ಬಣವಿಕಲ್ಲು ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ

0
317

ಕೂಡ್ಲಿಗಿ: ಆಗಸ್ಟ್-5 ಇಂದು ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿಐಟಿಯು ಗ್ರಾಮ ಘಟಕವನ್ನು ಕೂಡ್ಲಿಗಿ ವಕೀಲರಾದ ವಿರೂಪಾಕ್ಷಪ್ಪ ಇವರು ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿದರು
ನಂತರ ಸಂಘಟನೆಯ ಕುರಿತಾಗಿ ಸಂಘದ ನಿಯಮಗಳನ್ನು ಹಾಗೂ ಕಟ್ಟಡ ಕಾರ್ಮಿಕರ ಸರ್ಕಾರದ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೆ ತಿಳಿಸಿ ಹೇಳಿದರು ಹಾಗೂ

ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ. ಅವುಗಳನ್ನು ಸಮರ್ಪಕವಾಗಿ ಜಾರಿಯಾಗಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಕೆಲ ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ, ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಹುಟ್ಟುಹಾಕಬೇಕೆಂದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕ್ ಅಧ್ಯಕ್ಷರಾದ ಎಂ.ಬಿ.ಅಯ್ಯನಳ್ಳಿ ಕರಿಯಪ್ಪ, ಮರಳು ಸಿದ್ದಪ್ಪಾಚಾರಿ, ಸಹಕಾರದರ್ಶಿ ಹಾಗೂ ಬಿ.ಸುರೇಶ್, ಹುಲೆಪ್ಪ ತಾಲೂಕು ಉಪಾಧ್ಯಕ್ಷರು, ಕೊಟ್ರೇಶ್ ಸೇರಿದಂತೆ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕರ ಗ್ರಾಮ ಘಟಕದ ಪದಾಧಿಕಾರಿಗಳನು ಆಯ್ಕೆ ಮಾಡಲಾಯಿತು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here