ಜನಮೆಚ್ಚಿದ ನಾಯಕ ತುಕಾರಾಮ್ ರವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆ

0
555

ಸಂಡೂರು:ಜೂನ್:26:- ಸಂಡೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ, ಜನಮೆಚ್ಚಿದ ನಾಯಕ, ಸಾಧನೆಗಳ ಸರದಾರ, ಶಾಸಕ ಈ. ತುಕಾರಾಮ್ ರವರಿಗೆ ಇಂದು ಕಾಂಗ್ರೇಸ್ ಪಕ್ಷದ ಮುಖಂಡರಾದ ಕೆ.ನಾಗರಾಜ್, ಹಾಗೂ ಹಾಯ್ ಸಂಡೂರ್ ಪತ್ರಿಕೆಯ ಸಂಪಾದಕ ಕೆ.ಗೋಪಾಲ್, ಮತ್ತು ಬಂಗಾರದ ಗಣಿ ಪತ್ರಿಕೆಯ ಸಂಪಾದಕ ಸಿ. ಅಂಜಿನಪ್ಪ ಅವರುಗಳು ಶಾಸಕರ ನಿವಾಸಕ್ಕೆ ಭೇಟಿ ನೀಡಿ ಶಾಸಕರಿಗೆ ಹೂವಿನ ಹಾರ ಹಾಗೂ ಗುಲಾಬಿ ಹೂ ವನ್ನು ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಹಾರೈಸಿದರು

ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಕೆ.ನಾಗರಾಜ್ ಮಾತನಾಡಿ, ನಮ್ಮ ನೆಚ್ಚಿನ ಶಾಸಕರ ಜನ್ಮ ದಿನವಾದ ಈ ದಿನ ಜನ್ಮದಿನದ ಶುಭಾಶಯಗಳು ಮತ್ತು ಕನಸುಗಳು ನನಸಾಗಲಿ ಎಂದು ನಾನು ಭಾವಿಸುತ್ತೇನೆ.
ಅವರ ಜನ್ಮದಿನದಂದು ಅವರಿಗಾಗಿ ಒಂದು ಹಾರೈಕೆ, ಜೀವನವು ತುಂಬಾ ಚಿಕ್ಕದಾಗಿದೆ ಆದ್ದರಿಂದ ಪ್ರತಿ ಕ್ಷಣವನ್ನು ಆನಂದಿಸಿ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಯಾವಾಗಲೂ ಮುಂದುವರಿಯಿರಿ ಜನ್ಮದಿನದ ಶುಭಾಶಯಗಳು ಎಂದು ತಿಳಿಸಿದರು.

ಹಾಗೇ ಬಂಗಾರದ ಗಣಿ ಪತ್ರಿಕೆಯ ಸಂಪಾದಕ ಅಂಜಿನಪ್ಪ ಚಲವಾಧಿ ಮಾತನಾಡಿ
ಅತ್ಯಂತ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು ಅವರು ನೂರಾರು ವರ್ಷ ಬಾಳಿ ಬದುಕಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು

ಹಾಗೇ ಹಾಯ್ ಸಂಡೂರ್ ಪತ್ರಿಕೆಯ ಸಂಪಾದಕ ಕೆ.ಗೋಪಾಲ್ ಅವರು
ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು
ಆಶೀರ್ವದಿಸಲಿ, ಸುಂದರ ಹೂವು ಸುಗಂಧವನ್ನು ನೀಡಲಿ,ನಾನು ಏನು ನೀಡಲು ಸಾಧ್ಯವಿಲ್ಲ ,ಕೊಡುವವನು ನಿಮಗೆ ದೀರ್ಘ ಜೀವನವನ್ನು ಕೊಡಲಿ

ಈ ದಿನವು ಅಸಂಖ್ಯಾತ ಸಂತೋಷ ಮತ್ತು
ಅಂತ್ಯವಿಲ್ಲದ ಸಂತೋಷವನ್ನು ತಂದು
ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹಾರೈಸಿದರು.

LEAVE A REPLY

Please enter your comment!
Please enter your name here