ವನಸಿರಿ ಮಾಹಿಳಾ ಘಟಕದಿಂದ ವೃಕ್ಷ ಬಂಧನ ಆಚರಣೆ.

0
94

ಸಿಂಧನೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪಿಡಬ್ಲ್ಯೂಡಿ ಕ್ಯಾಂಪ್ ಆವರಣದಲ್ಲಿ ರವಿವಾರ ವನಸಿರಿ ಫೌಂಡೇಶನ್(ರಿ)ರಾಯಚೂರು ವತಿಯಿಂದ ಜಿಲ್ಲಾ ಮತ್ತು ತಾಲೂಕು ಘಟಕದ ಮಹಿಳಾ ಪದಾಧಿಕಾರಿಗಳು ರಕ್ಷಾ ಬಂಧನ ಜೊತೆ ಜೊತೆಗೆ ವೃಕ್ಷ ಬಂಧನ ಆಚರಣೆಯ ಕಾರ್ಯಕ್ರಮದಲ್ಲಿ ಸಸಿಗಳನ್ನು ಹಚ್ಚಿ, ಗಿಡಗಳಿಗೆ ರಕ್ಷೆ ಕಟ್ಟುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಿದರು.

ವೃಕ್ಷ ಬಂಧನ ಕಾರ್ಯಕ್ಕೆ ಆಗಮಿಸಿದ ಮಹಿಳಾ ಘಟಕದ ಪದಾಧಿಕಾರಿಗಳು ರಕ್ಷಾ ಬಂಧನ ಹಬ್ಬದ ಈ ದಿನ ನಮಗೆಲ್ಲ ಶುಭಾಶಯಗಳನ್ನು ತಿಳಿಸಿ, ಭಾರತೀಯ ಪರಂಪರೆಯ ರಕ್ಷಾ ಬಂಧನದಂದು ವನಸಿರಿ ಸಹೋದರಿಯರು ಸಂಭ್ರಮದಿಂದ ಸಹೋದರರಿಗೆ ರಕ್ಷೆ ಕಟ್ಟುವುದರ ಜೊತೆ‌ ನಮ್ಮ ಪರಿಸರ ಉಳಿವಿಗಾಗಿ ಸಸಿಗಳನ್ನು ನೆಟ್ಟು ಪೋಷಿಸುವುದು ನಮ್ಮ ಜವಾಬ್ದಾರಿ ಎಂದು ಸಂಕಲ್ಪ ಮಾಡಿದ್ದಾರೆ, ಸಸಿಗಳಿಗೆ ರಕ್ಷೆ ಕಟ್ಟಿ ವಿನೂತನವಾಗಿ ಪ್ರತಿಯೊಬ್ಬರು ಇದೇ ರೀತಿ ಈ ವೃಕ್ಷ ಬಂಧನ ಆಚರಣೆ ಮಾಡಬೇಕು ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ ಹೇಳಿದರು

ಈ ಸಂದರ್ಭದಲ್ಲಿ ಶಿವರಾಜ್ ಪ್ರಾಂಶುಪಾಲರು, ಈರೇಶ್ ಇಲ್ಲೂರ್ ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ ಮತ್ತು ಮಾನವ ಸಂಪನ್ಮೂಲ ಸಂಘದ ನಿರ್ದೇಶಕರು, ಶಂಕರಗೌಡ ಎಲೇಕೂಡ್ಲಿಗಿ ರಾಜ್ಯ ಗೌರವ ಅಧ್ಯಕ್ಷ,ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ, ಮಹಿಳಾ ಘಟಕ ಅಧ್ಯಕ್ಷ ಸಂಗೀತ ಸಾರಂಗಮಠ,ರಮೇಶ್ ಕುನ್ನಟಗಿ, ದುರ್ಗಪ್ಪ ಗುಡದೂರು, ಶಂಕರ್ ದೇವರು ಹಿರೇಮಠ,ಹನೀಪ್, ವಿರೇಶ್ ಬಾವಿಮನಿ ಕರವೇ ತಾಲೂಕು ಅಧ್ಯಕ್ಷರು. ಮಾಂತೇಶ ವನಸಿರಿ ಸದಸ್ಯ . ವಿಜಯಲಕ್ಷ್ಮಿ ಸಾಸಲಮಾರಿ, ಸುಜಾತಾ ಶ್ರೀನಿವಾಸ್, ಅಕ್ಷತಾ. ಸದ್ದಾಮ್, ಚಂದ್ರು ಪವಾಡ ಶೆಟ್ಟಿ, ವನಸಿರಿ ಜಿಲ್ಲಾ ಉಪಾಧ್ಯಕ್ಷ ಬುದೇಶ ಮರಾಠಿ, ರುದ್ರಗೌಡ. ವೀರಬಾಬು,ಸರ್ವ ವನಸಿರಿ ಫೌಂಡೇಶನ್ ಮಹಿಳಾ ಜಿಲ್ಲಾ ಮತ್ತು ತಾಲೂಕ ಘಟಕ ಮತ್ತು ಸರಕಾರಿ ಪದವಿಪೂರ್ವ ಕಾಲೇಜ್ ಶಿಕ್ಷಕರು ಮತ್ತು ಪರಿಸರ ಪ್ರೇಮಿಗಳ ಬಾಗಿ ಆಗಿದ್ದರು.

ವರದಿ:ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here