ಬಸ್ ನಿಲ್ದಾಣವೋ..ಹೊಲಸು ತುಂಬಿರುವ ಕೆರೆಯೋ..ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

0
748

ವಿಜಯನಗರ/ಕೊಟ್ಟೂರು: ತಾಲೂಕಿನಲ್ಲಿರುವ ಅವ್ಯವಸ್ಥೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ.? ಕುಡಿಯಲು ನೀರಿಲ್ಲ… ಇನ್ನು ಮಳೆ ಸುರಿದರಂತೂ ಜನರ ರಕ್ಷಣೆಗೆ ದೇವರೇ ಬರಬೇಕು.
ಶುಕ್ರವಾರ ಸುರಿದ ಮಳೆ ಆಕಾಶಕ್ಕೆ ಮಾತ್ರ ಕನ್ನಡಿ ಹಿಡಿದಿಲ್ಲ, ಸರಕಾರ ತೋರುತ್ತಿರುವ ಅನಾದರಕ್ಕೆ, ಕೊಟ್ಟೂರು ಅವ್ಯವಸ್ಥೆಯ ಆಗರಕ್ಕೆ ಕನ್ನಡಿ ಹಿಡಿದಿದೆ.
ಇದೇನು ತಾಲೂಕು ಬಸ್ ನಿಲ್ದಾಣವೋ, ಹೊಲಸು ತುಂಬಿರುವ ಕೆರೆಯೋ ಎಂಬಂತಾಗಿದೆ. ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣದ ತುಂಬಾ ನೀರು ತುಂಬಿಕೊಂಡಿತ್ತು, ಪ್ರಯಾಣ ಕರು ಪರದಾಡುವಂತಾಗಿದೆ
ನಿಲ್ದಾಣದಲ್ಲಿ ತುಂಬಿದ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗಿಲ್ಲ. ಆನರಂತೂ ಬಸ್ ತಲುಪಲು ಕೊಚ್ಚೆ ನೀರಿಗಿಳಿಯದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಅಧಿಕಾರಿಗಳನ್ನು ಶಪಿಸುತ್ತ ಜನರು ಆಕ್ರೋಶ ವ್ಯಕ್ತಪಡಿಸಿದರು
ಯಾವ ಕರ್ಮಕ್ಕೆ ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಬೇಕಾಗಿತ್ತು ಎಂದು ಹೀಯಾಳಿಸುತ್ತಿದ್ದಾರೆ. ಕೆಎಸ್ಸಾರ್ಟಿಸಿ ಇಲಾಖೆ ಮಾತ್ರ ತನಗೂ ಕೊಟ್ಟೂರಿನ ಬಸ್ಟಾಂಡಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ.
ಶುಕ್ರವಾರ ಸುರಿದ ಮಳೆಗೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಹೊಲಸು ನೀರು ತುಂಬಿದ ಕೆರೆಯಂತಾಗಿದೆ. ಪ್ರಯಾಣಕರು ಕೆಸರು ನೀರಲ್ಲಿ ಈಜುತ್ತಾ ಈಜುತ್ತಾ ಬಸ್ ಏರಬೇಕಿದೆ.
ಪ್ರತಿ ವರ್ಷ ಕೆಸರುಗದ್ದೆಯಂತೆ ನಿಲ್ದಾಣದಲ್ಲಿ ಮಳೆ ಬಂದರೆ ಸಾಕು ಕೆರೆ ನಿರ್ಮಾಣವಾಗುತ್ತದೆ.. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಜನರ ಆಕ್ರೋಶಕ್ಕೆ ಈಡಾಗಿದೆ.

ಇಲ್ಲಿಯ ಬಸ್ ನಿಲ್ದಾಣಕ್ಕೆ ಈ ದುಸ್ಥಿತಿ ಬಂದಿದ್ದು ಈಗಿನ ಕಥೆ ಅಲ್ಲ, ಪ್ರತಿ ವರ್ಷ ಹೀಗೆ ಇದೆ. ನಿಲ್ದಾಣದ ಹೊಲಸು ನೀರು ತುಂಬಿ ನಿಂತಿರುತ್ತದೆ. ನಿಲ್ದಾಣದ ಆವರಣದ ಹಲವಾರು ವರ್ಷವೇ ಕಳೆದರೂ ಇದುವರೆಗೂ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ದಿನ ಮಳೆ ಬಂದರೆ ಹೀಗೆ. ಇನ್ನು ಇಡೀ ತಿಂಗಳು ಮಳೆ ಬಂದರೆ ಪರಿಸ್ಥಿತಿ ಹೇಗಿರಬಹುದು ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ತೋರುತ್ತದೆ ಎಂದು ಕೊಟ್ಟೂರು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ.ಚಂದ್ರಶೇಖರ್ ದೂರಿದರು ಕೊಟ್ಟೂರು

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here