ಶೆಲಿಯಪ್ಪನಹಳ್ಳಿ; ಎತ್ತಿನಬಂಡಿ ಮೆರವಣಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ಸ್ವಾಗತ.

0
94

ಸಂಡೂರು:ಮೇ:16:- ತಾಲೂಕಕಿನ ಬೊಮ್ಮಘಟ್ಟ ಕ್ಲಸ್ಟರಿನ ಶೆಲಿಯಪ್ಪನಹಳ್ಳಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲಾ ಮುಖ್ಯಗುರುಗಳು ಸಹ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಗ್ರಾಮ ಪಂಚಾಯಿತಿಸದಸ್ಯರು ಎತ್ತಿನಬಂಡಿಯಲ್ಲಿ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥಿತವಾಗಿ ಬಂಡಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ತಾಲೂಕಿನ ಮಿಂಚಿನ ಸಂಚಾರ ತಂಡದಿಂದ ಎಂ.ತಿಪ್ಪೇಸ್ವಾಮಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಸಂಡೂರು, ಸಿ.ಆರ್.ಪಿ ಗಳಾದ ನಾಗರಾಜ್ ಎನ್.ಎಂ,ಅವರು ಶಾಲೆಯ ಆವರಣಕ್ಕೆ ಬರುತ್ತಿದ್ದಂತೆ ಎಲ್ಲರನ್ನು ಸ್ವಾಗತಿಸಿ ಘೋಷ ವಾಕ್ಯಗಳಾದ ದಾಖಲಾತಿ ಆಂದೋಲನ ಮತ್ತು ಕಲಿಕಾ ಚೇತರಿಕೆ ವರ್ಷ-2022-23 ಮತ್ತು ಪ್ರಾರಂಭೋತ್ಸವದ ಹೇಳಿಕೆಗಳಿಂದ ಊರಿನ ಮುಖಂಡರ ಸಮ್ಮುಖದಲ್ಲಿ ಶಾರದಾ ದೇವಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅಧಿಕೃತವಾಗಿ ಎಂಡಿಎಂ ಸಹಾಯಕ ನಿರ್ದೇಶಕರು ಚಾಲನೆ ನೀಡಿ ಬೀದಿ ಬೀದಿಯಲ್ಲಿ ಎತ್ತಿನಬಂಡಿ ಮೆರವಣಿಗೆ ಮುಖಾಂತರ ಮಕ್ಕಳನ್ನು ಬಂಡಿಯಲ್ಲಿ ಕುಳ್ಳಿರಿಸಿಕೊಂಡು ಶಾಲಾ ಆವರಣಕ್ಕೆ ಕರೆತರಲಾಯಿತು.ಶಾಲಾ ಆವರಣದಲ್ಲಿ ಮಕ್ಕಳಿಗೆ ಬಿಸಿ ಹಾಲು ವಿತರಿಸಿ ಸ್ವಾಗತ ಕೊರಲಾಯಿತು.

ಎರಡು ವರ್ಷಗಳಲ್ಲಿ ಉಂಟಾದ ಕಲಿಕಾ ಕೊರತೆ ನೀಗಿಸಲು ” ಕಲಿಕಾ ಚೇತರಿಕೆ ವರ್ಷ” ಮತ್ತು “ಮಳೆ ಬಿಲ್ಲು” ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಸಿ.ಆರ್.ಪಿ. ಮತ್ತು ಎಂಡಿಎಂ ಸಹನಿರ್ದೇಶಕರು ಮತ್ತು ಶಾಲಾ ಮುಖ್ಯ ಗುರುಗಳು ತಿಳಿಸಿಕೊಟ್ಟರು

ಕಾರ್ಯಕ್ರಮದಲ್ಲಿ ಮಂಜುನಾಥ್ ಹಾದಿಮನಿ ಶಿಕ್ಷಕರು ನಿರೂಪಿಸಿದರು, ಹುಲಿರಾಜ ಎ. ಶಿಕ್ಷಕರು ಸ್ವಾಗತಿಸಿದರು, ಶ್ರೀಮತಿ ಜ್ಯೋತಿ ಸಹ ಶಿಕ್ಷಕಿ ವಂದಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಡಿ.ಮುಕ್ಕಣ್ಣ ವಹಿಸಿದ್ದರು.
ಎಸ್.ಡಿ.ಎಂ.ಸಿ. ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು, ಬೊಮ್ಮಘಟ್ಟ ಗ್ರಾಪಂ ಪಿಡಿಓ ಡಿಪಿ. ಲೋಕರಾಜ್,ಹಾಗೂ ಸಿಬ್ಬಂದಿಗಳು ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here