ತೋರಣಗಲ್ಲು ಗ್ರಾಮದಲ್ಲಿ “ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ”

0
788

ಸಂಡೂರು:ಮೇ:28:- ತಾಲೂಕಿನ ತೋರಣಗಲ್ಲು ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಇಂದು ” ವಿಶ್ವ ಋತುಚಕ್ರ ನೈರ್ಮಲ್ಯ ದಿನ-2022″ ರ ಅಂಗವಾಗಿ ಹದಿಹರೆಯದವರಿಗೆ ಋತುಚಕ್ರ ಮತ್ತು ವೈಯುಕ್ತಿಕ ಶುಚಿತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಡೀ ವಿಶ್ವ ಇಂದು ಋತುಚಕ್ರ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದೆ, ಕಿಶೋರಾವಸ್ಥೆಯಲ್ಲಿ ಋತುಚಕ್ರದ ಶುಚಿತ್ವದ ಬಗ್ಗೆ ಅರಿವು ಮೂಡಿಸಿದಲ್ಲಿ ಋತುಚಕ್ರದ ಭಯ ಹೋಗಲಾಡಿಸಿ, ಸ್ವಾಭಾವಿಕ ಪ್ರಕ್ರಿಯೆ ಈ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಹೆಣ್ಣು ಗಮನ ಹರಿಸುವುದರಿಂದ ಮುಖ್ಯವಾಗಿ ಜನನಾಂಗ ಮಾರ್ಗದ ಸೋಂಕು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು, ಋತುಸ್ರಾವ ವಾಗುವ ಎರಡು ಮೂರು ದಿನಗಳು ಸ್ಯಾನಿಟರಿ ಪ್ಯಾಡ್ ಅಥವಾ ಸ್ವಚ್ಛವಾದ ಕಾಟನ್ ಬಟ್ಟೆಗಳನ್ನು ಬಳಸುವ ವಿಧಾನ ಮತ್ತು ವಿಲೇವಾರಿ ಮಾಡುವ ಬಗ್ಗೆ ಸಲಹೆಗಳನ್ನು ನೀಡಿದರು,ಸ್ವಚ್ಛವಾಗಿ ಕೈತೊಳೆಯುವುದು, ಆ ಎರಡು ಮೂರು ದಿನಗಳಲ್ಲಿ ಎರಡು ಬಾರಿ ಸ್ವಚ್ಛವಾಗಿ ಸ್ನಾನ ಮಾಡುವುದು, ಸಣ್ಣ ಪುಟ್ಟ ಕಿರಿಕಿರಿ ಗಳನ್ನು ನಿಭಾಯಿಸಲು ಪ್ರಶಾಂತ ಚಿತ್ತದಿಂದ ಧ್ಯಾನ ಮಾಡುವುದು, ಪೌಷ್ಟಿಕಾಹಾರ,ದ್ರವ ಪದಾರ್ಥಗಳ ಆಹಾರ, ಹಣ್ಣುಗಳನ್ನು ಸೇವಿಸುವುದು, ಲವಲವಿಕೆ ಇಂದ ಇರಲು ಕುಟುಂಬದವರೊಂದಿಗೆ ಸಹಜವಾಗಿ ತೊಡಗಿಕೊಳ್ಳುವುದು ಪಾಲಿಸಬೇಕು ಎಂದು ತಿಳಿಸಿದರು, ಈ ಸಮಯದಲ್ಲಿ ತಂದೆ ಮತ್ತು ಅಣ್ಣ ತಮ್ಮಂದಿರು ಆವಳ ಆರೋಗ್ಯದ ಕಡೆ ಕಾಳಜಿ ವಹಿಸುವ ಮೂಲಕ ಹೆಣ್ಣುಮಕ್ಕಳ ಋತುಚಕ್ರ ಸಮಯದಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸ ಬೇಕು ಎಂದು ತಿಳಿಸಿದರು, ಇತ್ತೀಚಿಗೆ ಹತ್ತು ವರ್ಷಕ್ಕೆ ಋತುಚಕ್ರ ಪ್ರಾರಂಭ ವಾಗುತ್ತಿರುವುದು ಮಕ್ಕಳಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಬಹಳ ಇದೆ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು,

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಶೋರಿ ಪಾರ್ವತಿ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ, ಉಚಿತವಾಗಿ ವಿತರಣೆ ಮಾಡುತ್ತಿದ್ದ “ಶುಚಿ” ಸ್ಯಾನಿಟರಿ ಪ್ಯಾಡ್ ಕಳೆದ ವರ್ಷದಿಂದ ಪೂರೈಸುತ್ತಿಲ್ಲ, ಪ್ಯಾಡ್ ಗಳನ್ನು ನಿರಂತರ ವಿತರಣೆ ಮಾಡಲು ಮನವಿ ಮಾಡಿದರು, ಪ್ಯಾಡ್ ಖರೀದಿಸಲು ಆಗುವ ಮುಜಗರ ಹೋಗಲಾಡಿಸಲು ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ,ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾ ಲಭ್ಯ ವಿರುವಂತೆ ಮಾಡಲು ಇಲಾಖೆಗೆ ಮನವಿ ಮಾಡಿದರು,

ಹಾಗೇ, ಹಿರಿಯ ನಾಗರೀಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಕಾಲಕ್ಕೆ ತಕ್ಕ ಹಾಗೆ ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡಿಕೊಳ್ಳಲಾಗಿದೆ, ಈಗಿನ ಮಕ್ಕಳು ತುಂಬ ಚುರುಕಾಗಿದ್ದಾರೆ, ಮೌಡ್ಯತೆಗಳನ್ನು ಮಕ್ಕಳು ಅನುಸರಿಸುತ್ತಿಲ್ಲ, ತುಂಬ ಬದಲಾಗಿದ್ದಾರೆ, ಅವರ ಅರೋಗ್ಯದ ಬಗ್ಗೆ ಕಾಳಜಿ ಇದೆ, ಬಾಲ್ಯ ವಿವಾಹ ವಾಗುವುದನ್ನು ತಡೆಯ ಬೇಕಿದೆ ಎಂದು ತಿಳಿಸಿದರು,
ಅಂಗನವಾಡಿ ಕಾರ್ಯಕರ್ತೆ ಸ್ವಾತಿ ನಿರೂಪಣೆ ಮಾಡಿ ಕಾರ್ಯಕ್ರಮ ನಡೆಸಿಕೊಟ್ಟರು, ಋತುಚಕ್ರ ನೈರ್ಮಲ್ಯ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಿ ವಿತರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅಂಗವಾಡಿ ಕಾರ್ಯಕರ್ತೆ ಸ್ವಾತಿ, ಸಹಾಯಕಿ ಸುಮಾ , ಕುಮಾರಿ ಪಾರ್ವತಿ, ಹಿರಿಯ ಮಹಿಳೆಯರಾದ ದ್ಯಾವಮ್ಮ, ಫಾತಿಮಾ, ಸ.ಹಿ.ಮಾ.ಪ್ರಾಥಮಿಕ ಶಾಲೆಯ ಕಿಶೋರಿಯರಾದ ಅರ್ಪಿತ, ಲಾವಣ್ಯ, ಅರ್ಚನಾ, ಕಾವೇರಿ,ಸ್ವೇತಾ, ಕಾವ್ಯ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here