ಹೆಣ್ಣು ಭ್ರೂಣ ಪರೀಕ್ಷೆ ಮಾಡಿಸುವುದು ಭ್ರೂಣ ಹತ್ಯೆ ಮಾಡುವುದು ಅಕ್ಷಮ್ಯ ಅಪರಾಧ : ಪ್ರಸೂತಿ ತಜ್ಞೆ ಡಾ.ರಜಿಯಾ ಬೇಗಂ,

0
540

ಸಂಡೂರು:ಜ:24:-ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಪುರುಷರಂತೆ ಸರಿ ಸಮಾನರು, ಮಕ್ಕಳು ಹೆಣ್ಣಾಗಲಿ ಅಥವಾ ಗಂಡಾಗಲಿ ಸಮಾನವಾಗಿ ಸ್ವೀಕರಿಸಬೇಕು, ಮಹಿಳೆ ಗರ್ಭ ಧರಿಸಿದಾಗ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ ಹೆಣ್ಣೋ ಅಥವಾ ಗಂಡೋ ಎಂದು ತಿಳಿಯಲು ಕುಟುಂಬದ ಯಾವುದೇ ಸದಸ್ಯರು ಒತ್ತಾಯ ಮಾಡಿದರೂ, ಪರೀಕ್ಷೆಗೆ ಒಳಪಡಿಸಿದರೂ ಅವರಿಗೆ ದಂಡ ಮತ್ತು ಕಠಿಣವಾದ ಶಿಕ್ಷೆ ಇದೆ ಪರೀಕ್ಷೆ ಮಾಡಿದ ಲ್ಯಾಬ್ ನವರಿಗೂ ದಂಡ ಮತ್ತು ಶಿಕ್ಷೆ ಯೊಂದಿಗೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ, ಹೆಣ್ಣು ಹೆಂಡತಿಯಾಗಿ ಬೇಕು, ತಾಯಿಯಾಗಿ ಬೇಕು ಮಗಳಾಗಿ ಏಕೆ ಬೇಡ, ಹೆಣ್ಣಿನಿಂದಲೇ ಎಲ್ಲಾ ಎಂಬುದನ್ನು ಮನಗಾಣ ಬೇಕು ಎಂದು ತಿಳಿಸಿದರು,

ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಮಾತನಾಡಿ ಹೆಣ್ಣು ಗಂಡು ಬೇದ ವಿಲ್ಲದೆ ಅವರಿಗೆ ವಿದ್ಯಾಭ್ಯಾಸ ಕೊಡಿಸಿದರೆ ಸಾಕು ಹೆಣ್ಣು ಗಂಡು ಬೇದ ಕಂಡು ಬರದು, ವರ ದಕ್ಷಿಣೆ ಪಿಡುಗು ನಾಶ ವಾಗುವುದು, ಅದೇ ಕಾರಣಕ್ಕೆ ಹಳ್ಳಿಗಳಲ್ಲಿ ಹೈಸ್ಕೂಲ್ ಮತ್ತು ನಂತರದ ವಿದ್ಯಾಭ್ಯಾಸ ಮುಂದುವರೆಯಲು ಶಾಲಾ ಕಾಲೇಜುಗಳನ್ನು ತೆರೆಯ ಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ದೀಪಾ ಪಾಟೀಲ್ ಮಾತನಾಡಿ ಅಡುಗೆ ಕೆಲಸದಿಂದ ಹಿಡಿದು ದೇಶ ಆಳುವ ವರೆಗೂ ಮಹಿಳೆಯರು ಉನ್ನತ ಸ್ಥಾನ ಅಲಂಕರಿಸಿದ್ದಾರೆ ಹೆಣ್ಣು ಸೌಟು ಹಿಡಿಯ ಬಲ್ಲಳು, ಲಾಟಿಯೂ ಹಿಡಿದು ಆಡಳಿತ ನಡೆಸ ಬಲ್ಲಳು, ಮಹಿಳೆ ಅಂತರಿಕ್ಷ ಯಾನ ಮಾಡಿದ್ದಾಳೆ, ರಾಷ್ಟ್ರಪತಿ ಸ್ಥಾನ ನಿಬಾಯಿಸಿದ್ದಾಳೆ, ಲೋಕ ಸಭೆ ಸಭಾಧ್ಯಕ್ಷ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ, ಪ್ರಧಾನಿಯಾಗಿಯೂ ದೇಶ ವನ್ನು ಮುನ್ನಡೆಸಿದ್ದಾಳೆ, ವೈದ್ಯಕೀಯ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡಿದ್ದಾಳೆ, ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ ಇದೆಲ್ಲವೂ ನೊಡಿದಾಗ ನಮಗೆ ಹೆಮ್ಮೆಯಾಗುತ್ತಿದೆ, ಹೆಣ್ಣಾಗಿ ಹುಟ್ಟುದ್ದಕ್ಕೆ ಗರ್ವ ಪಡೆಯುತ್ತಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಣ್ಣು ಗಂಡಿನ ಲಿಂಗಾನುಪಾತದ ವ್ಯತ್ಯಾಸಗಳ ಬಗ್ಗೆ ವಿವರ ನೀಡಿದರು, ಒಂದು ಸಾವಿರ ಪುರುಷರಿಗೆ ಒಂದು ಸಾವಿರದ ಹದಿನಾರು ಇರ ಬೇಕಿತ್ತು ಆದರೆ ಇದು ಒಂಬೈನೂರ ಮೂವತ್ತೊಂದು ಇದೆ ಈ ಅಸಮತೋಲನ ವನ್ನು ಸರಿ ಪಡಿಸಲು ಹೆಣ್ಣಾಗಲಿ ಗಂಡಾಗಲಿ ಕುಟುಂಬಕ್ಕೆ ಎರಡು ಮಕ್ಕಳು ಎಂಬ ಸೂತ್ರ ಪಾಲನೆ ಮಾಡಬೇಕು, ಹೆಣ್ಣು ಸಂತತಿ ಕಡಿಮೆ ಯಾದರೆ ಉದ್ಭವಿಸುವ ಹೆಣ್ಣು ಮಕ್ಕಳ ಮಾರಾಟ, ಲೈಂಗಿಕ ದೌರ್ಜನ್ಯ, ಬಹು ಪತಿತ್ವ ಇಂತಹ ಕೀಳು ಸಮಸ್ಯೆಗಳು ಕಾಣ ಬೇಕಾಗಬಹುದು, ಲಿಂಗ ತಾರತಮ್ಯ ಮಾಡುವುದನ್ನೆ ಮೊದಲು ಬಿಡ ಬೇಕು ಸಮಾನ ಆಸಕ್ತಿಗನುಗುಣವಾಗಿ ಓದಿಸ ಬೇಕು, ಅವರಿಗಿಷ್ಷವಾದ ಕ್ಷೇತ್ರದಲ್ಲಿ ಮುಂದುವರಿಯಲು ಬಿಡ ಬೇಕು, ಅವರಿಗಿಷ್ಟವಿಲ್ಲದ ಕ್ಷೇತ್ರದಲ್ಲಿ ಹೋಗಲು ಒತ್ತಡ ಹಾಕ ಬಾರದು, “ಬೇಟಿ ಬಚಾವೋ, ಬೇಟಿ ಪಡಾವೋ” ಎಂಬ ಸರ್ಕಾರದ ಘೋಷಣೆ ಯಂತೆ ನೋಡಿ ಕೊಳ್ಳ ಬೇಕು, ಇದಕ್ಕಾಗಿ ಸರ್ಕಾದ ಸುಕನ್ಯಾ ಸಂವೃದ್ಧಿ , ಭಾಗ್ಯ ಲಕ್ಷ್ಮಿ ಯೋಜನೆಗಳು ತುಂಬಾ ಸಹಕಾರಿಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಪ್ರಸೂತಿ ತಜ್ಞೆ ಡಾ.ರಜೀಯಾ ಬೇಗಂ, ದಂತ ವೈದ್ಯೆ ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸಿಬ್ಬಂದಿ ಮಂಜುನಾಥ್, ಪ್ರಶಾಂತ್, ರೋಜಾ, ಮಾರೇಶ, ನವೀನ್, ಚಲುವರಾಜ, ಕರಿಬಸಮ್ಮ, ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ದಿವ್ಯಶ್ರೀ, ಧರಣಿ, ಕೌಸರ್, ಪೂಜಾ, ಸಲ್ಮಾ, ಸುನೀತಾ, ಶ್ರೀ ಲಕ್ಷ್ಮಿ, ಸಂಧ್ಯಾ, ಉರುಕುಂದಮ್ಮ, ಪುಷ್ಪಾ, ತೇಜಸ್ವಿನಿ, ಪೂಜಾ, ಹುಲಿಗೆಮ್ಮ, ಮಾಬು ಸಾಬ್, ಕುರೇಕುಪ್ಪ ದ್ಯಾವಣ್ಣ, ಕರವೇ ಸದಸ್ಯ ರಾಘವೇಂದ್ರ, ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here