ಸಿಂಧನೂರು ನಗರದಲ್ಲಿ ವಿನೂತನವಾಗಿ ಕೋರೋನಾ ಜಾಗೃತಿ ಅಭಿಯಾನ

0
99

ಸಿಂಧನೂರಿನಲ್ಲಿ ಕೊರೋನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಬೇತಲ್ ಮಕ್ಕಳ ಮನೆ ಸಹಯೋಗದಲ್ಲಿ ನಗರದಲ್ಲಿ ಜನ ಜಾಗೃತಿ ಅಭಿಯಾನವನ್ನು ವಾಹನವೊಂದಕ್ಕೆ ಧ್ವನಿ ವರ್ಧಕ ಅಳವಡಿಸಿ, ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಸಂತೋಷ್ ಅಂಗಡಿ ಹೇಳಿದರು.

ಈ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಕೊರೊನ ನಿಯಂತ್ರಣ ಮಾಡುವುದು ಪ್ರತಿ ಒಬ್ಬ ನಾಗರಿಕನ ಕರ್ತವ್ಯ , ಮಾಸ್ಕ್ ದರಿಸೋಣ ಹೆಮ್ಮಾರಿ ತಡಿಯೋಣ , ಮನೆಯಲ್ಲೇ ಇದ್ದು ಜಾಗೃತಿ ವಹಿಸೋಣ , ಅನಗತ್ಯ ಓಡಾಟ ಬೇಡ ಎಂದರು.

ಈ ಸಂದರ್ಭದಲ್ಲಿ ಬೆತೇಲ್ ಮಕ್ಕಳ ಮನೆ ಮುಖ್ಯಸ್ಥ ಜೋಸೆಫ್ , ಚಲನಚಿತ್ರ ನಿರ್ದೇಶಕ ಉಮೇಶ್ ಪಾಟೀಲ್ , ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ತಾಲೂಕು ಉಪಾಧ್ಯಕ್ಷ ಸಂತೋಷ್ ಹಿರೇಮಠ್ , ಸಂಘಟನಾ ಕಾರ್ಯದರ್ಶಿ ಮೋಹನ್ ಗೌಡ , ಕಾರ್ಯದರ್ಶಿ ಶ್ರೀಶೈಲ್ ಭಗವತಿ ಇದ್ದರು .

LEAVE A REPLY

Please enter your comment!
Please enter your name here