ಯರ್ರಯ್ಯನಹಳ್ಳಿ ಗ್ರಾಮದಲ್ಲಿ 206 ಜನ ದಾಖಲೆ ನಿರ್ಮಿಸಿದ್ದಾರೆ ಯಾಕೆ ಗೊತ್ತ..!!

0
717

ಸಂಡೂರು:ಸೆ:06:- ಸಂಡೂರು ತಾಲೂಕಿನ ಚೋರುನೂರು ಹೋಬಳಿಯ ಯರ್ರಯ್ಯನಹಳ್ಳಿ ಗ್ರಾಮದಲ್ಲಿ 206 ಜನ ಫಲಾನುಭವಿಗಳು ಕೋವಿಡ್ ಲಸಿಕೆ ಪಡೆದು
ದಾಖಲೆ ನಿರ್ಮಿಸಿದರು,
ಗ್ರಾಮದ ಜನರಿಗೆ ಕೋವಿಡ್ ಲಸಿಕೆಯ ಮೇಲೆ ಇದ್ದ ಭಯವನ್ನು ಹೋಗಲಾಡಿಸಿ ಲಸಿಕೆಯ ಮಹತ್ವವನ್ನು ತಿಳಿಸಿ ಎಲ್ಲರ ಮನವೊಲಿಸಲಾಗಿತ್ತು,

ಅದರ ಫಲವಾಗಿ ಇಂದು ಯರ್ರಯ್ಯನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಬೆಳಿಗ್ಗೆ 9:00 ಗಂಟೆಗೆ ಲಸಿಕಾ ಕೇಂದ್ರ ಸಿದ್ದಪಡಿಸಿದ್ದರು, ಗ್ರಾಮದ ಜನತೆ ದಾಖಲೆ ಮಟ್ಟದ ಸುಮಾರು 206 ಜನರು ಬಂದು ಲಸಿಕೆಯನ್ನು ಪಡೆದರು, ಸಹಕಾರನೀಡಿದ ಗ್ರಾಮದ ಜನತೆಗೆ, ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಮತ್ತೆ ಲಸಿಕೆ ಬರಲಿದೆ ಇದೇರೀತಿ ನಿಮ್ಮ ಸಹಕಾರ ಇರಲಿ ಎಂದು ಕೇಂದ್ರದ ಸಮುದಾಯ ಆರೋಗ್ಯ ಅರೋಗ್ಯಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು

ಈ ಸಂಧರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಗುಲ್ಜಾರ್ ಬೇಗಂ, ಆಶಾ ಕಾರ್ಯಕರ್ತೆಯರಾದ ತಿಪ್ಪಮ್ಮ, ಪವಿತ್ರ, ಅಂಗನವಾಡಿ ಕಾರ್ಯಕರ್ತೆ ಅಂಜಿನಮ್ಮ ಮತ್ತು ಗ್ರಾಮದ ತಳವಾರ ನಾಗೇಂದ್ರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here