ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು ತ್ವರಿತ ವಿಲೇವಾರಿಗೆ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಸೂಚನೆ

0
112

ಹೊಸಪೇಟೆ(ವಿಜಯನಗರ),ಮೇ20: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತು ತ್ವರಿತ ವಿಲೇವಾರಿ ಕೈಗೊಳ್ಳುವಂತೆ ಬಳ್ಳಾರಿ ಮತ್ತು ವಿಜಯನಗರ ಲೋಕಾಯುಕ್ತ ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಸೂಚನೆ ನೀಡಿದ್ದಾರೆ.
ಹೊಸಪೇಟೆಯ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ನಡೆಸಿದ ಅವರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಲೋಕಾಯುಕ್ತ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತು ತ್ವರಿತ ಕ್ರಮಗಳನ್ನು ಅನುರಿಸುವಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ತನಿಖಾ ಹಂತದಲ್ಲಿರುವ ಪ್ರಕರಣಗಳು, ದೂರು ಪ್ರಕರಣಗಳಲ್ಲಿ ನೀಡಬೇಕಾದ ತನಿಖಾ ವರದಿಗಳು, ಮಿಸಲೇನಿಯಸ್ ದೂರು ಪ್ರಕರಣಗಳು,ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು, ತನಿಖಾ ಪೂರ್ಣಗೊಳಿಸಲಾದ ಪ್ರಕರಣಗಳು, ಮೇಲ್ಮನವಿ/ಪುನರ್ ಪರಿಶೀಲನಾ ಅರ್ಜಿ/ಕ್ರಿಮಿನಲ್ ಪಿಟಿಷನ್/ ರಿಟ್ ಅರ್ಜಿ ಸಲ್ಲಿಸಬೇಕಾದ ಪ್ರಕರಣಗಳು,ತನಿಖಾಧಿಕಾರಿಯ ಲೋಪದಿಂದ ಆರೋಪಿಯ ಬಿಡುಗಡೆ/ಖುಲಾಸೆಯಾದಾಗ,ನರೇಗಾ ಯೋಜನೆಗಳ ಅನುಷ್ಠಾನ ಮತ್ತು ಅಕ್ರಮಗಳ ಬಗ್ಗೆ, ಇಲಾಖಾ ವಿಚಾರಣಾ ಪ್ರಕರಣಗಳಲ್ಲಿ ಹೊರಡಿಸುವ ಸಮನ್ಸ್ ಮತ್ತು ವಾರಂಟ್ ಜಾರಿ, ದೂರು ಮತ್ತು ಸಾರ್ವಜನಿಕ ಅಹವಾಲುಗಳ ಸ್ವೀಕಾರ,ವಿವಿಧ ಕಚೇರಿಗಳ ಭೇಟಿ, ಕೆರೆಗಳ ಹಾಗೂ ಸರಕಾರಿ ಜಮೀನುಗಳ ಒತ್ತುವರಿ ಹಾಗೂ ಅಸಮರ್ಪಕ ನಿರ್ವಹಣೆ ಮತ್ತು ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಿದ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಬಳ್ಳಾರಿ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಪುರುಷೋತ್ತಮ ಹಾಗೂ ಪೊಲೀಸ್ ಉಪಾಧೀಕ್ಷಕರುಗಳಾದ ಸಲೀಂ ಪಾಷಾ ಹಾಗೂ ಅಯ್ಯನಗೌಡ ಪಾಟೀಲ್, ಮಹಮ್ಮದ್ ರಫೀ ಹಾಗೂ ಬಳ್ಳಾರಿ ಮತ್ತು ಹೊಸಪೇಟೆ, ಲೋಕಾಯುಕ್ತ ಘಟಕಗಳ ಸಿಬ್ಬಂದಿ ಇದ್ದರು.
ಇದೇ ಸಂದರ್ಭದಲ್ಲಿ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಪಂ ಸಿಇಒ, ಹೊಸಪೇಟೆ ಸಹಾಯಕ ಆಯುಕ್ತರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

LEAVE A REPLY

Please enter your comment!
Please enter your name here