ಸಮಾಜದಲ್ಲಿ ನೊಂದವರ ಸೇವೆ ಮಾಡುವುದನ್ನು ಕರ್ತವ್ಯ ಎಂದು ಮಾಡಿದರೆ ಮಾತ್ರ ಸಾರ್ಥಕವಾಗುತ್ತೆ: ಹಾಲಯ್ಯ ಹಿರೇಮಠ

0
130

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ (ರಿ) ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರಿನ ಹಲವಾರು ಬುದ್ಧಿಮಾಂದ್ಯರಿಗೆ ತರಬೇತಿ ನೀಡುತ್ತಾ ಮಾತೃ ಆಸರೆ ಎನ್ನುವ ಸಂಸ್ಥೆಯ ಮೂಲಕ ಬುದ್ಧಿಮಾಂಧ್ಯ ಜೀವಿಗಳಿಗೆ ತಂದೆಯಾಗಿ ಇಡೀ ತಮ್ಮ ಜೀವನವನ್ನೇ ಅಂಧರಿಗೆ ವಿಕಲಚೇತನರಿಗೆ ಅಂಗವಿಕಲರಿಗೆ ಬುದ್ಧಿಮಾಂದ್ಯರಿಗೆ ಮೀಸಲಿಟ್ಟ, ಕಾರುಣ್ಯ ಎನ್ನುವ ಅನಾಥ ಕುಟುಂಬ ನಿರ್ಮಿಸಲು ಮೂಲ ಕಾರಣೀಕರ್ತನಾಗಿ ನಮ್ಮಂತಹ ಹಲವಾರು ಯುವಕರನ್ನು ಸಮಾಜ ಸೇವೆಯಲ್ಲಿ ವಿಲೀನಗೊಳಿಸಿ ಸುಂದರ ಸಮಾಜವನ್ನು ನಿರ್ಮಿಸುತ್ತಿರುವ ಶ್ರೀ ಹಾಲಯ್ಯ ಸ್ವಾಮಿ ಹಿರೇಮಠ ಸಂಸ್ಥಾಪಕ ಅಧ್ಯಕ್ಷರು ಮಾತೃ ಆಸರೆ ವಿಶೇಷ ಲಘು ಬುದ್ಧಿಮಾಂದ್ಯ ಮಕ್ಕಳ ತರಬೇತಿ ಶಾಲೆ ಸಿಂಧನೂರು. ಇವರ 62 ನೇ ವರ್ಷದ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಸಸಿ ನೆಡುವ ಮೂಲಕ ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣುಹಂಪಲುಗಳನ್ನು ವಿತರಿಸಿ ಆತ್ಮೀಯತೆಯ ಪ್ರೀತಿಯನ್ನು ಧಾರೆಯೆರೆಯುವುದರ ಮೂಲಕ ಅಪಾರ ಸಮಾಜಸೇವಕರುಗಳ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಹಾಲಯ್ಯ ಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಮಾಜ ಸೇವಕರುಗಳಿಗೆ ನಾವುಗಳೆಲ್ಲ ಸೇವೆ ಎನ್ನುವುದಕ್ಕಿಂತ ಕರ್ತವ್ಯ ಎಂದುಕೊಂಡು ರಾಯಚೂರು ಭಾಗದಲ್ಲಿ ಸಮಾಜಪರ ಕಾರ್ಯಗಳನ್ನು ಮಾಡೋಣ ಎಂದು ಯುವಕರಿಗೆ ಸಮಾಜಪರ ಸೇವೆಗೆ ಶಕ್ತಿ ತುಂಬಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ರಾಮದಾಸ್ ಕಾರುಣ್ಯ ಆಶ್ರಮದ ದಾನಿಗಳು, ಶ್ರೀ ಉಮೇಶ್ ಚಲನಚಿತ್ರ ನಿರ್ದೇಶಕರು, ಶ್ರೀ ಸಂತೋಷ್ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್, ಶ್ರೀ ಅವಿನಾಶ್ ದೇಶಪಾಂಡೆ ಶಿಕ್ಷಕರು, ಶ್ರೀ ವೀರೇಶ ಯಡಿಯೂರ ಮಠ ಜಂಗಮ ಸಮಾಜದ ಮುಖಂಡರು, ಯುವ ಮುಖಂಡರಾದ ಶ್ರೀ ಸಂಗಮೇಶ ಹಿರೇಮಠ, ಶ್ರೀ ಭೀಮಣ್ಣ ಬೆಳಗುರ್ಕಿ, ಶ್ರೀ ಚನ್ನ ವೀರನಗೌಡ, ವಿರೇಶ ಮಾಳಿಗಿ ಸದಸ್ಯರು ಸ್ವಾಮಿ ವಿವೇಕಾನಂದ ವೇದಿಕೆ, ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಆಡಳಿತಾಧಿಕಾರಿಗಳು ಕಾರುಣ್ಯಆಶ್ರಮ ಇವರುಗಳು ಪಾಲ್ಗೊಂಡು ಶ್ರೀ ಹಾಲಯ್ಯ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಆಶೀರ್ವಾದ ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರು ಸಕಲ ದೇವಾನುದೇವತೆಗಳಲ್ಲಿ ಪ್ರಾರ್ಥನೆ ಮಾಡಿ ನಮ್ಮ ಶ್ರೀ ಹಾಲಯ್ಯ ಸರ್ ಇವರಿಗೂ ಹಾಗೂ ಇವರ ಕುಟುಂಬಕ್ಕೂ ಇನ್ನೂ ಹೆಚ್ಚಿನ ಸಕಲ ಐಶ್ವರ್ಯ ಸಿರಿಸಂಪತ್ತು ಆಯಸ್ಸು ಆಯುರಾರೋಗ್ಯವನ್ನು ಕೊಟ್ಟು ಕಾಪಾಡಿ ಸಮಾಜದಲ್ಲಿನ ಇನ್ನೂ ಅನೇಕ ಹಲವಾರು ನಮ್ಮಂತಹ ನೊಂದು-ಬೆಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರಾಗುವಂತಹ ಶಕ್ತಿಯನ್ನು ಕೊಟ್ಟು ಕಾಪಾಡಿರಿ ಎಂದು ಬೇಡಿಕೊಂಡು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಆಶೀರ್ವದಿಸಿದರು

LEAVE A REPLY

Please enter your comment!
Please enter your name here