ಶಾಲಾ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕಾ ಕಾರ್ಯಕ್ರಮ.

0
856

ಸಂಡೂರು : ಮಾ: 31: ಹನ್ನೆರಡರಿಂದ ಹದಿನಾಲ್ಕು ವರ್ಷ ವಯಸ್ಸಿನೊಳಗಿನ ಶಾಲೆಯ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕಾ ಕಾರ್ಯಕ್ರಮ,

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಮ್ಮಿಕೊಂಡ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ 12-14 ವರ್ಷದ ಕಾರ್ಬಿವ್ಯಾಕ್ಸ್ ಲಸಿಕಾಕರಣವನ್ನು ಇದೇ ಮಾರ್ಚ್ 16 ರಿಂದ ಪ್ರಾರಂಭಿಸಲಾಗಿದ್ದು ಪ್ರಸ್ತುತ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗಿತ್ತು, ಸರ್ಕಾರ ನೀಡಿದ್ದ ಗುರಿಯನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ, ಅಲ್ಲದೇ ಲಸಿಕೆ ಪಡೆದ ಮಕ್ಕಳಿಗೆ ಯಾವುದೇ ಪ್ರತಿಕೂಲ ಘಟನೆಗಳು ಸಂಭವಿಸಿರಲಿಲ್ಲ, ಅದರಿಂದ 12-14 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಸಲುವಾಗಿ ಅವರವರ ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಶಾಲೆಯಲ್ಲಿ ಲಸಿಕೆ ಪಡೆದ ಮಕ್ಕಳು ಹರ್ಷ ವ್ಯಕ್ತ ಪಡಿಸಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಶಾಲೆಗಳಿಗೆ ಬಂದು ಕಾರ್ಬಿವ್ಯಾಕ್ಸ್ ಲಸಿಕೆ ನೀಡಿದ್ದು ಸಂತೋಷವಾಗಿದೆ, ನಮಗಿಂತ ಹಿರಿಯರಿಗೆ ಲಸಿಕೆ ನೀಡುತ್ತಿದ್ದರು ಆಗ ನಮಗೆ ಲಸಿಕೆ ಇಲ್ಲವಲ್ಲ ಅನ್ನುವ ಕೊರಗು ಈಗ ನಮಗಿಲ್ಲ, ನಮಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡಿದ ಇಲಾಖೆಯ ಸಿಬ್ಬಂದಿಯವರಿಗೂ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಎ.ರಾಜನ್, ಗೌಶಿಯಾ, ಪಾರ್ವತಿ, ಬಂದೇನವಾಜ್, ಶೇಕ್ ಮೊಹಿದ್ದೀನ್, ಎ.ಗ್ರೇಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಶ್ರೀದೇವಿ, ರಾಜೇಶ್ವರಿ, ಆಶಾ, ಪದ್ಮಾ, ವಿಜಯಶಾಂತಿ, ವೆಂಕಟಲಕ್ಷ್ಮಿ, ರೇಖಾ,ಹುಲಿಗೆಮ್ಮ, ತೇಜಮ್ಮ, ಮಂಜುಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here