ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ಚೋರನೂರು ಆಡಳಿತ ವೈದ್ಯಾಧಿಕಾರಿ ಡಾ. ಶಾಷವಲಿ.

0
874

ಸಂಡೂರು: ಮಾ:10: ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ಚೋರುನೂರು ಆಡಳಿತ ವೈದ್ಯಾಧಿಕಾರಿ ಡಾ. ಶಾಷವಲಿ ಇವರಿಗೆ ಸಿಬ್ಬಂದಿಯರಿಂದ ಆತ್ಮೀಯ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು

ತಾಲೂಕಿನ ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಬಿಳ್ಕೊಡುಗೆ ಸಮಾರಂಭಲ್ಲಿ ಸಿಬ್ಬಂದಿಯವರು ಮಾತನಾಡಿದರು,

ಕಳೆದ ಮೂರು ವರ್ಷಗಳಿಂದ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶಾಷವಲಿ ಇವರು ಸುಮಾರು 45 ಸಾವಿರ ಜನಸಂಖ್ಯೆಯುಳ್ಳ 41 ಹಳ್ಳಿಗಳಿಗೆ ಪ್ರಾಥಮಿಕ ಆರೋಗ್ಯ ಕೆಂದ್ರದ ಆಡಳಿತ ವೈದ್ಯಾಧಿಕಾರಿಯಾಗಿ ಬಂದಾಗ ಕರ್ತವ್ಯ ಹೇಗೆ ನಿಭಾಯಿಸುವುದು ಎನ್ನುವ ಆತಂಕದಲ್ಲೆ ಎಲ್ಲಾ ಸಿಬ್ಬಂದಿಯವರ ಮತ್ತು ಆಯುಷ್ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಸಹಕಾರದಿಂದ ಸಾಗಿದ ದಿನಗಳಲ್ಲೆ ಕೋವಿಡ್ ವಾರಿಯರ್ ಡ್ಯೂಟಿ ಅದನ್ನೆಲ್ಲಾ ಮರೆತು ಬಿಡುವಂತೆ ಮಾಡಿತು, ತಾಲೂಕಿನ ಕೋವಿಡ್ ಕೇರ್ ಸೆಂಟರ್ ಗಳನ್ನು ನಿಭಾಯಿಸುವ ದೊಡ್ಡ ಜವಾಬ್ದಾರಿ ಹೊತ್ತು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು,
ಇಷ್ಟು ಕಡಿಮೆ ಅವಧಿಯಲ್ಲೇ ಉನ್ನತ ವ್ಯಾಸಂಗದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ರೇಡಿಯೋಲಾಜಿ ಡಿಪಾರ್ಟ್ಮೆಂಟ್ ಗೆ ಬೆಂಗಳೂರು ನಗರದ ಎಮ್.ಎಸ್ ರಾಮಯ್ಯ ಮೆಡಿಕಲ್ ಕಾಲೇಜ್‌ಗೆ ಆಯ್ಕೆಯಾಗಿದ್ದಾರೆ, ಇವರ ವ್ಯಾಸಂಗ ಯಶಸ್ವಿಯಾಗಿ ಮುಗಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ರೋಗಿಗಳ ರೋಗ ನಿರ್ಧಾರಕ್ಕೆ ಅನುಕೂಲವಾಗಲೆಂದು ಹಾರೈಸಿ ಕೇಂದ್ರದ ಎಲ್ಲಾ ಸಿಬ್ಬಂದಿ ಸನ್ಮಾನ ಮಾಡಿ, ಲ್ಯಾಪ್‌ಟಾಪ್ ನ್ನು ಉಡುಗೊರೆಯಾಗಿ ಕೊಟ್ಟು ಶುಭ ಕೋರಿದ್ದಾರೆ,

ಈ ಸಂದರ್ಭದಲ್ಲಿ ಆಯುಷ್ ವೈದ್ಯ ಡಾ. ಕೊಟ್ರೇಶ್ ಬಣಕಾರ್, ನೇತ್ರಾಧಿಕಾರಿ ಈಶ್ವರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಎರ್ರಿಸ್ವಾಮಿ, ಸುರಕ್ಷಾಧಿಕಾರಿ ಸುನಿತಾ, ಮತ್ತು ಸಿಬ್ಬಂದಿಯವರು ಅವರ ಒಡನಾಟದ ಅನಿಸಿಕೆಗಳನ್ನು ಹಂಚಿಕೊಂಡರು,

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶಾಷವಲಿ ಅವರು ವೈದ್ಯಕೀಯ ವೃತ್ತಿಗೂ ಆಡಳಿತ ವೈದ್ಯಾಧಿಕಾರಿಯ ವೃತ್ತಿಗೂ ಅಜಗಜಾಂತರ ವ್ಯತ್ಯಾಸ ಇದ್ದಾಗ್ಯೂ ದಿನೆ ದಿನೆ ಕಲಿಯುತ್ತಾ ಯಾವುದೇ ಕುಂದು ಕೊರತೆಗಳು ಕಂಡು ಬರದಂತೆ ಸೇವೆ ಸಲ್ಲಿಸುತ್ತಾ ಮೂರು ವರ್ಷ ಕಳೆದದ್ದು ಗೊತ್ತಾಗಲೇ ಇಲ್ಲ ಇಂತಹ ಸಿಬ್ಬಂದಿಯವರ ಸವಿ ನೆನಪುಗಳನ್ನು ಮರೆಯಲು ಎಂದೆಂದಿಗೂ ಸಾಧ್ಯವಾಗುವುದಿಲ್ಲ, ಶಾಶ್ವತವಾಗಿ ಉಳಿದು ಬಿಡುತ್ತೆ ಕಾರಣ ಮತ್ತೆ ಗ್ರಾಮ ಮಟ್ಟದಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಬರುವುದಿಲ್ಲ, ನಿಮ್ಮೆಲ್ಲರ ಅದ್ಬುತವಾದ ನೆನಪುಗಳೊಂದಿಗೆ ಲ್ಯಾಪ್‌ಟಾಪ್ ಉಡುಗೊರೆ ನೀಡಿದ್ದು ಬೆಲೆಕಟ್ಟಲಾಗದ್ದು, ನಿಮ್ಮೆಲ್ಲರ ಜವಾಬ್ದಾರಿತನದ ಕರ್ತವ್ಯವನ್ನು ಹೀಗೆ ಮುಂದುವರೆಸಿರಿ ಎಂದು ತಿಳಿಸುತ್ತಾ ಕಣ್ಣಂಚಲಿ ಹನಿಗಳುದುರಿಸಿದರು,

ಈ ಸಂದರ್ಭದಲ್ಲಿ ಸೂಪರಿಡೆಂಟ್ ಹರ್ಷ, ಬಿ.ಪಿ.ಎಮ್ ವಿನೋದ್, ಫಾರ್ಮಸಿ ಅಧಿಕಾರಿ ಶ್ರೀನಿವಾಸ್ ಶೆಟ್ಟಿ, ಶಿಲ್ಪಾ, ಬಸವರಾಜ್, ಸುನಿತಾ, ಶಿವರಂಜನಿ, ಕವಿತಾ,ಸ್ವಾತಿ,ಸತೀಶ್, ಆಶಾ ಫೆಸಿಲಿಟೇಟರ್ ಭಾಗ್ಯಮ್ಮ, ಆಶಾ ಕಾರ್ಯಕರ್ತೆಯರಾದ ಸರಿತಾ,ತಿಪ್ಪಮ್ಮ, ಸುಮಂಗಳಾ, ಭಾಗ್ಯ, ಕವಿತಾ, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here