ತಾರಾನಗರ ಸ.ಮಾ.ಹಿ.ಪ್ರಾ ಶಾಲೆಯಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ ತಾಲೂಕು ಮಟ್ಟದ ಬೇಸಿಗೆ ಶಿಬಿರ

0
146

ಸಂಡೂರು:ಮೇ:16:- ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಬಾಲ ಭವನ ಸೊಸೈಟಿ, ಬೆಂಗಳೂರು, ತಾಲೂಕು ಬಾಲ ಭವನ ಸಮಿತಿ, ಸಂಡೂರು, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ,ಭಾರತೀಯ ಸುವಿಶಾಲ ಶೈಕ್ಷಣಿಕ ಸಂಸ್ಥೆ(ರಿ) ಇವರ ಸಹಭಾಗಿತ್ವದಲ್ಲಿ 6 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ತಾಲೂಕು ಮಟ್ಟದ ” ಬೇಸಿಗೆ ಶಿಬಿರ” ಕಾರ್ಯಕ್ರಮದಲ್ಲಿ ಚಿತ್ರಕಲಾ, ಗಾಯನ, ಸಮೂಹ ನೃತ್ಯ, ಯೋಗ, ಇವುಗಳನ್ನು ತಾರಾನಗರ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆ. ಹಾಗೂ ಸರಕಾರಿ ಅಶ್ರಾಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಬೆಸಿಗೆ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಐ.ಆರ್. ಅಕ್ಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸಂಡೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳಿಗೆ ಬೇಸಿಗೆ ಶಿಬಿರ ಅವರ ಪ್ರತಿಭೆಯನ್ನು ಹೊರ ಹಾಕಲಿಕ್ಕೆ ಅತ್ಯುತ್ತಮ ಅವಕಾಶ ” ಎಂದರು.

ಕೃಷಿ ಇಲಾಖೆಯಸಹಾಯಕ ನಿರ್ದೇಶಕರಾದ ಮಂಜುನಾಥ್ ರೆಡ್ಡಿ ಮಾತನಾಡಿ “ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಕಲಿಕಾ ಮನೊಬಾವನೆ ಬೆಳೆಯಲಿ” ಎಂದು ತಿಳಿಸಿದರು.ಸಿಡಿಪಿಓ ಕೆ.ಪ್ರೇಮಮೂರ್ತಿ ಮಾತನಾಡಿ ಬೇಸಿಗೆ ಶಿಬಿರವು “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಮತ್ತು ಪ್ರಾಕೃತಿಕ ಸೌಂದರ್ಯ ಸವಿಯಲು ಹೊರಸಂಚಾರ ಕಾರ್ಯಕ್ರಮವು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ತಾರಾನಗರದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಾಯಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸಿಓ ಪಾಲಕ್ಷಪ್ಪ, ಸಿಆರ್ಪಿ ಜಗದೀಶ್ ತಾರಾನಗರ, ಸ.ಮಾ.ಹಿ.ಪ್ರಾ ಶಾಲೆಯ ಮುಖ್ಯ ಗುರುಗಳಾದ ಮುನಿರಾಬಾನು, ಪದ್ಮಾವತಿ , ಮಾದರಿ ಶಾಲೆ. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ, ಎ.ಪಿ.ವಿಜಯಕುಮಾರ, ಜಿ.ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.
ನಾಗರಾಜ ಪೂಜಾರಿ ನಿರೂಪಿಸಿದರು. ಹನುಮಂತ ಎನ್,ಪ್ರಾಸ್ತಾವಿಕ ಭಾಷಣ ಮಾಡಿದರು.

LEAVE A REPLY

Please enter your comment!
Please enter your name here