ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ 27 ಸೆಪ್ಟೆಂಬರ್ 2021ರ ಭಾರತ್ ಬಂದ್‌ಗೆ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲ

0
139

ಮೂರು ಕರಾಳ ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಮಸೂದೆ ರದ್ಧತಿಗಾಗಿ, ಕೃಷಿ ಉತ್ಪನ್ನಗಳಿಗೆ ‘ಕನಿಷ್ಠ ಬೆಂಬಲ ಬೆಲೆ’ ಕಾನೂನು ಜಾರಿಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ 27 ಸೆಪ್ಟೆಂಬರ್ 2021ರ ಭಾರತ್ ಬಂದ್‌ಗೆ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲ

ಮಾನ್ಯರೇ,
ನಿಮಗೆ ತಿಳಿದಿರುವಂತೆ ದೇಶದಾದ್ಯಂತ ನಡೆಯುತ್ತಿರುವ ರೈತರ ಸುಧೀರ್ಘ ಹೋರಾಟ ಸುಮಾರು ೨೫೦-೩೦೦ ದಿನಗಳನ್ನು ಪೂರೈಸಿದೆ! ತಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಹೋರಾಟವನ್ನು ಕೈಬಿಡುವುದಿಲ್ಲ ಎಂದು ಅಚಲರಾಗಿ, ತಮ್ಮ ಬೇಡಿಕೆಗಳಿಗೆ ಬದ್ಧರಾಗಿ ರೈತರು ಚಳುವಳಿಯನ್ನು ಮುನ್ನಡೆಸುತ್ತಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಹೋರಾಟದ ಕರೆಗಳಿಗೆ ಜನತೆ ಸ್ಪಂದಿಸುತ್ತಾ ಅನ್ನದಾತರ ಜೊತೆ ನಿಂತಿದ್ದರು. ವಿವಿಧ ರೂಪಗಳಲ್ಲಿ, ವಿವಿಧ ಹಂತಗಳಲ್ಲಿ ಹೋರಾಟ ಬೆಳೆದು, ಒಂದು ಐತಿಹಾಸಿಕ ಚಳುವಳಿಯಾಗಿ ಹೊರಹೊಮ್ಮಿದೆ. ಹೋರಾಟ ತೀವ್ರವಾದಂತೆಲ್ಲ, ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷö್ಯ ಹಾಗೂ ರೈತರ ಬಗೆಗಿನ ಕಾಳಜಿಯಿಲ್ಲದ ಧೋರಣೆಯು ಬಹಿರಂಗವಾಗುತ್ತಿದೆ.
ಈ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಇದೇ 27ರ ಸೆಪ್ಟೆಂಬರ್ 2021 ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದೆ. ಈ ಕರೆಗೆ ಓಗೊಟ್ಟು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಬೆಂಬಲವನ್ನು ಸೂಚಿಸುತ್ತಾ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ (ಎಐಎಸ್‌ಎಫ್, ಎಸ್‌ಎಫ್‌ಐ, ಎಐಡಿಎಸ್‌ಓ, ಎಐಎಸ್‌ಎ, ಕೆವಿಎಸ್) ರೈತರ ಹೋರಾಟದ ಜೊತೆಗೆ ನಿಂತಿದೆ. ರೈತರ ಹೋರಾಟ ಕೇವಲ ಅವರ ಒಳಿತಿಗಾಗಿ ಅಲ್ಲದೆ ಸಮಾಜದ ಒಳಿತಿಗಾಗಿ ಎಂದು ನಾವು ನಂಬಿದ್ದೇವೆ. ಹಾಗಾಗಿ, ಈ ಹೋರಾಟವನ್ನು ನೈತಿಕವಾಗಿ ಮತ್ತು ಹೋರಾಟನಿರತೆಯಿಂದ ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಇದೆ, ಮತ್ತು ನಮ್ಮ ಸಂಪೂರ್ಣ ಬೆಂಬಲ 27ರ ಭಾರತ್ ಬಂದ್‌ಗೆ ನಾವು ಸೂಚಿಸಿರುವುದಾಗಿ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ಈ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ.

ಹೇಳಿಕೆ ಇವರುಗಳಿಂದ,
ಎಐಎಸ್‌ಎಫ್(ಜ್ಯೋತಿ), ಎಸ್‌ಎಫ್‌ಐ (ವಾಸುದೇವ ರೆಡ್ಡಿ), ಎಐಡಿಎಸ್‌ಓ
(ಅಜಯ್ ಕಾಮತ್), ಎಐಎಸ್‌ಎ
(ಕಿಶನ್), ಕೆವಿಎಸ್ (ಸರೋವರ್),

ರವಿ ಕಿರಣ್.ಜೆ.ಪಿ
AIDSO ಜಿಲ್ಲಾ ಕಾರ್ಯದರ್ಶಿ

LEAVE A REPLY

Please enter your comment!
Please enter your name here