ಕೆ.ಮಲ್ಲಾಪುರ ಗ್ರಾಮ ವಾಸ್ತವ್ಯದಲ್ಲಿ ಆರೋಗ್ಯ ಸೇವೆಗಳು,

0
802

ಸಂಡೂರು:ಮೇ:27:-ತಾಲೂಕಿನ ಕೆ.ಮಲ್ಲಾಪುರ ಗ್ರಾಮದಲ್ಲಿ ತಹಶಿಲ್ದಾರರ ಗ್ರಾಮವಾಸ್ತವ್ಯ ಕಾರ್ಯಕ್ರಮವು
ತಾಲೂಕಿನ ಚೋರುನೂರು ಹೋಬಳಿಯ ನಿಡುಗುರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಮಲ್ಲಾಪುರ ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ -ಹಳ್ಳಿಯ ಕಡೆ” ಅಂಗವಾಗಿ ತಾಲೂಕಿನ ತಹಶಿಲ್ದಾರರು ಗ್ರಾಮವಾಸ್ತವ್ಯ ನಡೆಸಿದರು, ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು,

ಆರೋಗ್ಯ ಇಲಾಖೆಯ ಬಂಡ್ರಿ ಪ್ರಾಥಮಿಕ ಅರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕಾಕರಣ, ಮತ್ತು ಅಸಾಂಕ್ರಮಿಕ ಕಾಯಿಲೆಗಳ ಪತ್ತೆ ಹಚ್ಚುವುದು ಹಾಗೂ ಇ-ಸಂಜೀವಿನಿ ಮೂಲಕ ಟೆಲಿ ಕನ್ಸಲ್ಟೇಷನ್ ಮೂಲಕ ತಜ್ಞರ ಸಂದರ್ಶನಕ್ಕೆ ದಾಖಲು ಮಾಡಿಕೊಂಡು ಆನ್ ಲೈನ್ ನಲ್ಲಿ ಚಿಕಿತ್ಸೆ ಸೌಲಭ್ಯಗಳು ಒದಗಿಸಲಾಯಿತು, ಹಾಗೇ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ವಸ್ತು ಪ್ರದರ್ಶನ ಏರ್ಡಿಸಲಾಗಿತ್ತು, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಶಿಬಿರವನ್ನು ಏರ್ಪಡಿಸಲಾಗಿತ್ತು, ಮಾನ್ಯ ತಹಶಿಲ್ದಾರರು ಎರಡೂ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಲಸಿಕಾಕರಣಕ್ಕೆ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳು ಪ್ರಿಕಾಷನ್ ಡೋಸ್ ಲಸಿಕೆ ಪಡೆದರು, ಮತ್ತು ಸಾರ್ವಜನಿಕರಿಗೆ ಆರೋಗ್ಯ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸಲಾಯಿತು,

ಈ ಸಂದರ್ಭದಲ್ಲಿ ಬಂಡ್ರಿ ವೈದ್ಯಾಧಿಕಾರಿ ಡಾ.ಚಂದ್ರಪ್ಪ,ಎಮ್.ಎಮ್.ಯು ಟೀಮ್ ನ ಡಾ.ರಾಘವೇಂದ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಪದ್ಮಾವತಿ, ಮೇಘನಾ, ಈರಣ್ಣ,ಅಮ್ಜದ್, ಯಶಸ್ವಿನಿ, ಸಿ.ಹೆಚ್.ಓ ದಿವ್ಯಾ, ಹನುಮಮತಪ್ಪ, ಗಣೇಶ್,ಅಂಜಿನಪ್ಪ,ಫಾರ್ಮಾಸಿಸ್ಟ್ ವರವೇಶ್, ಆಶಾ ಕಾರ್ಯಕರ್ತೆ ಅಂಜಿನಮ್ಮ,ವಿನೋದ,ಸಾವಿತ್ರಮ್ಮ,ರೇಣುಕಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here