ವಾಮಿ, ಕೆ ಅರುಣ, ಕೆ.ರಂಗನಾಥ ರಾಜು, ಕೆ ಸತ್ಯಣ್ಣ, ಕೆ ಹಾಲಸ್ವಾಮಿ, ಕೆ ಹೊನ್ನೂರಪ್ಪ, ಕೆ ಬಸವರಾಜ, ಎನ್ ಅಂಜಿ,
ಪ್ರಾಂತ ರೈತ ಸಂಘ ಕುರೇಕುಪ್ಪ ಘಟಕದ ಅಧ್ಯಕ್ಷರಾದ ಜಿ.ಪಂಪನಗೌಡ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here