ಕೊಟ್ಟೂರಿನಲ್ಲಿ ನಾಗರ ಪಂಚಮಿ ಸಂಭ್ರಮ, ನಾಗ ಕಲ್ಲಿಗೆ, ಹುತ್ತಕ್ಕೆ ಹಾಲೆರೆದು ಹಬ್ಬ ಆಚರಣೆ!

0
310

ಕೊಟ್ಟೂರು:ಅ:0೨:- ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ನಾಗಚೌತಿ ಹಬ್ಬವನ್ನು ಜನರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು

ನಾಗರಾಜ ಪ್ರಾಥಮಿಕ ಶಾಲೆಯಲ್ಲಿ ನಾಗರಕಲ್ಲು ಬಹಳ ಮಹಿಮೆ ಉಳ್ಳದ್ದು ಈ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇದ್ದಾರೆ. ಶಾಲೆಗೆ ಈ ನಾಗರಕಲ್ಲೆ ನಿಂದ ನಾಗರಾಜ ಶಾಲೆ ಎಂದು ಹೆಸರು ಬಂದಿದ್ದು ಎಂದು ಭಕ್ತರು ತಿಳಿಸಿದರು.

ಈ ಹಿಂದೆ ಒಬ್ಬ ಭಕ್ತರು ಪತ್ತಿಗುಂಡಿ ಗಣೇಶಪ್ಪನವರು 4ಕೆಜಿ ಬೆಳ್ಳಿ ಮೂರ್ತಿಯನ್ನು ನಾಗರ ಕಲ್ಲಿಗೆ ಅರ್ಪಿಸಿದ್ದು ಇಲ್ಲಿರುವ ನಾಗರ ಕಲ್ಲಿನ ಮಹಿಮೆ ಬಹಳ ಮಹತ್ವದ್ದು ಎಂದು ಇಲ್ಲಿರುವ ಅರಮನೆ ಮಹೇಶ್ ತಿಳಿಸಿದರು.

ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿಯನ್ನು ಬಹುತೇಕರು ಆಚರಣೆ ಮಾಡಿದರು. ಇನ್ನೂ ಕೆಲವರು ನಾಗಚೌತಿಗೆ ಹಾಲನ್ನು ಎರೆಯುದು ವಾಡಿಕೆ ಅದರಂತೆ. ಮಂಗಳವಾರ ಪಟ್ಟಣದ್ಯಂತ ಪಟ್ಟಣದ ಮಧ್ಯಭಾಗದಲ್ಲಿ ಇರುವ ನಾಗರಾಜ ಶಾಲೆಯಲ್ಲಿ ನಾಗರಕಲ್ಲಿಗೆ ಹಾಲೆರೆದು ಹಬ್ಬವನ್ನು ಆಚರಿಸಿದರು.

ಬೆಳಿಗ್ಗೆಯೇ ಎದ್ದು ಮಹಿಳೆಯರು ಬ್ರಾಹ್ಮಿಮುಹೂರ್ತದಲ್ಲಿ ಮನೆಯಂಗಳಕ್ಕೆ ಸಗಣಿಯಿಂದ ಸಾರಸಿ ವಿವಿಧ ಬಗೆಯ ಬಣ್ಣದಿಂದ ನಾಗರ ಹಾವಿನ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದರು.

ಮನೆ ಮಂದಿಯಲ್ಲ ಹೊಸ ಬಟ್ಟೆ ತೊಟ್ಟು ನಾಗರಾಜ ಶಾಲೆಯ ನಾಗಪ್ಪನ ದೇವಸ್ಥಾನಕ್ಕೆ ತೆರಳಿ ನಾಗರ ಕಲ್ಲಿಗೆ ಹಾಲೆರೆದು ಹತ್ತಿಯಿಂದ ತಯಾರಿಸಿದ ಗಜ ವಸ್ತ್ರವನ್ನು ನಾಗರಕಲ್ಲಿಗೆ ಹಾಕಿ ಹೂವು ಪತ್ರಿಗಳೊಂದಿಗೆ ಪೂಜೆ ಮಾಡಿ ವಿಳ್ಳೇದೆಲೆಯಲ್ಲಿ ಹಸಿಟ್ಟು.ಚಿಗಳಿಯನ್ನಿಟ್ಟು. ದಕ್ಷಿಣವನ್ನಿಟ್ಟು. ಮಂಗಳಾರತಿ ಮಾಡಿ ಹಾಲು ಎರೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕೊಟ್ಟೂರು ನಾಗರಾಜ ಶಾಲೆಯಲ್ಲಿ ಇರುವ ಹಳೆಗನ್ನಡ ಶಾಸನವು ದಶಕಗಳ ಕಾಲದಿಂದಲೂ ಇರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬೆಳಕಿಗೆ ತರುವಂತೆ ಇಲ್ಲಿರುವ ಪ್ರಮುಖ ಮುಖಂಡರು ಆಶಯ ವ್ಯಕ್ತಪಡಿಸಿದರು.

ನಂತರ ಶ್ರೀ ಗುರು ನಾಗರಾಜ ಭಜನಾ ಸಂಘ ಕೋರ್ಕಣ ಸಂಘದ ವರು ಪ್ರತಿ ವರ್ಷದಂತೆ ನಾಗರಪಂಚಮಿಯ ದಿನದಂದು 24 ಗಂಟೆಗಳ ಕಾಲ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ . ಬಹಳ ವರ್ಷಗಳಿಂದಲೂ ನಡೆದ ಬಂದ ಪದ್ದತಿಯ ಪ್ರಕಾರ ಎಲ್ಲಾ ಭಜನಾ ಸಂಘದವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಈ ಸಂದರ್ಭದಲ್ಲಿ ಅರಮನೆ ಮಹೇಶ್. ಚಿಗಟೇರಿ ಕೊಟ್ರೇಶ್. ರೇವಣ್ಣ. ಚನ್ನಪ್ಪ. ಸಂತೋಷ್. ಪ್ರಮುಖ ಮುಖಂಡರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here