ಎನ್ಎಂಡಿಸಿ ನೇಮಕಾತಿಯಲ್ಲಿ ಬಾರಿ ಹಗರಣ.

0
356

ಸಂಡೂರು:ಜುಲೈ:20:- ಸ್ಥಳೀಯ ಎನ್ ಎಂ ಡಿಸಿ ನೇಮಕಾತಿಯಲ್ಲಿ ಬಾರೀ ಪ್ರಮಾಣದ ಹಗರಣ ನಡೆದಿದ್ದು ಪಿಎಸ್ಐ ಹಗರಣದ ತರುವಾಯ ಇದು ಎರಡನೇ ದೊಡ್ಡ ಹಗರಣವಾಗಿದೆ ಎಂದು ಸಂಡೂರು ಶಾಸಕ ಈ. ತುಕಾರಾಮ್ ಆರೋಪಿಸಿದರು

ಅವರು ಪಟ್ಟಣದಲ್ಲಿರುವ ಓ ಮೇಘಾ ಚರ್ಚನ 25ನೇ ವರ್ಷದ ಕಾರ್ಯಕ್ರಮದಲ್ಲಿ ಬಾಗವಹಿಸಿ,ಚರ್ಚ್ ಜೀರ್ಣೋದ್ಧಾರಕ್ಕೆ 33.ಲಕ್ಷ ರೂ ಗಳ ಅನುದಾನವನ್ನು ನೀಡುತ್ತೇನೆ ಎಂದು ಮಾತನಾಡುತ್ತ ಎನ್ಎಂಡಿಸಿ ಕಂಪನಿಯು ವರ್ಷಕ್ಕೆ 1.40 ಕೋಟಿ ಟನ್ ಅದಿರು ಉತ್ಪಾದನೆ ನಡೆಸುತ್ತಿದೆ. ಎಂಎಂಡಿಆರ್ ಕಾಯ್ದೆ ಪ್ರಕಾರ ಅದೇ ವಿಧಾನಸಭಾ ಕ್ಷೇತ್ರದಲ್ಲಿರುವ ಅದೇ ತಾಲೂಕಿನ ಸ್ಥಳೀಯ ಜನತೆಗೆ ಉದ್ಯೋಗ ನೀಡಲು ಮೊದಲ ಆದ್ಯತೆ ನೀಡಬೇಕು. ಸಿ ಅಂಡ್ ಡಿ ಪ್ರಕಾರ ಶೇ.70 ಉದ್ಯೋಗವನ್ನು ಸ್ಥಳೀಯರಿಗೆ ಕೊಡಬೇಕು. ಬೆಂಗಳೂರಿನಲ್ಲಿಯೇ ಎನ್ಎಂಡಿಸಿ ನೇಮಕಾತಿಯ 2021ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಜತೆಗೆ ಅದೇ ಪತ್ರಿಕೆಯನ್ನು 2022 ರಲ್ಲಿ ನಡೆದ ಪರೀಕ್ಷೆಯಲ್ಲಿ ಹಳೆಯ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಒಎಂಆರ್ ಶೀಟ್ ಕೊಡದೆ ಹಾಲ್ ಟಿಕೆಟ್ ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಈ ಹಗರಣವನ್ನು ತಕ್ಷಣವೇ ರದ್ದುಪಡಿಸಿ ಮರು ಪರೀಕ್ಷೆ ನಡೆಸಿ ಸ್ಥಳೀಯರಿಗೆ ಅಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ನಾನು ಸಂಸ್ಥೆಯ ಮೇಲೆ ಯಾವುದೇ ಸುಳ್ಳು ಆರೋಪಗಳನ್ನು ಮಾಡುತ್ತಿಲ್ಲ ಹಾಗೂ ಗೊಂದಲವನ್ನು ಸೃಷ್ಟಿ ಮಾಡುತ್ತಿಲ್ಲ ಎಲ್ಲಾ ರೀತಿಯ ಸಾಕ್ಷಾಧಾರಗಳನ್ನು ಇಟ್ಟುಕೊಂಡು ನಿಜಾಂಶವನ್ನು ಸಾರ್ವಜನಿಕವಾಗಿ ಚರ್ಚಿಸುತ್ತಿದ್ದೇನೆ ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಎಲ್ ಹೆಚ್ ಶಿವಕುಮಾರ್, ಮುಖಂಡರಾದ ವೆಂಕಟೇಶ್, ಶಿವಲಿಂಗಪ್ಪ, ಸೋಮಪ್ಪ, ಇತರರಿದ್ದರು.

LEAVE A REPLY

Please enter your comment!
Please enter your name here