ಶಿಕ್ಷಣ, ಉದ್ಯೋಗದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಮೆರವಣಿಗೆ.

0
84

ಸಂಡೂರು:ಮೇ:20:ಮೀಸಲಾತಿ ಹೆಚ್ಚಳ ಕುರಿತು ನ್ಯಾ. ನಾಗಮೋಹನ್ ದಾಸ್ ವರದಿ ಜಾರಿಗೆ ಅಗ್ರಹಿಸಿ. ಸಂಡೂರಿನಲ್ಲಿ ವಿನೂತನವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಪ್ರತಿಭಟನಾಕಾರರು ಎಪಿಎಂಸಿ ಆವರಣದಿಂದ ಬೃಹತ್ ಮೆರವಣಿಗೆ ಮಾಡುವ ಮೂಲಕ ಜನರ ಗಮನ ಸೆಳೆದರು
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಮುಖಂಡರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಸಂಡೂರು ಪಟ್ಟಣದ ಎಪಿಎಂಸಿ ಆವರಣದಿಂದ ಆರಂಭಿಸಿ ಪಟ್ಟಣದ ಪ್ರಮುಖ ರಸ್ತೆಯಗಳಿಂದ ವಿಜಯ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಮಾನ್ಯ ಶಾಸಕರಾದ ಈ. ತುಕಾರಾಮ್ ಪಾಲ್ಗೊಂಡಿದ್ದರು. ನಂತರ ಮಾತನಾಡಿದ ತುಕರಾಮ್ ರವರ ಮೀಸಲಾತಿ ಹೆಚ್ಚಳಕ್ಕೆ ಅಗ್ರಹಿಸಿ ವಾಲ್ಮೀಕಿ ಶ್ರೀಗಳ ಧರಣಿ 100 ದಿನಕ್ಕೆ ಕಾಲಿಟ್ಟ ಹಿನ್ನೆಲೆ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಎಚ್. ಎಸ್. ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿರುವ ವರದಿ ಜಾರಿಗೆ ಒತ್ತಾಯಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ ಮುಂದೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ 100 ದಿನಗಳಿಂದ ನಿರಂತರ ಧರಣಿ ಮಾಡುತ್ತಿದ್ದಾರೆ. ಇಷ್ಟಾದರೂ ಸರಕಾರ ನಿರ್ಲಕ್ಷ ವಹಿಸುತ್ತಿದೆ. ನಾವು ತಾಲೂಕಿನ ಪ್ರತಿಯೊಂದು ಹಳ್ಳಿಯಿಂದ ಅಥವಾ ಸಮಾಜದ ಪ್ರತಿಯೊಂದು ಮನೆಗಳಿಂದ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ನಾವು ಪತ್ರ ಚಳುವಳಿಯನ್ನು ಮಾಡೋಣ, ಇಂದಿನ ಹೋರಾಟ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತೆ ಹಾಗಾಗಿ ಸರಕಾರದ ನಡೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ತುಕರಾಮ್ ಹೇಳಿದರು

ವಾಲ್ಮೀಕಿ ಸಮಾಜದ ಮುಖಂಡರಾದ ಬಿ. ವಸಂತ್ ಕುಮಾರ್, ಬಿ.ಜಯಣ್ಣ ,ಜೆಬಿಟಿ ಬಸವರಾಜ್,ಎಸ್ಸಿ ಎಸ್ಟಿ ಸಮುದಾಯಗಳ ಮುಖಂಡರುಗಳು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ದಸಂಸ ಮುಖಂಡರಾದ ನಿಂಗಪ್ಪ ಐಹೊಳೆ, ರಾಮಕೃಷ್ಣ ಹೆಗಡೆ, ಮರಿಸ್ವಾಮಿ, ವಾಲ್ಮೀಕಿ ಮಹಾ ಸಭಾದ ಅಧ್ಯಕ್ಷ ಡಿ. ಕೃಷ್ಣಪ್ಪ, ಮುಖಂಡರಾದ ಧರ್ಮಾನಾಯ್ಕ್, ಚೋರನೂರು ಅಡಿವೆಪ್ಪ, ಮಾತನಾಡಿದರು.

ಪ್ರತಿಭಟನೆಯ ಸಂಧರ್ಭದಲ್ಲಿ
ಡಿ.ಕೃಷ್ಣಪ್ಪ ಅಡಿವೆಪ್ಪ, ವಾಸಣ್ಣ, ವಸಂತ್ ಕುಮಾರ್, ಜೆಬಿಟಿ ಬಸವರಾಜ್, ಬಿ. ಜಯಣ್ಣ, ವಿ. ಅಂಬರೀಶ, ಕೆ. ಮಲ್ಲಿಕಾರ್ಜುನ, ಶಾಮಿಯಾನ ಅಂಜಿನಪ್ಪ, ಆರ್.ಟಿ. ರಘು, ಆರ್. ಧನಂಜಯ, ನಿಂಗಪ್ಪ ಐಹೊಳೆ, ಹೆಚ್. ಮರಿಸ್ವಾಮಿ, ರಾಮಕೃಷ್ಣ ಹೆಗಡೆ, ಸತೀಶ, ಶಿವಲಿಂಗಪ್ಪ, ಬಂಗ್ಲೆ ಮಂಜುನಾಥ, ಜೆ.ಬಾಬುನಾಯ್ಕ್, ಚಂದ್ರನಾಯ್ಕ್, ಮೇಧಾರ್ ಹೂಲೇಪ್ಪ, ತಿಮ್ಮಣ್ಣ, ಕುಮಾರಸ್ವಾಮಿ, ಚಲವಾಧಿ ಅಶೋಕ್, ಷಣ್ಮುಖಪ್ಪ, ಕಾರ್ತಿಕ್, ಪಿ. ಕೂಮರಸ್ವಾಮಿ, ಗಂಗಾಧರ, ಪಿ.ರಾಜು, ಎನ್. ಸತ್ಯನಾರಾಯಣ, ಆರ್. ಪಕೀರಪ್ಪ ನಾಯಕ, ನರಸಿಂಗಪುರದ ಓಬಲೇಶ, ಶ್ರೀಕಾಂತ್, ಲಕ್ಷ್ಮೀಪುರದ ಚನ್ನಪ್ಪ, ಚಂದ್ರಶೇಖರ್, ಭೀಮಲಿಂಗಪ್ಪ, ತಳವಾರ ಪರಶುರಾಮ, ಪಂಪಾಪತಿ, ತೋರಣಗಲ್ಲು ರಾಮಕೃಷ್ಣ, ವಕೀಲ ಪರಶುರಾಮ, ಚನ್ನವೀರಪ್ಪ, ಬಾಸ್ಕರ್, ಎಸ್.ಕೆ.ಪಿ. ನಿಂಗಪ್ಪ, ತುಮಟಿ ನಾಗರಾಜ್, ಈರಣ್ಣ, ರಾಮಂಜನಿ, ಕೆ.ಪಂಪಾಪತಿ ಹಾಗೂ ಇತರಿದ್ದರು

LEAVE A REPLY

Please enter your comment!
Please enter your name here