ದ್ವಿತೀಯ ಪಿಯು ಪರೀಕ್ಷೆ :ಕೊಟ್ಟೂರೇಶ್ವರ ಕಾಲೇಜಿಗೆ ಉತ್ತಮ ಫಲಿತಾಂಶ

0
168

ಕೊಟ್ಟೂರು:ಜೂನ್:22:-2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದುಕೊಂಡಿದೆ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನ ವಿಭಾಗದಲ್ಲಿ ಅರ್ಚನ ಬಿ.ಕೆ. 520, ವಿನಯ್ ಬಿ. 518, ವಾಣಿಜ್ಯ ವಿಭಾಗದಲ್ಲಿ ಕಂಬಿ ಶಿವಾನಿ 558, ಸವಿತ ಸಂಕಳ್ಳಿ 557, ಜಿ. ಸುದೀಪ್ 584, ಕೋಡಿಹಳ್ಳಿ ಕಾವ್ಯ 544, ಪೂಜ ತಂಬ್ರಹಳ್ಳಿ 533, ಎಂ. ಪೂಜ 524, ಆರ್.ಎಂ. ಸಚಿನ್ 523, ಕಡಬಗೇರಿ ಪ್ರವೀಣ ಕುಮಾರ 520 ಅಂಕ ಪಡೆದಿದ್ದಾರೆ.

ಶಿಕ್ಷಣ ವಿಭಾಗದಲ್ಲಿ ಮಾಯಪ್ನರ ಶಿಲ್ಪ 568, ದೀಪ ಕವಾಲಿ 542, ನವೀನಕುಮಾರ ಎಂ.ಕೆ 538, ಕಾಡನಗೌಡರ ಸುದೀಪ 527, ಬಿ ರೇಣುಕ 622, ಜಿ. ಹನುಮೇಶ 513, ಡಿ. ಬಸಂತ್ 516 ಅಂಕ ಪಡೆದುಕೊಂಡಿದ್ದಾರೆ.

ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರೊ. ಶಾಂತಮೂರ್ತಿ ಬಿ ಕುಲಕರ್ಣಿ, ಪದವಿ ಪೂರ್ವ ಪ್ರಾಚಾರ್ಯರಾದ ಪ್ರಶಾಂತ ಕುಮಾರ ಎಂ.ಹೆಚ್. ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಅವರು ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here