ಗದ್ದೆಯಿಂದ ಊಟದ ತಟ್ಟೆಯವರೆಗೆ ಆಹಾರ ಸುರಕ್ಷತೆ ಕಾಪಾಡಿ:ಡಾ. ಶ್ರೀಧರ್ ಎಸ್ ಆರ್

0
762

ಸಂಡೂರು: 7: ಜೂ: ಗದ್ದೆಯಿಂದ ಊಟದ ತಟ್ಟೆಯವರೆಗೆ ಆಹಾರ ಸುರಕ್ಷತೆ ಕಾಪಾಡಿ : ಡಾ.ಶ್ರೀಧರ್ ಎಸ್.ಆರ್, ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಸಲಹೆ ನೀಡಿದರು,
ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ವಿಶ್ವ ಆಹಾರ ಸುರಕ್ಷತಾ ದಿನ-2022 ರ ಆಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಡಬ್ಲ್ಯೂ. ಹೆಚ್.ಓ ಸಂಸ್ಥೆಯ ಎಸ್.ಎಮ್.ಓ ಡಾ. ಶ್ರೀಧರ್ ಎಸ್.ಆರ್ ಅವರು ಮಾತನಾಡಿ ಆಹಾರ ಔಷಧಿ ಇದ್ದಹಾಗೆ ಶುದ್ಧ ಆಹಾರ ಸೇವಿಸುವುದು ಮುಖ್ಯ ಎಂದು ತಿಳಿಸಿದರು, ಹಾಗೇ 2023 ರೊಳಗೆ ಮಿಜಲ್ಸ್ ಮತ್ತು ರುಬೆಲ್ಲಾ ಕಾಯಿಲೆಗಳ ನಿರ್ಮೂಲನೆಯ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಿದರು, ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕದ ಡಿ.ಎಫ್.ಐ.ಟಿ ಸಂಸ್ಥೆಯ ಕೋ ಆರ್ಡಿನೇಟರ್ ಸುಧಾಕರ್ ಅವರು ಹಾಜರಿದ್ದರು,

ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಂದು ಇಡೀ ವಿಶ್ವವೇ ಆರೋಗ್ಯ ಸುರಕ್ಷತಾ ದಿನವನ್ನಾಗಿ ಆಚರಿಸಿ ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, “ಆಹಾರ ಪದಾರ್ಥ ಮಾತ್ರವಲ್ಲ ಆಹಾರ ಔಷಧ”ವೂ ಹೌದು ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಶುದ್ಧವಾದ ಆಹಾರ ಸೇವಿಸುವವನಿಗೆ ರೋಗಗಳು ಬರುವುದಿಲ್ಲ, ಆಹಾರದ ಸುರಕ್ಷತೆಗೆ “ಪಂಚ ಸೂತ್ರಗಳ”ನ್ನು ಪಾಲನೆ ಮಾಡಬೇಕು, ಆಹಾರ ಪದಾರ್ಥಗಳನ್ನು ತಯಾರಿಸಲು ಕಚ್ಚಾ ಪದಾರ್ಥಗಳನ್ನು ಬಳಸುವುದು, ಸ್ವಚ್ಛವಾಗಿ ತೊಳೆದು ಆಹಾರ ತಯಾರಿಸುವುದು, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೇಯಿಸದೇ ಬಿಡಿ ಬಿಡಿಯಾಗಿ ತಯಾರಿಸುವುದು, ಆಹಾರ ತಯಾರಿಸಲು ಶುದ್ದ ನೀರನ್ನು ಬಳಸುವುದು,ತಯಾರಿಸಿದ ಆಹಾರ ಸುರಕ್ಷಿತ ಸಮಯದೊಳಗೆ ಸೇವಿಸುವು ಸೂತ್ರಗಳನ್ನು ಅಳವಡಿಸಿಕೊಳ್ಳ ಬೇಕು, ಬಣ್ಣಗಳನ್ನು ಬಳಸುವುದು, ಪ್ಲಾಸ್ಟಿಕ್ ಕವರ್ ನಲ್ಲಿ ಅಹಾರ ಬಳಸುವುದು, ದಿನಗಟ್ಟಲೆ ಫ್ರಿಡ್ಜ್ ನಲ್ಲಿ ಅಹಾರ ಶೇಕರಿಸಿಡುವುದನ್ನು ಮಾಡಬಾರದು, ಆಹಾರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸ ಬೇಕು, ಸಾರವರ್ಧಕ ಅಹಾರ ಪದಾರ್ಥಗಳನ್ನು ಸೂಕ್ಷ್ಮವಾಗಿ ಬಳಸುವಂತೆ ಮಾಹಿತಿಯನ್ನು ನೀಡಿದರು,

ಈ ಸಂದರ್ಭದಲ್ಲಿ ಜಿಲ್ಲೆಯಿಂದ ಅಗಮಿಸಿದ ಡಬ್ಲ್ಯೂ. ಹೆಚ್.ಓ ಸಂಸ್ಥೆಯ ಎಸ್.ಎಮ್.ಓ ಡಾ.ಶ್ರೀಧರ್ ಎಸ್.ಆರ್, ಡಿ.ಎಫ್.ಐ.ಟಿ ಕೋ ಆರ್ಡಿನೇಟರ್ ಶ್ರೀ ಸುಧಾಕರ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ನೆತ್ರಾಧಿಕಾರಿ ಈಶ್ವರಪ್ಪ, ಹಿ.ಆ.ನಿರೀಕ್ಷಕ ಶಕೀಲ್ ಅಹಮದ್, ಅಶೋಕ್, ಆಶಾ ಪೆಸಿಲಿಟೇಟರ್ ಬಸಮ್ಮ, ಆಶಾ ಕಾರ್ಯಕರ್ತೆ ನೀಲಮ್ಮ, ವಿಜಯಲಕ್ಷ್ಮಿ, ಮಾಂತಮ್ಮ, ಶ್ರೀದೇವಿ, ಎರ್ರಮ್ಮ, ಸುಮಂಗಳಾ, ಶಾಂತಮ್ಮ, ಲಕ್ಷ್ಮಿ, ಮಂಗಳಾ, ಮಂಜುಳಾ, ಭಾರತಿ,ಹನುಮಂತಮ್ಮ, ಹಂಪಮ್ಮ, ದೇವಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here