ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು.

0
298

ಸಂಡೂರು,:ಪೆ:೧೧:-ಪಟ್ಟಣದ ವಿಜಯ ಸರ್ಕಲ್ ಬಳಿ ತಾಲೂಕಿನ ಬಿಜೆಪಿ ಪಕ್ಷದ ಕಾರ್ಯಕರ್ತರು, ಘಟಕಗಳ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು, ಸೇರಿಕೊಂಡು ದಿನಾಂಕ:09 ರಂದು ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಹಾಗೂ ಇತರೆ 60 ಜನವಸತಿಗಳಿಗೆ 131.21 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 10.02.2022 ರಂದು ಗುರುವಾರ ಸಾಮೂಹಿಕವಾಗಿ ಅಭಿನಂದನೆಗಳನ್ನು ಸಲ್ಲಿಸಸುತ್ತಾ ಸಂಭ್ರಮಾಚರಣೆಯನ್ನು ಆಚರಿಸಿದರು.

ಸಂಡೂರು ಮಹಾರಾಜರಾದ ಶ್ರೀ ಕಾರ್ತಿಕೇಯ ಎಂ ಘೋರ್ಪಡೆ ,ಅವರ ಸತತ ಪ್ರಯತ್ನದ ಫಲವಾಗಿ ಮತ್ತು ಬಿ ಶ್ರೀರಾಮುಲು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಸನ್ಮಾನ್ಯ ಶ್ರೀ ವೈ ದೇವೇಂದ್ರಪ್ಪನವರು ಸಂಸದರು ಬಳ್ಳಾರಿ ಅವರುಗಳ ಸಹಕಾರದಿಂದ ಬಳ್ಳಾರಿ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸಂತಸ ತಂದಿದ್ದು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಮತ್ತು ಇತರೆ 60 ಜನವಸತಿಗಳಿಗೆ 131.21 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ  ಅನುಮೋದನೆ.
√ ಸಂಡೂರು ತಾಲ್ಲೂಕಿನ 60 ಹಳ್ಳಿಯ ಸಾವಿರಾರು ಜನರಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ.
√  ಡಿ.ಎಂ.ಎಫ್ ನಿಂದ – 58.13 ಕೋಟಿ , ಕೇಂದ್ರದ ಜಲ್ ಜೀವನ್ ಮಿಷನ್ – ಕೇಂದ್ರ ಸರ್ಕಾರದಿಂದ – 58.13 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ – 14.95 ಕೋಟಿ
ಒಟ್ಟು – 131.21 ಕೋಟಿ ಹಣದಿಂದ ಯೋಜನೆಗೆ ಸಚಿವ ಸಂಪುಟ ಅಸ್ತು ಎಂದಿದ್ದು ಆಡಳಿತಾತ್ಮಕ ಅನುಮೋದನೆ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರ ಸಂತಸ ಕಣ್ತುಂಬುವಂತಿತ್ತು.

ಈ ಸಂದರ್ಭದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮತ್ತು ಶ್ರಮಿಸಿದ ಎಲ್ಲಾ ಮಹನೀಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಒಂದು ಅಭಿನಂದನಾ ಕಾರ್ಯಕ್ರಮದಲ್ಲಿ ಮಂಡಲ ಉಪಾಧ್ಯಕ್ಷರುಗಳಾದ ಎರ್ರಿಸ್ವಾಮಿ ಕರಡಿ, ಬಿಎಂಟಿ ಮಂಜುನಾಥ್, ಆರ್ .ಟಿ. ರಘುನಾಥ್, ಪುರಸಭೆ ಸದಸ್ಯರಾದ
ಹರೀಶ್ ಕೆ,ದುರ್ಗಮ್ಮ ರಮೇಶ್, ಲಕ್ಷ್ಮೀದೇವಿ ವೆಂಕಟಸುಬ್ಬಯ್ಯ, ಜಿಸಿಪಿ ರಾಮಾಂಜನಿ,
ರವಿಕಾಂತ್ ಭೋಸ್ಲೆ,  ಪುಲಿಕುಂಡ, ಪುಷ್ಪ ಎಂ ,ರಮೇಶ್, ದೇವೇಂದ್ರಪ್ಪ ,ತಾಲೂಕ ಪಂಚಾಯತಿ ಮಾಜಿ ಸದಸ್ಯರುಗಳಾದ ರಾಮಾಂಜಿನಪ್ಪ, ಕುಮಾರಸ್ವಾಮಿ, ಮುಖಂಡರುಗಳಾದ ಪ್ರಶಾಂತ.ಬಿ, ಅಂಜಿನಿ ವಕೀಲರು ,ಪರಶುರಾಮ್ ಪೂಜಾರ ವಕೀಲರು, ಸತೀಶ್ ಹೆಗಡೆ ಕೆ.ಆರ್ ಕುಮಾರ್ ಸ್ವಾಮಿ, ಧರ್ಮನಾಯ್ಕ್, ಆನಂದಪ್ಪ, ವಿಶ್ವನಾಥ ರೆಡ್ಡಿ,ಎರಿಸ್ವಾಮಿ ರೆಡ್ಡಿ, ವಿಜಯಕುಮಾರ್, ತಿಪ್ಪೇಸ್ವಾಮಿ ,ಚಂದ್ರಪ್ಪ ಸ್ವಾಮಿಹಳ್ಳಿ, ವಿನಾಯಕ ಜೋಶಿ, ರಮೇಶ್, ನಿರಂಜನ ಹಟ್ಟಿ, ಕುಮಾರ್ ಪಿ.ಕೆ, ಬಂಡ್ರಿ ಪಿ. ಮಲ್ಲಿಕಾರ್ಜುನ್, ಶಿವಕುಮಾರ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

LEAVE A REPLY

Please enter your comment!
Please enter your name here