45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಡಾ.ವೀರೇಂದ್ರ ಕುಮಾರ್,

0
160

ಸಂಡೂರು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು “ಲಸಿಕಾ ಉತ್ಸವ” ದ ಪಿಂಕ್ ಬೂತ್ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮ ಕುರಿತು ತಾಲೂಕು ಆರೋಗ್ಯಾಧಿಕಾರಿಗಳು ಮಾತನಾಡುತ್ತಾ ಮಾನ್ಯ ಪ್ರಧಾನಿಯವರ ಆಶಯದಂತೆ ದಿನಾಂಕ: 11.04.2021 ರಿಂದ 14.04.2021 ರ ವರೆಗೆ ಕೋವಿಡ್ ಲಸಿಕಾ ಉತ್ಸವ ಆಚರಿಸಲಾಗುತ್ತಿದೆ ಈ ಆಚರಣೆಯಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಕೊಡಬೇಕು, ಮತ್ತು ಲಸಿಕೆ “೦” ವೇಸ್ಟೇಜ್ ಆಗುವ ಗುರಿಯನ್ನು ಇಟ್ಟುಕೊಂಡು ನಾಲ್ಕು ದಿನಗಳಲ್ಲಿ ಎಲ್ಲಾ ಫಲಾನುಭವಿಗಳನ್ನು ಕರೆತಂದು ಲಸಿಕೆ ಕೊಡಿಸಬೇಕಿದೆ ಎಂದು ತಿಳಿಸಿದರು,

ನಂತರ ಡಾ.ರಾಮ್ ಶೆಟ್ಟಿ ಮಾತನಾಡಿ ಜನರ ಮನಸ್ಥಿತಿ ಅರ್ಥವಾಗದ ಹಾಗಿದೆ ಎಲ್ಲವುದಕ್ಕೂ ಏನಾದರೂ ಒಂದು ಕಾರಣ ಕೊಟ್ಟು ತಪ್ಪಿಸಿ ಕೊಳ್ಳುವರು, ಲಸಿಕೆ ಹಾಕಿಸಿ ಕೊಂಡಾಗ ಸ್ವಲ್ಪ ಜ್ವರ ಬರುವುದು ಮೈಕೈ ನೋವು ಅಂತಾ ಹಿಂಜರಿದರೆ ಮುಂದಿನ ದಿನಗಳಲ್ಲಿ ಕೊರೋನಾ ಹರಡುವ ವೇಗ ನೋಡಿದರೆ ಅಪಾಯದ ಮುನ್ಸೂಚನೆ ಕಾಣುತ್ತಿದೆ ದಯವಿಟ್ಟು ಎಲ್ಲರಿಗೂ ಲಸಿಕೆ ಕೊಡಿಸಿ ಪ್ರತಿಯೊಬ್ಬರು ಈಗ ಲಸಿಕೆ ಪಡೆಯುವುದರಿಂದ ಮುಂದಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಎಂದು ತಿಳಿಸಿದರು,

ಕಾರ್ಯಕ್ರಮವನ್ನು ತಾಲೂಕಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಲಸಿಕೆ ಪಡೆಯಲು ಬಂದಿರುವ ಫಲಾನುಭವಿಗಳಿಗೆ ಗುಲಾಬಿ ನೀಡಿ ಸ್ವಾಗತ ಕೋರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವೀರೇಂದ್ರ ಕುಮಾರ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಮ್ ಶೆಟ್ಟಿ,
ಬಂಡ್ರಿ ವೈದ್ಯಾಧಿಕಾರಿ ಡಾ.ಮನ್ಸೂರ್ ಅಲಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಮೆಂಟರ್ ರೇಣುಕಾ, ವಿನೋದ್, ಅನುಷಾ, ಬಂಡೇಗೌಡ,ವಿಜಯಲಕ್ಷ್ಮಿ,ಸಾಗರ್, ಗೋಪಾಲ್ ಯೋಗಿಶ್,ಕೊಟ್ರೇಶ್,
ಆಶಾ ಕಾರ್ಯಕರ್ತೆ ಜಲಜಾಕ್ಷಿ, ಯೋಗೀಶ್ವರಿ, ವಿಜಯಲಕ್ಷ್ಮಿ,ಬಸಮ್ಮ,ಭಾಗ್ಯಲಕ್ಷ್ಮಿ, ಚಂದ್ರಮ್ಮ,ರತ್ನಮ್ಮ,ಅಶ್ವಿನಿ, ಶೈಲಜ,ರೇಖಾ, ದಿವ್ಯಾ,ಪಾರ್ವತಿ ಇತರರು ಇದ್ದರು

LEAVE A REPLY

Please enter your comment!
Please enter your name here